Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಚಂದ್ರವಳ್ಳಿಯಲ್ಲಿ ಪ್ರಾಗೈತಿಹಾಸಿಕ ವರ್ಣ ಚಿತ್ರ ಪತ್ತೆ

---Advertisement---

ಸುದ್ದಿಒನ್ : ಚಿತ್ರದುರ್ಗ ತಾಲ್ಲೂಕಿನ ಐತಿಹಾಸಿಕ ನೆಲೆಯಾದ ಚಂದ್ರವಳ್ಳಿಯ ನೆರಳಗೊಂಡದಿ ಎಂದು ಕರೆಯುವ ಸ್ಥಳದ ಗುಹಾ ಆಸರೆಯ ಬಳಿ ಬಿಳಿ ವರ್ಣ ಚಿತ್ರಗಳು ಪತ್ತೆಯಾಗಿವೆ.

ಇದು ನೂತನ ಶಿಲಾಯುಗದ ಕಾಲಕ್ಕೆ(Neolithic) ಸೇರಿದ ಕ್ರಿ. ಪೂ. 3000-4000 ಅವಧಿಯ ಚಿತ್ರವಾಗಿದ್ದು, ಇದು ಮನುಷ್ಯಾಕೃತಿಯ ರೇಖಾಚಿತ್ರವಾಗಿದೆ. ಮನುಷ್ಯ ಸರಳ ರೇಖೆಗಳಲ್ಲಿ ಬಿಡಿಸಲಾಗಿದೆ. ಇದನ್ನು ಪುರಾತತ್ವ ಶಾಸ್ತ್ರದಲ್ಲಿ ‘ಆಂಥ್ರೋಪೋಮಾರ್ಫಿಕ್ ಆಕೃತಿ’ ಎಂದು ಕರೆಯುವರು. ಕಡ್ಡಿ ಬಳಸಿ ಬಿಡಿಸಿದ ಸ್ಟಿಗ್ ಫಿಗರ್ ಮಾದರಿಯ ಚಿತ್ರವಾಗಿದೆ. ಕೈಗಳು ಸೊಂಟದ ಬಳಿ ಹರಡಿ ಯಾವುದೋ ಬುಡಕಟ್ಟು ಅಥವಾ ಧಾರ್ಮಿಕ ಆಚರಣೆ (Ritual) ಯಲ್ಲಿ ತೊಡಗಿರುವಂತೆ ಚಿತ್ರಿಸಲಾಗಿದೆ. ಬಿಳಿವರ್ಣಕ್ಕೆ ಸುಣ್ಣದ ಕಲ್ಲು ಮತ್ತು ಪ್ರಾಣಿಗಳ ಕೊಬ್ಬು, ಜೇಡಿಮಣ್ಣಿನ ಮಿಶ್ರಣ ಮಾಡಿ ಬಳಸಿರಬಹುದು ಎಂದು ಅಭಿಪ್ರಾಯ ಪಟ್ಡಿದ್ದಾರೆ.

ಮಯೂರವರ್ಮನ ಚಂದ್ರವಳ್ಳಿ ಶಾಸನದ ಅಧ್ಯಯನಕ್ಕೆ ಡಾ. ಮಹೇಶ್ ಕುಂಚಿಗನಾಳು, ಡಾ. ಕೆ. ಕಣುಮಪ್ಪ, ಪ್ರಭಾಕರ್, ಶರತ್, ಕೈಲಾಸ್ ತೆರಳಿದ್ದಾಗ ಪತ್ತೆ ಮಾಡಲಾಗಿದೆ.

ಮಾಹಿತಿ: ಡಾ. ಮಹೇಶ್ ಕುಂಚಿಗನಾಳು,
ಉಪನ್ಯಾಸಕರು, ಚಿಕ್ಕಗೊಂಡನಹಳ್ಳಿ, ಚಿತ್ರದುರ್ಗ. ಮೊ: 9738573758

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...