ಬಿಗ್ ಬಾಸ್ ಮನೆಗೆ ಬಂದಾಗಿನಿಂದ ರೆಸ್ಪೆಕ್ಟ್.. ರೆಸ್ಪೆಕ್ಟ್ ವಿಚಾರದಲ್ಲಿ ಹೆಚ್ಚು ಸದ್ದು ಮಾಡಿದ್ದ ಅಶ್ವಿನಿ ಫಿನಾಲೆ ವೇದಿಕೆಯಿಂದ ಹೊರಗೆ ಬಂದಿದ್ದಾರೆ. ಫಸ್ಟ್ ರನ್ನರ್ ಅಪ್ ಆದ್ರೂ ಆಗೇ ಆಗ್ತಾರೆ ಅಂದುಕೊಳ್ಳುತ್ತಿರುವಾಗಲೇ ಎರಡನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ.
ಅಶ್ವಿನಿ ಅವರಿಗೆ ಬಿಗ್ ಬಾಸ್ ಕಡೆಯಿಂದ ಒಂದಷ್ಟು ಬಹುಮಾನ ಸಿಕ್ಕಿದೆ. ವಾಕ್ ಮೇಟ್ ಫುಟ್ ವೇರ್ ಕಡೆಯಿಂದ 7 ಲಕ್ಷ, ಇಕೋ ಪ್ಲಾನೆಟ್ ವತಿಯಿಂದ 2 ಲಕ್ಷ, ಶ್ರೀಕೃಷ್ಣ ಹಳ್ಳಿ ತುಪ್ಪ ಕಡೆಯಿಂದ 5 ಲಕ್ಷ ಬಹುಮಾನ ಸಿಕ್ಕಿದ್ದು ಒಟ್ಟು 14 ಲಕ್ಷ ಹಣ ಬಹುಮಾನವಾಗಿ ಸಿಕ್ಕಿದೆ.
ವೇದಿಕೆ ಮೇಲಿಂದ ಕೆಳಗೆ ಬರುವಾಗ ಅಶ್ವಿನಜ ಅವರು ರಕ್ಷಿತಾಗೆ ಮತ್ತೊಮ್ಮೆ ಕ್ಷಮೆ ಕೇಳಿ, ಗಿಲ್ಲಿಯನ್ನ ಮಾವನ ಮಗ ಎಂದು ರೇಗಿಸಿದರು. ಆರಂಭದಿಂದಾನೂ ಅಶ್ವಿನಿ ಅವರನ್ನ ಸಿಕ್ಕಾಪಟ್ಟೆ ಗೇಲಿ ಮಾಡಿದ್ದೆ ಗಿಲ್ಲಿ ನಟ. ವಾದ ವಿವಾದಕ್ಕೆ ಇಳಿದರೆ ದೊಡ್ಡ ದೊಡ್ಡ ಮಾತುಗಳು ಮನೆಯಲ್ಲಿ ಬರ್ತಾ ಇದ್ವು. ಇದೀಗ ಬಿಗ್ ಬಾಸ್ ಮುಗಿದಿದ್ದು, ಅಶ್ವಿನಿ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ.
ವೇದಿಕೆ ಮೇಲೆ ಸ್ವಲ್ಪ ಎಮೋಷನಲ್ ಆದಂತ ಅಶ್ವಿನಿ ಅವರು, ಆರ್ಟಿಸ್ಟ್ ಜೀವನ ಒಂದು ಕಡೆ ಹೋರಾಟದ ಜೀವನ ಮತ್ತೊಂದು ಕಡೆ. ನನ್ನ ತಂದೆ ತಾಯಿ ಹೇಳಿಕೊಟ್ಟ ಗುಣಗಳನ್ನೆಲ್ಲ ಅನುಸರಿಸಿದೆ. ವೀಕೆಂಡ್ ನಲ್ಲಿ ನೀವೂ ಬಂದು ಹೇಳಿದಾಗ ನಾನು ತಪ್ಪು ಮಾಡಬಾರದಿತ್ತು ಅಂತ. ಆದರೆ ಇಂದು ಖುಷಿಯಾಗಿ ಹೋಗ್ತೀನಿ ಎಂದಿದ್ದಾರೆ. ಅಶ್ವಿನಿ ಅವರ ಅಭಿಮಾನಿಗಳು ಕೊಂಚ ಬೇಸರವೂ ಆಗಿದ್ದಾರೆ.









