ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿಕೆಟ್ಟ ಕಮೆಂಟ್ ಗಳನ್ನ ಮಾಡುವವರ ಸಂಖ್ಯೆಗೇನು ಕಡಿಮೆ ಇಲ್ಲ. ಕಮೆಂಟ್ ಹಾಕುವವರ ಪದಗಳಿಗೂ ಲಗಾಮು ಇಲ್ಲ. ಅದೆಷ್ಟೋ ಜನ ಈ ಕೆಟ್ಟ ಕಮೆಂಟ್ ಗಳಿಗೆ ಬೇಸತ್ತು ಹೋಗಿದ್ದಾರೆ. ಇದೀಗ ವಿಜಯಲಕ್ಷ್ಮೀ ದರ್ಶನ್ ಅವರು ಕೆಟ್ಟ ಕಮೆಂಟ್ ಗಳ ವಿರುದ್ಧ ಪೊಲೀಸ್ ಕಮೀಷನರ್ ಕಚೇರಿ ಮೆಟ್ಟಿಲೇರಿದ್ದಾರೆ.
ಸಾಕ್ಷಿ ಸಮೇತ ದೂರು ನೀಡಿದ್ದಾರೆ. ಅಶ್ಲೀಲ ಕಮೆಂಟ್ ಮಾಡಿದ 15 Instagram ID ಹಾಗೂ 150 ಕ್ಕೂ ಹೆಚ್ಚು ಕಮೆಂಟ್ ಗಳ ವಿರುದ್ಧ ಸಮರ ಸಾರಿದ್ದಾರೆ. ದಾಖಲೆಗಳ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಬಿ ಜಂಟಿ ಆಯುಕ್ತ ಅಜಯ್ ಹಿಲೋರಿಗೆ ದೂರು ನೀಡಿದ್ದಾರೆ.
ಕೆಟ್ಟ ಕಮೆಂಟ್ ಮಾಡುವವರಿಗೆ ರಮ್ಯಾ ನಡೆ ಬಿಸಿ ಮುಟ್ಟಿಸಿದೆ, ಭಯ ಬಂದಿದೆ ಅಂತಾನೇ ಎಲ್ಲರು ಭಾವಿಸಿದ್ದರು. ಆದರೆ ಅದ್ಯಾಕೋ ಆ ಪಾಠವೂ ವರ್ಕ್ ಆದಂತೆ ಕಾಣಿಸುತ್ತಿಲ್ಲ. ನಟಿ ರಮ್ಯಾ ಅವರಿಗೆ ಕೆಟ್ಟ ಕಮೆಂಟ್ ಗಳು ಬಂದಾಗ ಇದೇ ರೀತಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಹಲವರ ಬಂಧನ ಕೂಡ ಆಗಿತ್ತು. ಅವರ ಕುಟುಂಬಸ್ಥರು ಮನವಿ ಮಾಡಿಕೊಂಡ ಬಳಿಕ ಅವರನ್ನ ಬಿಡುಗಡೆ ಮಾಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇನ್ಮುಂದೆ ಕೆಟ್ಟ ಕಮೆಂಟ್ ಹಾಕೋರಿಗೆ ಇದೇ ಪಾಠ ಎಂದುಕೊಳ್ಳುವಾಗಲೇ ಒಂದಷ್ಟು ಮಂದಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೂ ಕೆಟ್ಟ ಕಮೆಂಟ್ಸ್ ಹಾಕಿದ್ದಾರೆ. ಸದ್ಯ ಪೊಲೀಸರಿಗೆ ದೂರು ನೀಡಿದ್ದು, ಈಗ ಯಾರೆಲ್ಲಾ ಅರೆಸ್ಟ್ ಆಗ್ತಾರೆ ಎಂಬುದನ್ನ ನೋಡಬೇಕಿದೆ. ಇನ್ಮೇಲಾದ್ರೂ ಹೆಣ್ಣುಮಕ್ಕಳಿಗೆ ಸೋಷಿಯಲ್ ಮೀಡಿಯಾದಲ್ಲಿ ನಿಂದಿಸುವುದನ್ನು ಬಿಡ್ತಾರಾ ನೋಡಬೇಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















