Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉಪ ವರ್ಗಿಕರಣ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಒತ್ತಾಯ

---Advertisement---

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ಮೀಸಲಾತಿಯಲ್ಲಿ ಒಳಮೀಸಲು ವಿಭಜಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರಿಂ ಕೋರ್ಟ್ ನಿರ್ದೇಶನವಿದೆ. ಆದರೆ ಸರ್ಕಾರ ಒಳಮೀಸಲಿನಲ್ಲಿ ಮತ್ತೇ ಒಳಮೀಸಲು ಮಾಡಿರುವುದು ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯಗಳಿಗೆ ಸರ್ಕಾರ ಮಾಡಿದ ಅನ್ಯಾಯವಾಗಿದೆ ಹಾಗಾಗಿ ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕ 2025 ನ್ನು ಹಿಂಪಡೆಯಲು ಒತ್ತಾಯಿಸುತ್ತೇನೆ ಎಂದು ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

 

ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕ 2025 ರಲ್ಲಿ ಅಸಂಬದ್ಧವಾಗಿ ವರ್ಗಿಕರಿಸಿರುವ ಉಪ ವರ್ಗಿಕರಣವನ್ನು ಈ ಕೂಡಲೇ ಹಿಂಪಡೆಯಬೇಕು.
ಒಳ ಮೀಸಲಾತಿಯನ್ನು ಕಲ್ಪಿಸುವ ಸರ್ಕಾರದ ಉದ್ದೇಶ ಈಡೇರಬೇಕಾದರೆ ಜಾತಿವಾರು ಉಪ ವರ್ಗಿಕರಣವನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಬೇಕಾಗಿತ್ತು, ಆದರೆ ಜನಸಂಖ್ಯೆಗನುಗುಣವಾಗಿ ಮಾಡುವಲ್ಲಿ, ಸರ್ಕಾರದಿಂದ ಲೋಪವಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರಿಗೆ ಮನವಿ ಮೂಲಕ ತಿಳಿಸಲಾಗಿತ್ತು. ಆದರೆ, ಸರ್ಕಾರ ನಾವು ತಿಳಿಸಿದ ಲೋಪಗಳನ್ನು ಸರಿಪಡಿಸಲಿಲ್ಲ ಮತ್ತು ಕರ್ನಾಟಕ ಅನುಸೂಚಿತ ಜಾತಿಗಳ ವಿಧೇಯಕ 2025 ರಲ್ಲಿ ಮತ್ತೊಮ್ಮೆ ಅಸಂಬದ್ಧವಾಗಿ ಪ್ರವರ್ಗ-ಸಿ ಯನ್ನು ವಿಂಗಡಿಸಿರುವುದನ್ನು ಖಂಡಿಸುತ್ತೇವೆ.

 

ವಿಧೇಯಕ 2025 ರ ಪುಟ 7 ರಲ್ಲಿ ಪರಂತು ಅನುಸೂಚಿತ ಜಾತಿಗಳ ಪ್ರವರ್ಗ-ಸಿ ಪಟ್ಟಿಯ ಸಂದರ್ಭದಲ್ಲಿ ಮೇಲಿನ ಕೋಷ್ಠಕದ ಕ್ರಮ ಸಂಖ್ಯೆ:10, 15, 36, 37 ನಮೂದಿಸಲಾದ (ಅಂದರೆ ಜಾತಿ ಸಂಕೇತ 17, 23, 53 ಮತ್ತು 54) ಇವುಗಳನ್ನು ಹೊರತುಪಡಿಸಿ 59 ಜಾತಿಗಳಿಗಾಗಿ ಪ್ರತಿ ಐದು ಹುದ್ದೆಗಳು ಅಥವಾ ಸ್ಥಾನಗಳ ಪೈಕಿ ಕನಿಷ್ಠ ಒಂದನ್ನು ಪ್ರವರ್ಗ-ಸಿ ಯೊಳಗೆ ಮೀಸಲಿರಿಸತಕ್ಕದ್ದು ಎಂದು ಅಂಗೀಕರಿಸಲಾಗಿದೆ. ಇದನ್ನು ಮಾರ್ಪಡಿಸಿ ಭೋವಿ ಸಂಬಂಧಿತ ಜಾತಿಗಳು, ಲಂಬಾಣಿ ಸಂಬಂಧಿತ ಜಾತಿಗಳು, ಕೊರಚ ಸಂಬಂಧಿತ ಜಾತಿಗಳು, ಕೊರಮ ಸಂಬಂಧಿತ ಜಾತಿಗಳಿಗೆ ನೀಡಿರುವ ಸಿ-ವರ್ಗದ 5%ರಷ್ಟು ಮೀಸಲಾತಿಯನ್ನು ಮುಂದುವರೆಸಬೇಕು.

 

ಭೋವಿ ಬಂಜಾರ ಕೊರಮ ಕೊರಚ ಜಾತಿಗಳು ಶೇಖಡ 5% ಮತ್ತು ಅಲೆಮಾರಿಗಳು 1% ಜನಸಂಖ್ಯೆ ಇರುವುದರಿಂದ, ರಾಜ್ಯದ ಜನಸಂಖ್ಯೆಯ 6 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ 8 ಲಕ್ಷ ಜನಸಂಖ್ಯೆ ಅರ್ಥಾತ್ ಶೇ 18% ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ. ಜನಸಂಖ್ಯಾ ಅನುಗುಣವಾಗಿ ಶೇಖಡ 17% ಬದಲು ಶೇಖಡ 18% ಹೆಚ್ಚಿಸಬೇಕು.ಪರಿಶಿಷ್ಟ ಜಾತಿ ಜನಸಂಖ್ಯಾವಾರು ಶೇಖಡ 18% ಹೆಚ್ಚಿಸಿ ಪರಿಶಿಷ್ಚಜಾತಿಯ ಸಿ ಗುಂಪಿನಲ್ಲಿರುವ ಭೋವಿ, ಬಂಜಾರ, ಕೋರಮ, ಕೊರಚ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು.

 

ಅವಶ್ಯಕತೆ ಹಾಗೂ ಬೇಡಿಕೆ ಬಂದಲ್ಲಿ ಬರುವ ದಿನಗಳಲ್ಲಿ SC-C ಗುಂಪಿನಲ್ಲಿ ಜನಸಂಖ್ಯಾವಾರು ಪ್ರತ್ಯೆಕ ಗುಂಪು ರಚಿಸಲು ಅವಕಾಶ ಕಲ್ಪಿಸಿ. ನ್ಯಾ.ನಾಗಮೋಹನ ದಾಸ ವರದಿಯಲ್ಲಿ ನೀಡಿರುವ ಸಮೀಕ್ಷೆ ವರದಿ ಪ್ರಕಾರ ಭೋವಿ ಸಮುದಾಯವೇ ಹೆಚ್ಚಿನ ಮೀಸಲಾತಿ ವಂಚಿತ ಸಮುದಾಯ ಎಂದು ಗುರುತಿಸಿರುವುದನ್ನು ಪರಿಗಣಿಸಿ ವಿಶೇಷ ಸೌಲಭ್ಯ ಒದಗಿಸಲು ಸರ್ಕಾರ ಕ್ರಮವಯಿಸಬೇಕು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)