ಬೆಂಗಳೂರು: ಧರ್ಮಸ್ಥಳ ಬುರುಡೆ ಕೇಸ್ ಎಷ್ಟು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ನಮ್ಮ ರಾಜ್ಯ ಮಾತ್ರವಲ್ಲ ದೇಶಕ್ಕೆ ತಲುಪುವಷ್ಟು ದೊಡ್ಡ ಸುದ್ದಿಯಾಗಿತ್ತು. ಇದೀಗ ಎಸ್ಐಟಿ ವರದಿಯಲ್ಲಿ ಏನೆಲ್ಲಾ ಷಡ್ಯಂತ್ರ ನಡೆದಿತ್ತು ಎಂಬುದು ಬೆಳಕಿಗೆ ಬಂದಿದೆ. ದೂರು ಕೊಟ್ಟವರೇ ಆರೋಪಿಗಳ ಸ್ಥಾನದಲ್ಲಿ ನಿಂತಿದ್ದಾರೆ.
A1 ಚಿನ್ನಯ್ಯನಿಂದ ಹಿಡಿದು A6 ಸುಜಾತ ಭಟ್ ವರೆಗೂ ಆರೋಪಿಗಳ ಸ್ಥಾನದಲ್ಲಿ ನಿಂತಿದ್ದಾರೆ. 30-35 ದಿನಗಳ ಒಳಗೇನೆ ಸಾಕ್ಷಿಗಳ ಸಮೇತ ವರದಿಯನ್ನ ಒಪ್ಪಿಸಿದೆ. ಸದ್ಯ ಆರೋಪಿಗಳ ವಿರುದ್ಧ ಯಾವೆಲ್ಲಾ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂಬ ಮಾಹಿತಿ ಇಲ್ಲಿದೆ.
*BNS 211 (A) ಅಪರಾಧಿಕ ಬೆದರಿಕೆ
* BNS 230 ಉದ್ದೇಶಪೂರ್ವಕವಾಗಿ ನಿರ್ಬಂಧ
* BNS 231- ಒಬ್ಬ ವ್ಯಕ್ತಿಯನ್ನು ನಿಯಂತ್ರಿತ ಸ್ಥಳದಲ್ಲಿ ಇಡುವುದು
* BNS 229 ಒಬ್ಬ ವ್ಯಕ್ತಿಗೆ ಅವನ ಇಚ್ಛೆಗೆ ವಿರುದ್ಧವಾಗಿ ಬಲ ಪ್ರಯೋಗ ಮಾಡುವುದು

* BNS 227 ಶಾರೀರಿಕ ಹಾನಿ ಮಾಡುವ ಉದ್ದೇಶ
* BNS 228 ಅಪರಾಧಿಕ ಬಲ ಬಳಕೆ
* BNS 240 ದಬ್ಬಾಳಿಕೆ ಮೂಲಕ ಬೆದರಿಸುವುದು

* BNS 233 ಒಬ್ಬರನ್ನು ತಪ್ಪಾಗಿ ನಂಬಿಸಿ ಮೋಸ ಮಾಡುವುದು
ಈ ಸೆಕ್ಷನ ಗಳನ್ನು ಆರೋಪಿಗಳ ಮೇಲೆ ಕೇಸ್ ಹಾಕಲಾಗಿದೆ.
ಈ ಕಾಯ್ದೆಗಳ ಪ್ರಕಾರ ಸುಮಾರು 10 ವರ್ಷಗಳ ಕಾಲ ಶಿಕ್ಷೆ ನೀಡುವ ಸಾಧ್ಯತೆ ಇದೆ. ಗಿರೀಶ್, ತಿಮ್ಮಣ್ಣ, ಚೆನ್ನಯ್ಯ, ಸುಜಾತ ಭಟ್ ಅವರ ಹೆಸರುಗಳನ್ನ ಉಲ್ಲೇಖ ಮಾಡಿ, ವರದಿಯನ್ನ ಒಪ್ಪಿಸಿದೆ. ಮುಂದೆ ಯಾರೆಲ್ಲ ಈ ಕೇಸ್ ನಲ್ಲಿ ಇನ್ವಾಲ್ ಆಗಿದ್ರು ಅವರೆಲ್ಲರ ತನಿಖೆಯನ್ನು ನಡೆಸಿ, ಮತ್ತೊಂದು ವರದಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.










