ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಯ್ತಾ ಸ್ಟಾರ್ ವಾರ್ : ದರ್ಶನ್ – ಸುದೀಪ್ ಫ್ಯಾನ್ಸ್ ಮಾಡ್ತಿರೋದೇನು..?

1 Min Read

ಬೆಂಗಳೂರು: ಸಿನಿಮಾರಂಗದಲ್ಲಿ ಸ್ಟಾರ್ ವಾರ್ ಸರ್ವೇ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಅವರವರ ಫ್ಯಾನ್ಸ್ ವಾರ್ ಇನ್ನು ಜೋರಾಗಿದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ದರ್ಶನ್ ವಿಚಾರ ಹಾಗೂ ಸುದೀಪ್ ಹೇಳಿಕೆಯ ನಡುವೆ ಸಾಕಷ್ಟು ಸುದ್ದಿಯಾಗ್ತಾ ಇದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಳಿಕೆಗೆ ಸುದೀಪ್ ಅಭಿಮಾನಿಗಳು ಕೌಂಟರ್ ಕೊಟ್ಟಿದ್ದಾರೆ.

ಈಚೆಗಷ್ಟೇ ನಟ ಸುದೀಪ್ ಅವರ ಮಾರ್ಕ್ ಸಿನಿಮಾದ ಪ್ರಚಾರ ಕಾರ್ಯ ಹುಬ್ಬಳ್ಳಿಯಲ್ಲಿ ನಡೆದಿತ್ತು. ಅಲ್ಲಿ ಸುದೀಪ್ ಅವರು ಹೇಳಿದ ಹೇಳಿಕೆಗಳಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ. ಇದೀಗ ಸುದೀಪ್ ಅಭಿಮಾನಿಗಳು ವಿಜಯಲಕ್ಷ್ಮೀ ಅವರಿಗೆ ಕೌಂಟರ್ ಕೊಡುವುದಕ್ಕೆ ಶುರು ಮಾಡಿದ್ದಾರೆ. ಹಳೆಯ ದಿನಗಳನ್ನೆಲ್ಲ ನೆನೆದು ಸೋಷಿಯಲ್ ಮೀಡಿಯಾದಲ್ಲಿ ಟಾಂಟ್ ಮಾಡ್ತಿದ್ದಾರೆ.

 

ದರ್ಶನ್ ಕುಟುಂಬದಲ್ಲಿ ಗಲಾಟೆಯಾದಾಗ ವಿಜಯಲಕ್ಷ್ಮೀ ಪರವಹಸಿದುವುಕ್ಕೆ ಇದೇ ಸುದೀಪ್ ಬಂದಿದ್ದು ಅಂತ ಅಂದಿನ ಪ್ರೆಸ್ ಮೀಟ್ ಪೋಟೋ ಹಾಕಿ ಹಳೆಯ ದಿನಗಳನ್ನ ನೆನಪಿಸುತ್ತಾ ಇದ್ದಾರೆ. ಅಷ್ಟಕ್ಕೂ ಇಷ್ಟೆಲ್ಲಾ ಆಗುವುದಕ್ಕೆ ಕಾರಣವಾಗಿದ್ದು ಸುದೀಪ್ ಕೊಟ್ಟ ಆ ಹೇಳಿಕೆ.

 

ಹೊರಗಡೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ. ನಾವೂ ಆ ಯುದ್ಧಕ್ಕೆ ರೆಡಿಯಾಗಿದ್ದೀವಿ ಎಂಬ ಮಾತನ್ನ ಹೇಳಿದ್ದರು. ಈ ಸಂಬಂಧ ಇಬ್ಬರ ಅಭಿಮಾನಿಗಳು ಕೆಸರೆರಚಾಟ ಶುರು ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಇಬ್ಬರ ಅಭಿಮಾನಿಗಳು ದಚ್ಚು – ಕಿಚ್ಚ ಒಂದಾಗಲಿ ಎಂದೇ ಬಯಸುತ್ತಿದ್ದರು. ಹಳೆಯ ಫ್ರೆಂಡ್ಶಿಪ್ ಫೋಟೋಗಳನ್ನ ಹಾಕಿ ಖುಷಿ ಪಡ್ತಾ ಇದ್ರು. ಇದ್ದಕ್ಕಿದ್ದ ಹಾಗೇ ವೈಯಕ್ತಿಕ ವಿಚಾರಗಳನ್ನೆಲ್ಲಾ ತೆಗೆದು ತಿರುಗೇಟು ಕೊಡುವುದಕ್ಕೆ ಶುರು ಮಾಡಿದ್ದಾರೆ. ಒಳ್ಳೆಯ ಬೆಳವಣಿಗೆಯಲ್ಲಿ ಸಾಗುತ್ತಿದ್ದ ವಿಚಾರ ಇದ್ದಕ್ಕಿದ್ದ ಹಾಗೇ ಬೇರೆಯದ್ದೆ ಟರ್ನಿಂಗ್ ಪಡೆದುಕೊಂಡಿದೆ.

Share This Article
Enable Notifications OK No thanks