Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿ ಶಾಸಕ ಶರಣ್ ಸಲಗಾರ್ ಕೇಸ್ : 99 ಲಕ್ಷ ಎಲ್ಲಿಂದ ತಂದ್ಕೊಟ್ಟ..?

---Advertisement---

ಬಾಗಲಕೋಟೆ: ಬಸವಕಲ್ಯಾಣ ನಗರದ ಬಿಜೆಪಿ ಶಾಸಕ ಶರಣ್ ಸಲಗಾರ್ ಅವರ ಮೇಲೆ ವಂಚನೆ ಆರೋಪ‌ ಕೇಳಿ ಬಂದಿದೆ. ಎಫ್ಐಆರ್ ಕೂಡ ದಾಖಲಾಗಿದ್ದು, 99 ಲಕ್ಷ ಪಡೆದಿದ್ದಾರೆಂದು ದೂರಲಾಗಿದೆ. ಲೆಟರ್ ಹೆಡ್, ಖಾಲಿ ಚೆಕ್ ಕೂಡ ನೀಡಿದ್ದರು. ಈ ಬಗ್ಗೆ ಶಾಸಕ ಶರಣ್ ಸಲಗಾರ್ ಪ್ರತಿಕ್ರಿಯೆ ನೀಡಿದ್ದು, ದೂರು ಕೊಟ್ಟವರಿಗೆ, ಸಾಲ ಕೊಟ್ಟಿದ್ದೀನಿ ಎಂಬುವವರಿಗೆ ಎಲ್ಲಿಂದ ಬಂತು 99 ಲಕ್ಷ ಎಂದೇ ಕೇಳಿದ್ದಾರೆ.

ಸಂಜು ಸುಗುರೆ ಅವರು ಈ ರೀತಿ ಆರೋಪ ಮಾಡಿದ್ದಾರೆ. ಸಂಜು ಸುಗುರೆ ಅವರ ಮನೆಯಲ್ಲಿಯೇ ನನ್ನ ಲೆಟರ್ ಹೆಡ್, ಖಾಲಿ ಚೆಕ್, ಸೈನ್ ಮಾಡಿಕೊಟ್ಟಿದ್ದ ಲೆಟರ್ ಹೆಡ್ ಎಲ್ಲವೂ ಇತ್ತು. ಅವ ಬಾರಿ ವಿಶ್ವಾಸಾರ್ಹ ವ್ಯಕ್ತಿ ಎಂದು ನಂಬಿದ್ದೆ ನನ್ನ ದೊಡ್ಡ ತಪ್ಪಿದೆ. ಅವ ಬಡ್ಡಿ ವ್ಯವಹಾರ ನಡೆಸ್ತಾನೆ. ಹತ್ ಸಾವಿರ, ಇಪ್ಪತ್ ಸಾವಿರ ಹಣವನ್ನ ವಾಹನಗಳು ಇರುವವರಿಗೆ ಕೊಡ್ತಾನೆ. ಅವರು ಹಣ ವಾಪಾಸ್ ಕೊಟ್ಟಿಲ್ಲ ಅಂದ್ರೆ ಗಾಡಿಗಳನ್ನ ತಂದು ನಿಲ್ಲಿಸಿಕೊಳ್ತಾನೆ.

ಈಗ ನನಗೆ 99 ಲಕ್ಷ ಹಣವನ್ನ ಎಲ್ಲಿಂದ ಕೊಟ್ಟ ಅಂತ ಪ್ರೂವ್ ಮಾಡಬೇಕು ಸರ್. ಇಡೀ ಬಸವ ಕಲ್ಯಾಣ ಮಂದಿ ಹೇಳ್ತಾರೆ ಅವ ಎಷ್ಟು ನೀಚ ಅನ್ನೋದನ್ನ. ದುಡ್ಡಿನ ವಿಚಾರ ಬಂದಾಗ ಅವ್ನ ತಂದೆಗೆ ಹೊಡೆದವ್ನೆ. ಇಡೀ ಬಸವ ಕಲ್ಯಾಣ, ಬಾಗಲಕೋಟೆ ಮಾಧ್ಯಮದ ಎದುರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದೀನಿ. ಒಂದೂವರೆ ವರ್ಷದ ಹಿಂದೆ ನಾನು ಅವ್ನಿಗೆ ಒಂದು ಪೈಸೆ ಕೊಡುವುದಿಲ್ಲ, ಆ ರೀತಿಯ ವ್ಯವಹಾರ ಇಲ್ಲ ಅಂತಾನೇ ಹೇಳಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now