ಉತ್ತರ ಕರ್ನಾಟಕ ಹಿಂದುಳಿದಿರುವುದು ಯಾಕೆ ಗೊತ್ತಾ..? ಸಿಎಂ ಹೇಳಿದ್ದು ಹೀಗೆ..!

1 Min Read

 

ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭವಾದಾಗೆಲ್ಲಾ ಈ ಬಾರಯಾದರೂ ಉತ್ತರ ಕರ್ನಾಟಕದ ಸಮಸ್ಯೆಗೆ ಪರಿಹಾರ ಸಿಗುತ್ತಾ ಎಂಬ ಪ್ರಶ್ನೆಗಳೇ ಎದುರಾಗಲಿದೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಹಿಂದುಳಿದಿರುವ ಬಗ್ಗೆ ಕಾರಣ ತಿಳಿಸಿದ್ದಾರೆ.

4 ಕೋಟಿ ಜನಸಂಖ್ಯೆಯಲ್ಲಿ ಕರಾವಳಿ ಸೇರುತ್ತದೆ. ಏಕೀಕರಣ ಆದಮೇಲೆ, ಒಂದೇ ಕರ್ನಾಟಕ ಆದ ಮೇಲೆ ನಮ್ಮ ಸರ್ಕಾರ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತ ಆಗಲ್ಲ. ಯಾಕಂದ್ರೆ ಸರ್ವತೋಮುಖ ಅಭಿವೃದ್ಧಿ ಆಗಲಿ. ಅಸಮಾನತೆ ಇದ್ದರೆ ನಾವೂ ಸಂವಿಧಾನದ ಧ್ಯೇಯೋದ್ದೇಶವನ್ನು ಈಡೇರಿಸುವುದಕ್ಕೆ ಸಾಧ್ಯವಿಲ್ಲ. ಅಸಮಾನತೆ ಹೋದ ಮೇಲೆ ಸ್ವಾತಂತ್ರ್ಯ ಬಂದದ್ದಕ್ಕೆ ಸಾರ್ಥಕ ಆಗೋದು. ಅಶೋಕ, ಬೆಲ್ಲದ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ.

ನಂಜುಂಡಪ್ಪ ಅವರ ವರದಿ ಬಂತು ಅದನ್ನ ಜಾರಿ ಮಾಡಿದೆವು. ಇಷ್ಟೆಲ್ಲಾ‌ ಆದರೂ ಕೂಡ ಅಸಮಾನತೆ ಯಾಕೆ ಇನ್ನು ಮುಂದುವರೆದಿದೆ ಎಂಬುದರ ಬಗ್ಗೆ ವಿಚಾರ ಮಾಡಿದಾಗ, ಉತ್ತರ ಕರ್ನಾಟಕದಲ್ಲಿ ಡೈರಿ ಆಕ್ಟಿವಿಟೀಸ್ ಕಡಿಮೆ. ಯಾಕೆ ಈ ರೀತಿ ಹೇಳ್ತಾ ಇದ್ದೀ‌ನಿ ಅಂದ್ರೆ. ಬೆಂಗಳೂರಿನ ಡೈರಿಯಲ್ಲಿ ಸುಮಾರು 17 ಲಕ್ಷಕ್ಕೂ ಹೆಚ್ಚು ದಿನಕ್ಕೆ ಲೀಟರ್ ಹಾಲು‌ಬರುತ್ತೆ. ಬೀದರ್, ಗುಲ್ಬರ್ಗ, ಯಾದಗಿರಿ ಡೈರಿಯಲ್ಲಿ 67 ಸಾವಿರ ಆಗುತ್ತೆ ಅಷ್ಟೆ. ಆಗಲೂ ಕಡಿಮೆ ಇತ್ತು, ಈಗಲೂ ಕಡಿಮೆ ಇದೆ. ಎಷ್ಡು ಅಜಗಜಾಂತರ ವ್ಯತ್ಯಾಸವಿದೆ. ಎರಡು ಹಸು ಸಾಕ್ತಾರೆ ಅಂದುಕೊಂಡರೆ 20 ಲೀಟರ್ ಹಾಲು ಬರುತ್ತೆ. ಅದರಲಗಲಿ 50% ಖರ್ಚಾದರೂ ಅರ್ಧ ಲಾಭ ಉಳಿಯುತ್ತಾ. ಹಳೇ ಮೈಸೂರಲ್ಲಿ ಹಾಲು ಉತ್ಪಾದನೆ ಮಾಡೋದಿದೆ ಎಂದು ಬೇರೆ ಬೇರೆ ಉದಾಹರಣೆಗಳನ್ನ ನೀಡಿದ್ದಾರೆ.

Share This Article