ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭವಾಗಿ ಇಂದಿಗೆ ನಾಲ್ಕು ದಿನವಾಗಿದೆ. ಇಂದು ಸದನದಲ್ಲಿ ಏನೆಲ್ಲಾ ಚರ್ಚೆಯಾಯ್ತು ಎಂಬ ಕಂಪ್ಲೀಟ್ ಡಿಟೈಲ್ ಇಲ್ಲಿದೆ.
* ವಿಪಕ್ಷ ನಾಯಕರು ಇಂದು ಕೂಡ ಕುರ್ಚಿ ವಿಚಾರವಾಗಿ ಧ್ವನಿ ಎತ್ತಿದರು. ಅದರಲ್ಲೂ ಸಿ ಅಶ್ವತ್ಥ್ ಅವರ ಹಾಡನ್ನು ಹಾಡುವ ಮೂಲಕ ಕಿಚಾಯಿಸಿದರು. ಕಾಣದ ಕುರ್ಚಿಗೆ ಹಂಬಲಿಸಿದೆ ಮನ.. ಕೂರಬಲ್ಲನೇ ಒಂದು ದಿನ ಎಂಬ ಸಾಲುಗಳನ್ನ ಹೇಳಿದರು.
* ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯ ಅವರನ್ನು ರೇಗಿಸಿದರು. ಸಿದ್ದರಾಮಯ್ಯ ಅವರು ಇತಿಹಾಸವನ್ನು ರಚನೆ ಮಾಡುತ್ತಾರೆ. ಆ ದಿನಕ್ಕಾಗಿ ಕಾಯುತ್ತಾ ಇದ್ದಾರೆ ಎಂದರು. 1950 ರಿಂದ ದಕ್ಷಿಣ ಕರ್ನಾಟಕದವರು 15 ಜನ ಮುಖ್ಯಮಂತ್ರಿ ಗಳಾಗಿದ್ದಾರೆ. ಉತ್ತರ ಕರ್ನಾಟಕದವರು 8 ಬಾರಿ ಆಗಿದ್ದಾರೆ. ಯಾವ ಮುಖ್ಯಮಂತ್ರಿಯೂ ಐದು ವರ್ಷಗಳನ್ನು ಪೂರೈಸಿಲ್ಲ. ಆರು ತಿಂಗಳು, ಒಂದು ವರ್ಷ ಅಂತಾ ಏನಾದರೂ ಭ್ರಷ್ಟಾಚಾರ ಆರೋಪ ಬಂದ ಇಳಿಸಲಾಗಿದೆ ಎಂದರು.
* ಶಾಸಕ ರಾಜು ಕಾಗೆ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿದರು. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಈಗ ಶಾಸಕರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಂದರೆ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಅಂತ ಹೇಳಬೇಕಾ ಅಥವಾ ಬೇರೊಂದು ಪದ ಬಳಸಬೇಕಾ ಎಂದು ಕೇಳಿದರು.
* 224 ಶಾಸಕರು ಹಾಗೂ ಕನ್ನಡ ಸಂಘಟನೆಗಳು ವಿರೋಧ ಮಾಡಿದರೂ ನಾನು ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬದ್ಧವಾಗಿದ್ದೇನೆ ಎಂದು ಕಾಗೆ ಹೇಳಿದರು. ಈ ಬಗ್ಗೆ ನಾನು ಸಾಯುವವರೆಗೆ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡುತ್ತಾ, ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷೆ ಬೇಡಬೇಕಾ ಎಂದಯ ರಾಜು ಕಾಗೆ ಪ್ರಶ್ನೆ ಮಾಡಿದರು.






