Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ಕಾರಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ‘ಕರ್ತವ್ಯ’ ಆ್ಯಪ್ ಹಾಜರಾತಿ ಕಡ್ಡಾಯ

Attendance via 'Karthavya' app made mandatory for government contract and outsourced employees
---Advertisement---

ಬೆಂಗಳೂರು : ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಕಚೇರಿಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ‘ಕರ್ತವ್ಯ’ (Karnataka Advanced Attendance Management System) ಆ್ಯಪ್ ಮೂಲಕ ಡಿಜಿಟಲ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ.

ಈವರೆಗೆ ಕೇವಲ ಕಾಯಂ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಈ ವ್ಯವಸ್ಥೆಯನ್ನು, ಆಡಳಿತದಲ್ಲಿ ಶಿಸ್ತು, ಹೊಣೆಗಾರಿಕೆ ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈಗ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗೂ ವಿಸ್ತರಿಸಲಾಗಿದೆ.

ನವೆಂಬರ್ 25ರೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಕ್ಕೆ ಗಡುವು

ಎಲ್ಲಾ ಇಲಾಖೆಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವಿವರಗಳನ್ನು ನವೆಂಬರ್ 25ರೊಳಗೆ ಆ್ಯಪ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಲು ನಿರ್ದೇಶನ ನೀಡಲಾಗಿದೆ. ಈ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ, ಡಿಸೆಂಬರ್ 1ರಿಂದ ಎಲ್ಲ ನೌಕರರು ‘ಕರ್ತವ್ಯ’ ಆ್ಯಪ್ ಮೂಲಕವೇ ತಮ್ಮ ದೈನಂದಿನ ಹಾಜರಾತಿಯನ್ನು ದಾಖಲಿಸುವುದು ಕಡ್ಡಾಯವಾಗಲಿದೆ.

ಹಾಜರಾತಿ ಆಧಾರದಲ್ಲೇ ವೇತನ ಮತ್ತು ಬಿಲ್ ಪಾವತಿ

ಜನವರಿ 1ರಿಂದ ಜಾರಿಗೆ ಬರುವಂತೆ, ‘ಕರ್ತವ್ಯ’ ಆ್ಯಪ್‌ನಲ್ಲಿ ದಾಖಲಾಗುವ ಡಿಜಿಟಲ್ ಹಾಜರಾತಿ ವರದಿಯನ್ನು ಆಧರಿಸಿ ಮಾತ್ರ ನೌಕರರ ಮಾಸಿಕ ವೇತನ ಹಾಗೂ ಸಂಬಂಧಪಟ್ಟ ಹೊರಗುತ್ತಿಗೆ ಏಜೆನ್ಸಿಗಳ ಬಿಲ್‌ಗಳನ್ನು ಬಿಡುಗಡೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹೊಸ ನಿಯಮದಿಂದಾಗಿ ನಕಲಿ ಹಾಜರಾತಿಗೆ ಕಡಿವಾಣ ಬೀಳಲಿದ್ದು, ವೇತನ ಪಾವತಿ ಪ್ರಕ್ರಿಯೆಯಲ್ಲಿ ನಿಖರತೆ ಹಾಗೂ ಪಾರದರ್ಶಕತೆ ಮೂಡಲಿದೆ.

Join WhatsApp

Join Now

Join Telegram

Join Now