ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 30 : ಬಾತ್ ರೂಂ ಗ್ಯಾಸ್ ಗೀಜರ್ ಸೋರಿಕೆಯಿಂದ ಉಸಿರುಗಟ್ಟಿ ಯುವತಿ ಸಾವುನಪ್ಪಿರುವ ಘಟನೆ ಇಂದು ನಡೆದಿದೆ.

ನಗರದ ವಿನಾಯಕ ಕಲ್ಯಾಣ ಮಂಟಪದ ಬಳಿ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು ನೂತನ ಎನ್ನುವ 20 ವರ್ಷದ ಯುವತಿ ಉಸಿರುಗಟ್ಟಿ ಸಾವುನಪ್ಪಿದ್ದಾರೆ.
ಸ್ನಾನದ ಕೋಣೆಯ ಬಾಗಿಲು ಕಿಟಕಿ ಎಲ್ಲಾ ಮುಚ್ಚಿದ್ದರಿಂದಾಗಿ ಯುವತಿ ಹೊರ ಬರಲಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ನೂತನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ B.Sc ವ್ಯಾಸಂಗ ಮಾಡುತ್ತಿದ್ದು ಇಂದು ನೀರು ಕಾಯಿಸಲು ಗ್ಯಾಸ್ ಗೀಜರ್ ಆನ್ ಮಾಡಿದ್ದು ಈ ವೇಳೆ ಗೀಜರ್ ನಿಂದ ಗ್ಯಾಸ್ ಸೋರಿಕೆಯಾಗಿದೆ ಹಿನ್ನೆಲೆಯಲ್ಲಿ ಯುವತಿ ತ್ರೀವ್ರ ಅಸ್ವಸ್ತರಾಗಿದ್ದಾರೆ. ಯುವತಿಯನ್ನ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಮಾಡುವಷ್ಟಷ್ಟರಲೇ ಯುವತಿ ಮೃತಪಟ್ಟಿದ್ದಾಳೆ.
ಗ್ಯಾಸ್ ನ ವಾಸನೆಯಿಂದ ಉಸಿರುಗಟ್ಟಿ ತೀವ್ರ ಅಸ್ವಸ್ಥಗೊಂಡು ಸಾವಿಗೀಡಾದ ಮೃತ ಯುವತಿ ಕುಟುಂಬಸ್ಥರು ಮುಗಿಲು ಮುಟ್ಟಿದೆ. ಬಡಾವಣೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
















