ಬೆಂಗಳೂರು: ಹೊಸ ವರ್ಷ ಅಂದ್ರೆ ಎಲ್ಲರಲ್ಲೂ ಖುಷಿ ಇರುತ್ತೆ. ಹೊಸದಾಗಿ ಪ್ಲ್ಯಾನ್ ಹಾಕಿಕೊಳ್ಳುತ್ತಾರೆ, ರೆಸ್ಯೂಲೇಷನ್ ಹಾಕಿಕೊಳ್ಳುತ್ತಾರೆ. ಹೊಸ ವರ್ಷ ಸ್ವಾಗತಿಸೋದಕ್ಕೆ ಪಾರ್ಟಿ ಮಾಡುವ ಪ್ಲ್ಯಾನ್ ಹಾಕಿಕೊಳ್ಳುತ್ತಾರೆ. ಹೀಗಾಗಿ ಪೊಲೀಸರು ಒಂದಷ್ಟು ಕಟ್ಟು ನಿಟ್ಟ ಕ್ರಮಗಳನ್ನ ಕೈಗೊಂಡಿದ್ದಾರೆ. ಹಾಗಾದ್ರೆ ಹೊಸ ವರ್ಷದ ಹಿನ್ನೆಲೆ ಪೊಲೀಸರು ಕೈಗೊಂಡಿರುವ ಕ್ರಮಗಳೇನು ಎಂಬುದನ್ನ ನೋಡೊದಾದ್ರೆ,
* ರಾತ್ರಿ 1 ಗಂಟೆಗೆ ಎಲ್ಲಾ ಬಾರ್ ಗಳು ಬಂದ್ ಆಗಬೇಕಾಗಿದೆ.
* ಸ್ಥಳವಕಾಶ ಎಷ್ಟು ಇರುತ್ತದೆಯೋ ಅಷ್ಟೇ ಜನ ಆ ಸ್ಥಳದಲ್ಲಿ ಸೇರಬೇಕು. ಅದಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ
* ವಯಸ್ಸಿನ ಮಿತಿಯನ್ನು ಸರಿಯಾಗಿ ಅನುಸರಿಸಬೇಕು, ಐಡಿ ಕಾರ್ಡ್ ಗಳನ್ನು ಪರಿಶೀಲನೆ ಮಾಡಬೇಕು. ಅಪ್ರಾಪ್ತರನ್ನ ಪಾರ್ಟಿಗೆ ಬಿಡುವಂತಿಲ್ಲ
* ಡ್ರಿಂಕ್ ಅಂಡ್ ಡ್ರೈವ್ ಗೆ ಅವಕಾಶ ಮಾಡಿಕೊಡಬಾರದು. ಈ ಸಂಬಂಧ ಪಬ್, ಬಾರ್ ಗಳಲ್ಲಿ ಈ ಬಗ್ಗೆ ಸೂಚನಾ ಫಲಕ ಹಾಕಬೇಕು.
* ಎಂಟ್ರಿ ಹಾಗೂ ಎಕ್ಸಿಟ್ ಸ್ಥಳದಲ್ಲಿ ಸಿಸಿಟಿವಿ ಕಡ್ಡಾಯವಾಗಿರಬೇಕು
* ಮಹಿಳಾ ಸುರಕ್ಷತೆಗೆ ಹೆಚ್ಚು ಗಮನ ಕೊಡಬೇಕು. ಮಹಿಳಾ ಬೌನ್ಸರ್ ಗಳ ನೇಮಕ ಕಡ್ಡಾಯ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇರಬೇಕು. ಮಹಿಳೆಯರಿಗಾಗಿ ಸಹಾಯವಾಣಿ ಅಳವಡಿಕೆ ಕಡ್ಡಾಯ.
* ಅನೈತಿಕ ಚಟುವಟಿಕೆಗಳು ನಡೆಸುವಂತಿಲ್ಲ. ಮಾದಕ ವಸ್ತು ಸಂಪೂರ್ಣ ನಿಷೇಧ. ಧೂಮಪಾನಕ್ಕಾಗಿ ಪ್ರತ್ಯೇಕ ಜಾಗ ಮೀಸಲಿರಬೇಕು.
* ಬಾರ್ & ಪಬ್ ಗೆ ಬರುವ ಬಗ್ಗೆ ಸರಿಯಾದ ವ್ಯವಸ್ಥೆ ಇರಬೇಕು. ಕ್ರೌಡ್ ಕಂಟ್ರೋಲ್‌ಗಾಗಿ ಬಾರ್ ಕೋಡ್ ಹಾಗೂ ಟೋಕನ್ ಸಿಸ್ಟಮ್ ಇರಬೇಕು. ಕೊನೆಯ ಸಂದರ್ಭದಲ್ಲಿ ಟಿಕೆಟ್ / ಪಾಸ್ ಗೆ ಅವಕಾಶ ಇಲ್ಲ. ಹೀಗೆ ಮೂವತ್ತು ನಿಯಮಗಳನ್ನ ಪೊಲೀಸರು ಸೂಚಿಸಿದ್ದು, ಎಲ್ಲವನ್ನು ಪಾಲಿಸಬೇಕು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















