Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾನು ಯಾವನಿಗೂ ಹೆದರಲ್ಲ : ಅಪಾರ್ಟ್ಮೆಂಟ್ ಅಸೋಸಿಯೇಷನ್ ಕಿರಣ್ ಗೆ ಡಿಕೆಶಿ ಎಚ್ಚರಿಕೆ ಕೊಟ್ಟಿದ್ದೇಕೆ..?

---Advertisement---

ಬೆಂಗಳೂರು: ನನ್ನನ್ನು ಹೆದರಿಸಲು ಬರಬೇಡಿ. ನಾನು ಯಾವನಿಗೂ ಹೆದರುವುದಿಲ್ಲ ಎಂದು ಅಪಾರ್ಟ್ಮೆಂಟ್ ಅಸೋಸಿಯೇಷನ್ ಖಚಾಂಚಿ ಕಿರಣ್ ಹೆಬ್ಬಾರ್ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇರವಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಕಿರಣ್ ಹೆಬ್ಬಾರ್ ಎನ್ನುವವರು ಪತ್ರ ಬರೆದಿದ್ದಾರೆ. ಕೆಲವರಿಗೆ ನಾನು ಯಾರೂ ಅನ್ನೋದೆ ಗೊತ್ತಿಲ್ಲ. ಆತ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ ಅಂತ ಎಚ್ಚರಿಕೆಯ ಪತ್ರ ಬರೆದಿದ್ದಾನೆ. ಸಾಮಾನ್ಯ ಜ್ಞಾನ ಇಟ್ಟುಕೊಂಡು ನನ್ನ ಹತ್ತಿರ ಡೀಲ್ ಮಾಡಬೇಕು. ನನಗೆ ವಾರ್ನ್ ಮಾಡುವುದು, ಎಚ್ಚರಿಕೆ ಕೊಡುವುದು ನಡೆಯುವುದಿಲ್ಲ. ಪ್ರಧಾನಿ, ಹೋಂ ಮಿನಿಸ್ಟರ್ ಗೆ ಹೆದರದೆ ಜೈಲಿಗೆ ಹೋದವನು ನಾನು. ಇವನು ಯಾರು ಹೆಬ್ಬಾರ್ ಗರ ಹೆದರುತ್ತೀನಾ..? ನಿಮ್ಮ ವಾರ್ನಿಂಗ್ ಗೆ ನಾವೂ ಹೆದರುವುದಿಲ್ಲ. ನಿಮಗೆ ಕೊಟ್ಟಿರುವ ಮಾತನ್ನ ಉಳಿಸಿಕೊಂಡಿಲ್ವಾ..? ಈ ಸರ್ಕಾರವನ್ನು ಹೆದರಿಸೋದಕ್ಕೆ ಬರಬೇಡಿ.

ನಿಮ್ಮ ಸಮಸ್ಯೆ ಹೇಳಿಕೊಳ್ಳಿ, ನಿಮ್ಮ ಕೆಲಸ ಮಾಡಿಸಿಕೊಳ್ಳಿ. ಬಿಜೆಪಿಗೆ ಹೆಚ್ಚು ವೋಟ್ ಬೆಂಗಳೂರಿ‌ಲ್ಲಿ ತಾನೇ ಕೊಟ್ಟಿದ್ದು. ಭ್ರಮೆ ಬೇಡ. ಬೆದರಿಕೆ ಹಕುವುದು ಬೇಡ. ಬೆದರಿಕೆ ಹಾಕುವುದು ನಮ್ಮ ಸರ್ಕಾರ್ ವಿರುದ್ಧ ನಡೆಯಲ್ಲ. ನಾನು ನೇರ ದಿಟ್ಟವಾಗಿ ಮಾತನಾಡುತ್ತೀನಿ. ಏನು ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ. ನಾನು ಕಟುವಾಗಿ ಮಾತನಾಡಿದರು, ಮನಸ್ಪೂರ್ತಿಯಾಗಿ ಕೆಲಸವನ್ನು ಮಾಡುತ್ತೇನೆ. ಯಾಕೆ ನಾವೂ ಗ್ಯಾರಂಟಿಗಳನ್ನ ಕೊಟ್ಟಿಲ್ವಾ..? ಎಲ್ಲಾ ರಾಜ್ಯಗಳಲ್ಲೂ ನಮ್ಮ ಗ್ಯಾರಂಟಿಯದ್ದೇ ಚರ್ಚೆಯಿದೆ. ಯಾರು ಯಾರನ್ನೋ ಹೆದರಿಸಿದಂತೆ ನನ್ನ ಹತ್ತಿರ ನಡೆಯುವುದಿಲ್ಲ. ನಾವು ಇರುವುದೇ ನಿಮ್ಮ ಸೇವೆ ಮಾಡುವುದಕ್ಕಾಗಿ ಎಂದು ಡಿಕೆ ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now