ಈಶ್ವರ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ನಿಧನ : ದುಃಖದಲ್ಲಿ ಕುಟುಂಬ ಹೇಳಿದ್ದೇನು..?

1 Min Read

ಬೀದರ್: ಶಾತಯುಷಿ, ಸ್ವಾತಂತ್ರ್ಯ ಹೋರಾಟಗಾರ‌, ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶರಾಗಿದ್ದಾರೆ. ಬೀದರ್ ಜಿಲ್ಲೆಯ ಬಾಲ್ಕಿ ಪಟ್ಟಣದ ಸ್ವಗೃಹದಲ್ಲಿ ಲೋಕನಾಯಕ ಭೀಮಣ್ಣ ಖಂಡ್ರೆ ಕೊನೆಯುಸಿರೆಳೆದಿದ್ದಾರೆ. ತಮ್ಮ 103ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ಮಗ ಈಶ್ವರ ಖಂಡ್ರೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಭೀಮಣ್ಣ ಖಂಡ್ರೆ ಅವರು ನಿನ್ನೆ ರಾತ್ರಿ 10.50ಕ್ಕೆ ನಿಧನರಾಗಿದ್ದಾರೆ. ಸುಮಾರು 15 ದಿನದಿಂದ ಅವರು ಅನಾರೋಗ್ಯದಿಂದ ಬಳಲುತ್ತಾ ಇದ್ದರು. ಅವರನ್ನ ನಾಲ್ಕೈದು ದಿನದ ಕೆಳಗೆ ಮನೆಗೆ ಕರೆದುಕೊಂಡು ಬಂದಿದ್ದೆವು. ಮನೆಯಲ್ಲಿ ಚೇತರಿಸಿಕೊಂಡರು. ವಯೋಸಹಜ ಕಾಯಿಲೆಯಿಂದ ಅವರು ನಿಧನರಾಗಿದ್ದಾರೆ. ಇದು ಅತ್ಯಂತ ದುಃಖದ ಸಂಗತಿ. ಇವತ್ತು ಅವರು ಸಾರ್ಥಕವಾದ ಬದುಕನ್ನ ಬದುಕಿದ್ದಾರೆ. ನಮ್ಮೆಲ್ಲರಿಗೂ ಒಂದು ಆದರ್ಶದಾಯಕ ಬದುಕನ್ನ ಕೊಟ್ಟಿದ್ದಾರೆ. ಅವರು ಜನರಿಗಾಗಿ, ಈ ಭಾಗದ ಏಳ್ಗೆಗಾಗಿ ಹೋರಾಟ ಮಾಡಿದ್ದಾರೆ.

ರೈತರಿಗಾಗಿ ಹೋರಾಟ ಮಾಡಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿರುವವರು, ರಾಜಕೀಯ ಅಂದ್ರೆ ಸಮಾಜ ಸೇವೆ ಎಂದುಕೊಂಡಿದ್ದವರು. 102 ವರ್ಷದಲ್ಲಿ, ಸುಮಾರು 92 ವರ್ಷಗಳವರೆಗೂ ಸಕ್ರಿಯವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ಶಾಸಕರಾಗಿ, ಸಚಿವರಾಗಿ ಇವತ್ತು ಈ ಭಾಗದ ಏಳಿಗೆಗಾಗಿ ದುಡಿದಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿ ಕೆಲಸ ಮಾಡಿದ್ದಾರೆ. ಅವರ ಆದರ್ಶಗಳು, ತತ್ವ ಸಿದ್ಧಾಂತಗಳು ಯಾವತ್ತಿಗೂ ಪ್ರಸ್ತುತವಾಗಿದ್ದಾವೆ. ಸಮಾಜದಲ್ಲಿ ಸಾಮರಸ್ಯ ಇರಬೇಕು ಅಂತ ಸರ್ವ ಧರ್ಮ ಸಮನ್ವಯ ಅನ್ನುವಂತ ರೀತಿಯಲ್ಲಿ ಕರ್ನಾಟಕ ಶಾಂತಿಯ ತೋಟ ಎಂಬಂತೆ ಹೇಳುತ್ತಿದ್ದವರು. ಹಾಗಾಗಿಯೇ ಎಲ್ಲಾ‌ ಸಮುದಾಯದವರನ್ನು ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದವರು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

Share This Article
Enable Notifications OK No thanks