Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

35 ವರ್ಷಗಳ ಮಾದೀಗ ಮೀಸಲಾತಿ ಹೋರಾಟಕ್ಕೆ ಜಯ : ಕೆ.ಹೆಚ್.ಮುನಿಯಪ್ಪ

---Advertisement---

ಬೆಳಗಾವಿ: ಮಾದಿಗ ಮೀಸಲಾತಿ ಹೋರಾಟಕ್ಕೆ ಸಿಕ್ಕ ಜಯದ ಬಗ್ಗೆ ಸಚಿವ ಮುನಿಯಪ್ಪ ಸಂತಸ ಹಂಚಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸುಮಾರು 35 ವರ್ಷಗಳ ಕಾಲ ಮಾದಿಗ ಮೀಸಲಾತಿ ಹೋರಾಟಕ್ಕೆ, ಮಾದುಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ ಮತ್ತು ಹಲವು ಮಾದಿಗ ಸಂಘ ಸಂಸ್ಥೆಗಳ ಹೋರಾಟ, ದಲಿತ ಸಂಘ ಸಂಸ್ಥೆಗಳ ಹೋರಾಟಕ್ಕೆ ಫಲ ಸಿಕ್ಕಿದೆ ಎಂದಿದ್ದಾರೆ.

ಈ ಹಿನ್ನಲೆ ಮೊಟ್ಟ ಮೊದಲನೆಯದಾಗಿ ಹೋರಾಟಗಾರರಿಗೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಬಹಳ ಮುಖ್ಯವಾಗಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು, ಸಮಾಜ ಕಲ್ಯಾಣ ಸಚಿವರು ಮಹಾದೇವಪ್ಪ, ಪರಮೇಶ್ವರ್, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ ಅವರು ಎಲ್ಲಾ ಸಚಿವರು ಕೂಡ ಕ್ಯಾಬಿನೆಟ್ ಡಿಸಿಷನ್ ಆದ ಮೇಲೆ ಈ ಬಿಲ್ ಪಾಸ್ ಮಾಡಿದ್ದಾರೆ.

ವಿರೋಧ ಪಕ್ಷದ ಎಲ್ಲಾ ಶಾಸಕರು ಕೂಡ ಇದನ್ನ ಸ್ವಾಗತ ಮಾಡಿದ್ದಾರೆ. ಇದೊಂದು ಚರಿತ್ರೆಯಾದಂತ 35 ವರ್ಷಗಳ ಹೋರಾಟಕ್ಕೆ, ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದಂತ ಮಾದಿಗ ಸಮುದಾಯ, 101 ಜಾತಿಗಳಲ್ಲಿ ಬಹಳಷ್ಟು ಹಿಂದುಳಿದವರು ಎಂದರೆ ಈ ಮಾದಿಗ ಸಮುದಾಯ. ಅವರಿಗೆ ಇಂದು ಈ ಕಾಂಗ್ರೆಸ್ ಸರ್ಕಾರ, ಒಂದು ಇತಿಹಾಸದ ತೀರ್ಮಾನ ನೀಡಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಮಾನವನ್ನ ಯಥಾವತ್ತಾಗಿ ಜಾರಿಗೆ ತಂದಿದೆ. ಭರ್ತಿ ವಿಚಾರದ ಬಗ್ಗೆ ನ್ಯಾಯಾಲಯ ಹೇಳಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ 16/4A ಅಲ್ಲಿ ಕೂಡ ಮೀಸಲಾತಿ ನೀಡಲು ತಿಳಿಸಿದೆ. ಎಂದು ಮಾದಿಗ ಸಮುದಾಯದ ಹೋರಾಟಕ್ಕೆ ಸಿಕ್ಕ ಜಯದ ಬಗ್ಗೆ ಮಾತನಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...