Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತುರುವನೂರು ಜಾತ್ರೆ : ಮೌಢ್ಯಾಚರಣೆಗಳಿಗೆ ತಡೆ

---Advertisement---

ಚಿತ್ರದುರ್ಗ. ಜ.07: ಈ ಬಾರಿಯ ತುರುವನೂರು ಮಾರಿ ಜಾತ್ರೆಯಲ್ಲಿ ಬೆತ್ತೆಲ ಸೇವೆ, ಅಸ್ಪೃಶ್ಯತೆ ಆಚರಣೆ, ಒತ್ತಾಯಪೂರ್ವಕವಾಗಿ ದಲಿತ ಸಮುದಾಯದಿಂದ ದಷ್ಟ ಆಚರಣೆ ಮಾಡಿಸುವುದಕ್ಕೆ ತಡೆ ಒಡ್ಡಲಾಗಿದೆ ಎಂದು ಚಿತ್ರದುರ್ಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ನಿರೀಕ್ಷಕರಾದ ಜಯಪ್ಪ ನಾಯಕ ಬಿ.ಎಲ್. ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜ.6 ರಿಂದ ಪ್ರಾರಂಭವಾದ ತುರವನೂರು ಮಾರಿ ಜಾತ್ರೆಯು ಜ.8 ವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಜ.2 ರಂದು ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರ್ ಗೋವಿಂದರಾಜು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಸಭೆ ನಡೆಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ.

ಮಾರಿ ಜಾತ್ರೆಯಲ್ಲಿ ದಲಿತ ಸಮುದಾಯದಿಂದ ದುಷ್ಟಪದ್ದತಿಗಳಾದ ಬೆತ್ತಲೆಸೇವೆ, ಪ್ರಾಣಿಬಲಿ, ಪ್ರತಿ ಬೀದಿಗಳಲ್ಲಿ ಸರಗ ಚಲ್ಲಲು ಒತ್ತಾಯಿಸಿರುವ ಕುರಿತು ದೂರುಗಳು ಕೇಳಿ ಬಂದಿದ್ದವು. ಕರ್ನಾಟಕ ಸಾಮಾಜಿಕ ಮೌಢ್ಯ ನಿಷೇಧ ಕಾಯ್ದೆ-2025 ಪ್ರಕಾರ ಬೆತ್ತಲೆ ಸೇವೆ, ಮಡೆಸ್ನಾನ, ಮಾಟಮಂತ್ರ, ಬರಬಳಿ, ಬೆತ್ತಲೆಸೇವೆ, ಮೈಲಿಗೆ ನೆಪದಲ್ಲಿ ಬಹಿಷ್ಕಾರ ಮಾಡುವುದು ಅಪರಾಧಗಳಾಗಿವೆ. ಗ್ರಾಮಸ್ಥರು ಈ ಅನಿಷ್ಠ ಪದ್ದತಿಗಳನ್ನು ಬಿಟ್ಟು ಸೌಹಾರ್ಧಯುತವಾಗಿ ಜಾತ್ರಾ ಮಹೋತ್ಸವ ನಡೆಸಬೇಕು. ಕಾನೂನು ಬಾಹಿರವಾಗಿ ಸಾಮಾಜಿಕ ಅನಿಷ್ಠ ಪದ್ದತಿಗಳನ್ನು ನಡೆಸುವಂತೆ ತಳ ಸಮುದಾಯದವರಿಗೆ ಒತ್ತಾಯಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ನಿರೀಕ್ಷಕ ಜಯಪ್ಪ ನಾಯಕ.ಬಿ.ಎಲ್ ತಿಳಿಸಿದ್ದಾರೆ.

3 ದಿನ ಪೊಲೀಸ್ ಕಣ್ಗಾವಲು:
ತುರುವನೂರು ಜಾತ್ರೆಯ ನಡೆಯುವ 3 ದಿನಗಳು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆ ವತಿಯಿಂದ ಕಣ್ಗಾವಲು ಇರಿಸಲಾಗಿದೆ. ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಕಾನ್ಸೇಟಬಲ್‌ಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಯಾವುದೇ ಮೌಢ್ಯಾಚರಣೆಗಳು ನಡೆಯದಂತೆ ತಡೆ ಒಡ್ಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now