ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಜಾಮೀನಿಗಿಂತ ಮೊದಲು ಸೌಲಭ್ಯಗಳನ್ನ ಕೊಡಿ ಎಂಬ ಬೇಡಿಕೆಯನ್ನ ಇಟ್ಟಿದ್ದಾರೆ. ದಿಂಬು ಹಾಗೂ ಹಾಸಿಗೆ ಕೊಟ್ಟರೆ ಸಾಕು ಎಂಬ ಬೇಡಿಕೆಯನ್ನ ಇಟ್ಟಿದ್ದಾರೆ. ಆದರೆ ಅದ್ಯಾಕೋ ಏನೋ ಬೇಸಿಕ್ ಫೆಸಿಲಿಟಿ ಕೂಡ ಸಿಕ್ಕಿಲ್ಲ. ಜಾಮೀನಿನ ವಿಚಾರ ಕೂಡ ಅವರ ಅಭಿಮಾನಿಗಳಿಗೆ ಆತಂಕವಿದೆ. ಈ ಆತಂಕದ ನಡುವೆ ಇದೀಗ ಝೈದ್ ಖಾನ್ ಒಂದು ವಿಚಾರ ಹೇಳಿ ಖುಷಿ ಪಡಿಸಿದ್ದಾರೆ.
ಜನವರಿಯಲ್ಲಿ ದರ್ಶನ್ ಅಣ್ಣನಿಗೆ ಜಾಮೀನು ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ಜಾಮೀನು ಸಿಗದೆ ಇದ್ದರೆ ಜನವರಿಯಲ್ಲಿ ನಾನೇ ಜೈಲಿಗೆ ಹೋಗಿ ಆಶೀರ್ವಾದ ಪಡೆದುಕೊಳ್ಳುತ್ತೇನೆ. ನೋವಿನಲ್ಲೂ ದರ್ಶನ್ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಟ್ಟಿದ್ದಾರೆ. ದರ್ಶನ ಎಂಬ ಹೆಸರಿನಿಂದ ಸಿನಿಮಾ ಸಕ್ಸಸ್ ಆಗೆ ಇರುತ್ತದೆ. ಇವು ಎರಡನ್ನು ನಾನು ಡೆವಿಲ್ ನೋಡಿ ಕಲಿತುಕೊಂಡೆ. ಸಿನಿಮಾ ತುಂಬಾ ಚೆನ್ನಾಗಿದೆ. ದರ್ಶನ್ ಅಣ್ಣನಿಗೆ ಜನವರಿಯಲ್ಲಿ ಬೇಲ್ ಸಿಗುವ ನಿರೀಕ್ಷರ ಇದೆ.
ಇದೆ ವೇಳೆ ಸಿನಿಮಾ ಪೈರಸಿ ಬಗ್ಗೆ ಮಾತನಾಡಿದ್ದು, ಪೈರಸಿ ಮಾಡುವವರು ಮಾಡಲಿ, ಬೇಡ ಅಂದ್ರೆ ಬಿಡ್ತಾರಾ? ಅವರ ಕರ್ತವ್ಯ ಅವರು ಮಾಡಲಿ ಬಿಡಿ. ಆದರೆ ಅಪ್ಪಿತಪ್ಪಿ ಸಿಕ್ಕಿಬಿದ್ರೆ ಬಿಡಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಝೈದ್ ಖಾನ್ ಸದ್ಯ ತಮ್ಮ ಎರಡನೇ ಸಿನಿಮಾ ಕಲ್ಟ್. ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹಾವೇರಿಯಲ್ಲಿ ಪ್ರಮೋಷನ್ ಮಾಡಿದ್ದು, ಈ ವೇಳೆ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ. ಝೈದ್ ಗೆ ಜೋಡಿಯಾಗಿ ಮಲೈಕಾ ನಟಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















