ಬೆಂಗಳೂರು: ರೈಲಿನಲ್ಲಿ ಪ್ರತಿದಿನ ಸಾವಿರಾರು ಮಂದಿ ಪ್ರಯಾಣ ಮಾಡ್ತಾರೆ. ಎಷ್ಟೋ ಜನರ ಪ್ರತಿನಿತ್ಯದ ಓಡಾಟ ಈ ರೈಲುಗಳಲ್ಲಿಯೇ ಆಗಿ ಹೋಗುತ್ತೆ. ಇದೀಗ ರೈಲ್ವೆ ಟಿಕೆಟ್ ದರ ಏರಿಕೆಗೆ ಪ್ಲ್ಯಾನ್ ಮಾಡಿದೆ. ಅದರಲ್ಲೂ ಮೊನ್ನೆ ಮೊನ್ನೆಯಷ್ಟೇ ಟಿಕೆಟ್ ದರ ಏರಿಕೆ ಮಾಡಿದ್ದರು, ಈಗ ಮತ್ತೆ ಏರಿಕೆ ಮಾಡ್ತಾ ಇದೆ. ಕೇವಲ ಆರು ತಿಂಗಳಲ್ಲಿಯೇ ಎರಡು ಬಾರಿ ಏರಿಕೆಯ ತೀರ್ಮಾನ ಕೈಗೊಂಡಿದೆ.
ಇದೇ ಡಿಸೆಂಬರ್ 26ರಿಂದ ಅನ್ವಯವಾಗುವಂತೆ ಟಿಕೆಟ್ ದರವನ್ನು ಏರಿಕೆ ಮಾಡಿದೆ. 215 ಕಿಲೋ ಮೀಟರ್ ಗಿಂತಲೂ ಹಾಗೂ ಹೆಚ್ಚಿನ ದರವನ್ನು ದೂರದ ಪ್ರಯಾಣಕ್ಕೆ ಸಾಮಾನ್ಯ ದರ್ಜೆಯ ಟಿಕೆಟ್ ದರ ಪ್ರತಿ ಕಿಲೋ ಮೀಟರ್ ಗೆ 1 ಪೈಸೆ ಏರಿಕೆ ಮಾಡಲಾಗಿದೆ. ಎಕ್ಸ್‌ಪ್ರೆಸ್ ನಾನ್ ಎಸು ಹಾಗೂ ಎಸಿ ರೈಲುಗಳ ಪ್ರಯಾಣದಲ್ಲಿ ಪ್ರತಿ ಕಿಲೋ ಮೀಟರ್ ಗೆ 2 ಪೈಸೆ ಏರಿಕೆ ಮಾಡಲಾಗಿದೆ.
ನಾನ್ ಎಸಿ ಬೋಗಿಯಲ್ಲಿ 500 ಕಿ.ಮೀ ದೂರದವರೆಗೆ ಪ್ರಯಾಣಿಸುವವರು ಹಾಲಿ ದರಕ್ಕಿಂತ 10 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕು. ಉಪನಗರಗಳ ಪ್ರಯಾಣ, ಮಾಸಿಕ ವಾಸುಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೇ ಇಲಾಖೆ ಹೇಳಿದೆ. ಈ ಟಿಕೆಟ್ ದರ ಏರಿಕೆಯಿಂದ ರೈಲ್ವೇ ಇಲಾಖೆಗೆ ವರ್ಷಕ್ಕೆ 600 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ. ರೈಲ್ವೇ ನೆಟ್ ವರ್ಕ್ ವಿಸ್ತರಣೆ, ರೈಲ್ವೇ ಅಪರೇಷನ್ ವೆಚ್ಚ ಹೆಚ್ಚಳ, ರೈಲ್ವೇ ಸುರಕ್ಷತೆ, ದಕ್ಷತೆಯ ಹೆಚ್ಚಳದ ಕಾರಣದಿಂದ ರೈಲ್ವೇ ಟಿಕೆಟ್ ದರವನ್ನು ಪೈಸೆಗಳ ಲೆಕ್ಕದಲ್ಲಿ ಏರಿಸುವ ತೀರ್ಮಾನ ಕೈಗೊಳ್ಳಲಾಗಿದೆ

