ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 28 : ನಗರದ ಹಳೆ ಟೌನ್ ನ ತಿಮ್ಮಪ್ಪ ದೇವಸ್ಥಾನದ ಸಮೀಪದ ದುರುಗಮ್ಮ ದೇವಸ್ಥಾನದಲ್ಲಿ ಎರಡು ಕಾಣಿಕೆ ಹುಂಡಿಯನ್ನ ಕಳ್ಳರು ಹೊತ್ತುಕೊಂಡುಹೋಗಿದ್ದಾರೆ.
ಶನಿವಾರ ತಡುರಾತ್ರಿ ದುರುಗಮ್ಮ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣ ನಡೆದಿದ್ದು ದೇವಸ್ಥಾನದ ಪೂಜಾರಿ ತಿಪ್ಪೇಸ್ವಾಮಿ ಮನೆಯವರು ಹೋರಬಾರದಂತೆ ಹೊರಗಿನಿಂದ ಚಿಲುಕ ಹಾಕಿ ದೇವಸ್ಥಾನ ಬಾಗಿಲ ಬೀಗ ಮುರಿದು ದೇವಸ್ಥಾನದಲ್ಲಿದ್ದ ಎರಡು ಕಾಣಿಕೆ ಹುಂಡಿಗಳನ್ನು ಹೊತ್ತುಕೊಂಡು ಹೋಗಿದ್ದಾರೆ.
ಪೂಜಾರಿ ತಿಪ್ಪೇಸ್ವಾಮಿ ಬೆಳಗ್ಗೆ ಬಾಗಿಲು ತೆಗೆಯಲುಪ್ರಯತ್ನಿಸಿದಾಗ ಹೊರಗಿನಿಂದ ಲಾಕ್ ಮಾಡಿರುವುದ ಬೆಳಕಿಗೆ ಬಂದಿದೆ. ಅಕ್ಕ ಪಕ್ಕದ ಮನೆಯವರು ಬಾಗಿಲು ಚಿಲುಕ ತೆಗೆದಾಗ ಪೂಜಾರಿ ಹೊರ ಬಂದಾಗ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ವಾಗಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















