ಚಿತ್ರದುರ್ಗ, ಆಗಸ್ಟ್. 21 : ಮಯೂರ ಬುಕ್ಸ್ ಪ್ರಕಟಿಸಿರುವ ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಡಾ. ಎಸ್.ಎನ್.ಹೇಮಂತರಾಜು ಅವರು ರಚಿಸಿರುವ ‘ನಾನು, ನೀನು ಮತ್ತು ಸ್ಕಿಜೋಫ್ರೇನಿಯಾ’ ಕವನ ಸಂಕಲನ ಲೋಕಾರ್ಪಣೆ ಸಮಾರಂಭವು ಇದೇ ಆಗಸ್ಟ್ 23ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ. ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಶೋಧಕರು ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ. ರಾಜಶೇಖರಪ್ಪ ಅವರು ಕವನ ಸಂಕಲನ ಬಿಡುಗಡೆ ಮಾಡುವರು.
ಸಾಹಿತಿ ಹಾಗೂ ಪ್ರಾಧ್ಯಾಪಕಿ ಡಾ. ತಾರಿಣಿ ಶುಭದಾಯಿನಿ ಹಾಗೂ ಡಿಎಸ್‍ಇಆರ್‍ಟಿ ಜಂಟಿ ನಿರ್ದೇಶಕ ಡಾ.ಜಿ.ವಿ.ಹರಿಪ್ರಸಾದ್, ಶಿವಮೊಗ್ಗ ಓಪನ್ ಮೈಂಡ್ಸ್ ವಲ್ರ್ಡ್ ಸ್ಕೂಲ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಕಿರಣ್ ಕುಮಾರ್ ಅವರು ಕೃತಿ ಕುರಿತು ಮಾತನಾಡಲಿದ್ದಾರೆ. ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ದೊಡ್ಡಪ್ಪ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ ಉಪಸ್ಥಿತರಿರಲಿದ್ದಾರೆ.
ಮಾನಸಿಕ ತುಮಲುಗಳ ಅನಾವರಣ: ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನವು ವ್ಯಕ್ತಿಯ ಅಂತರಂಗ ಮತ್ತು ಸಮಾಜದ ನಡುವಿನ ಸೂಕ್ಷ್ಮ ಸಂಘರ್ಷಗಳನ್ನು ಅನಾವರಣಗೊಳಿಸುವ ಗಂಭೀರ ಕಾವ್ಯ. ಇಲ್ಲಿ ಸ್ಕಿಜೋಫ್ರೇನಿಯ ಕೇವಲ ವೈದ್ಯಕೀಯ ಪರಿಕಲ್ಪನೆಯಾಗಿರದೆ ಆಧುನಿಕ ಮಾನವನ ಮನಸ್ಸಿನ ವಿಭಜನೆ. ಅಸ್ತಿತ್ವದ ಗೊಂದಲ ಮತ್ತು ಸಂಬಂಧಗಳ ಭಂಗುರತೆಯನ್ನು ಸೂಚಿಸುವ ರೂಪಕವಾಗಿದೆ.
ಈ ಕವನ ಸಂಕಲನವು ವ್ಯಕ್ತಿಯ ಒಳಗಿನ ಬಿರುಕುಗಳನ್ನು ಕಾವ್ಯದ ಮೂಲಕ ಅರಿತುಕೊಳ್ಳಲು ಪ್ರಯತ್ನಿಸುವ ಬೌದ್ಧಿಕ ಮತ್ತು ಭಾವನಾತ್ಮಕ ಕೃತಿ. ಅಂತರಂಗದ ಉತ್ಕಟತೆ, ಹೊರಗಿನ ತೀವ್ರತೆಯ ನಡುವಿನ ಅತ್ಯಂತಿಕ ಪಯಣಕ್ಕೆ ಓದುಗನನ್ನು ಕರೆದ್ಯೊಯುವ ಈ ಕವಿತೆಗಳ ಓದು ಒಂದು ಅಪ್ಪಟ ಕಾವ್ಯಾನುಭವ.
ಬಹುಮುಖ ಪ್ರತಿಭೆಯ ಕವಿ: ಡಾ.ಎಸ್.ಎನ್.ಹೇಮಂತರಾಜು ಅವರು ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಗುಂಡೀಮಡು ಗ್ರಾಮದವರು. ಪದವಿಯಲ್ಲಿ ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯ ಎರಡನ್ನೂ ಐಚ್ಛಿಕವಾಗಿ ಅಧ್ಯಯನ ಮಾಡಿದ್ದಾರೆ. ಇಂಗ್ಲೀಷ್ ಸಾಹಿತ್ಯ, ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಫಿಲ್ ಹಾಗೂ ಇಂಗ್ಲಿಷ್ ಭಾಷಾ ಬೋಧನೆಯಲ್ಲಿ ಪಿಎಚ್.ಡಿ ಪಡೆದಿದ್ದಾರೆ.
ಡಾ.ಎಸ್.ಎನ್. ಹೇಮಂತ್ ರಾಜ್ ಅವರು ನಮ್ಮ ನಡುವಿನ ಬಹಳ ಒಳ್ಳೆಯ ಸದೃಹಯಿ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಅಮೂಲಾಗ್ರವಾಗಿ, ಶಿಸ್ತುಬದ್ಧವಾಗಿ ಓದಿಕೊಂಡಿರುವ ಹೇಮಂತರಾಜ್ ಅವರು ತನ್ನ ಕವಿತೆಗಳಿಗೆ ಈಗಾಗಲೇ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ.
1996ರಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜು ನಡೆಸುವ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದು ಆವೊತ್ತಿಗೆ ಕವಿಪಟ್ಟ ಅಲಂಕರಿಸಿ ಈ ನೆಲದ ಸಾಹಿತ್ಯಿಕ ಹಿರಿಮೆ ಎತ್ತಿ ಹಿಡಿದ ನಮ್ಮ ಸಹೋದ್ಯೋಗಿ ಎಂಬುವುದು ಹೆಮ್ಮೆಯ ಸಂಗತಿ. 2000ನೇ ಇಸವಿಯಲ್ಲಿ ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಡಾ.ದ.ರಾ ಬೇಂದ್ರೆ ಸ್ಮಾರಕ ದತ್ತಿನಿಧಿ ಬಹುಮಾನ ಪಡೆದಿದ್ದಾರೆ. ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ಕಥೆ, ಕವನ ಹಾಗೂ ಅಂಕಣ ಬರಹಗಳೂ ಪ್ರಕಟವಾಗಿವೆ.
1996ರಲ್ಲಿ ಬೆಂಗಳೂರಿನ ಕ್ರೈಸ್ಟ್ ಕಾಲೇಜು ನಡೆಸುವ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದು ಆವೊತ್ತಿಗೆ ಕವಿಪಟ್ಟ ಅಲಂಕರಿಸಿ ಈ ನೆಲದ ಸಾಹಿತ್ಯಿಕ ಹಿರಿಮೆ ಎತ್ತಿ ಹಿಡಿದ ನಮ್ಮ ಸಹೋದ್ಯೋಗಿ ಎಂಬುವುದು ಹೆಮ್ಮೆಯ ಸಂಗತಿ. 2000ನೇ ಇಸವಿಯಲ್ಲಿ ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಡಾ.ದ.ರಾ ಬೇಂದ್ರೆ ಸ್ಮಾರಕ ದತ್ತಿನಿಧಿ ಬಹುಮಾನ ಪಡೆದಿದ್ದಾರೆ. ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ಕಥೆ, ಕವನ ಹಾಗೂ ಅಂಕಣ ಬರಹಗಳೂ ಪ್ರಕಟವಾಗಿವೆ.
ಹೇಮಂತರಾಜ್ ಅವರ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ ಸಮಾರಂಭವನ್ನು ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹೋದ್ಯೋಗಿಗಳೆಲ್ಲರೂ ತುಂಬಾ ಕಾತುರದಿಂದ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದೇವೆ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ.







