Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಅಭಿಮಾನಿಗಳಿಗೆ ಸುದೀಪ್ ಆಪ್ತ ಚಂದ್ರಚೂಡ ಪ್ರಶ್ನೆ..!

---Advertisement---

ಬೆಂಗಳೂರು: ಸುದೀಪ್ ಮಾರ್ಕ್ ಸಿನಿಮಾದ ಪ್ರಚಾರ ಕಾರ್ಯ ಹುಬ್ಬಳ್ಳಿಯಲ್ಲಿ ನಡೆದ ಮೇಲಂತು ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಕಾವೇರಿದೆ. ಸ್ಟಾರ್ ವಾರ್ ರೀತಿ ಅಲ್ಲಿನ ಹೇಳಿಕೆಗಳು ಬದಲಾಗಿವೆ. ಇದೀಗ ಈ ಬಗ್ಗೆ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಚಕ್ರವರ್ತಿ ಚಂದ್ರಚೂಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಯುದ್ಧಕ್ಕೆ ಸಿದ್ಧರಾಗಿದ್ದೇವೆ ಎಂಬ ಸುದೀಪ್ ಹೇಳಿಕೆ ವಿಚಾರದ ಬಗ್ಗೆ ಆಪ್ತ ಚಂದ್ರಚೂಡ್ ಸಮರ್ಥನೆ ಮಾಡಿಕೊಂಡಿದ್ದಾರೆ. ಸುದೀಪ್ ಆ ಮಾತನ್ನ ಹೇಳಿದ್ದು ಯಾರ ಫ್ಯಾನ್ಸ್ ಗೂ ಅಲ್ಲ. ಸುದೀಪ್ ಸಮರ ಸಾರಿದ್ದು ಪೈರಸಿ ವಿರುದ್ಧವಾಗಿದೆ. ಕುಂಬಳಕಾಯಿ ಕಳ್ಳ‌ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುವುದ್ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಒಂದಷ್ಟು ಪೈರಸಿ ಆಪ್ ಗಳಿದ್ದಾವೆ. ಒಂದು ಸಿನಿಮಾ ರಿಲೀಸ್ ಆದ ಐದು ನಿಮಿಷಕ್ಕೆಲ್ಲಾ ಮೊಬೈಲ್, ಟ್ಯಾಬ್ ಗಳಿಗೆ ಬಂದು ಬಿಡುತ್ತದೆ. ಇದು ಮುಂದಿನ ದಿನಗಳಲ್ಲಿ ಸಿನಿಮಾದ ಸರ್ವನಾಶಕ್ಕೆ ದಾರಿಯಾಗುತ್ತದೆ. ಇದನ್ನ ಒಂದು ಪಡೆ ಮಾಡ್ತಾ ಇದೆ. ಸ್ಥಳೀಯರು ಇದ್ದಾರೆ. ನಮ್ಮವರು ಎನಿಸಿಕೊಂಡವರು ಇದ್ದಾರೆ. ಬುಕ್ ಮೈ ಶೋನಲ್ಲಿ ನೆಗೆಟಿವ್ ರಿವ್ಯೂ ಹಾಕುವವರ ವಿರುದ್ಧ ಯುದ್ಧ ಮಾಡಬೇಕು. ಬುಕ್ ಮೈ ಶೋ ನಲ್ಲಿ ಲಾಭಿ ಮಾಡೋರು ಇದ್ದಾರೆ. ಸಿನಿಮಾ ಥಿಯೇಟರ್ ಗಳು ಹಂಚಿಕೆಯಾದ ನಂತರ ಕೆಲವರು ಫ್ಯಾನ್ ಗಳು ಎಂಬ ಹೆಸರಲ್ಲಿ ಸೂಪರ್ ಸ್ಟಾರ್ ಕಲಾವಿದರ ಸಿನಿಮಾಗಳು ರಿಲೀಸ್ ಆದಾಗ ಗಲಾಟೆ ಮಾಡುವುದು, ಕಟೌಟ್ ಕಟ್ಟುವುದಕ್ಕೆ, ಸಂಭ್ರಮಿಸುವುದಕ್ಕೆ ಬಿಡದೆ ಇರುವುದು ಈ ಥರದ ಟ್ರೋಲ್ ಗಳನ್ನ ಮಾಡುವುದು, ಹೀನಾಯವಾಗಿ ಅವರ ಹೆಂಡತಿ ಮಕ್ಕಳನ್ನ ಬೀದಿಗೆ ಎಳೆಯುವುದು ಮಾಡ್ತಾರೆ. ಈ ಪೈರಸಿ ಬಗ್ಗೆ ಅಂದು ಮಾತನಾಡಿದ್ದು ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now