ದಕ್ಷಿಣ ಕನ್ನಡ: ಕಾಂತಾರ ಪಾರ್ಟ್ 1 ಹಾಗೂ ಕಾಂತಾರ ಸಿನಿಮಾದಿಂದ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಫೇಮಸ್ ಆಗಿದ್ದಾರೆ. ದೈವಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗ್ತಿರುವ ವೈರಲ್ ಸುದ್ದಿ ಬಗ್ಗೆ ಇದೀಗ ದೈವರಾಧಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಾಪ್ಟರ್ 1 ಸಕ್ಸಸ್ ಆದ ಬೆನ್ನಲ್ಲೇ ಕೋಲಾ ಸೇವೆ ಮಾಡಿಸಿದ್ದರು. ಇದು ಕೂಡ ಸಾಕಷ್ಟು ವೈರಲ್ ಆಗಿತ್ತು.
ದೈವರಾಧಕರಾದ ತಮ್ಮನ್ನ ಶೆಟ್ಟಿ ಮಾತನಾಡುತ್ತಾ, ಕಾಂತಾರದಿಂದ ಈಗ ದೈವಗಳು ಬೀದಿಗೆ ಬಂದಿವೆ. ಕಾಂತಾರದ ಹೆಸರಿನಲ್ಲಿ ಆಗಿರುವ ಹರಕೆಯಿಂದ ಸಂಪೂರ್ಣ ದೈವಾರಾಧನೆ ಮುಗಿಯಿತು ಅಂತ ತಿಳಿದುಕೊಳ್ಳುವ ಮಟ್ಟಕ್ಕೆ ಬಂದಿದೆ. ಯಾಕಂದ್ರೆ ಅಲ್ಲಿ ಮೊನ್ನೆ ನಡೆದ ಹರಕೆಯ ಕೋಲ ನಿಯಮ ಪ್ರಕಾರ ಆಗಿಲ್ಲ. ಹರಕೆಗೂ ಒಂದು ವ್ಯವಸ್ಥೆಗಳನ್ನು ಅಂದಿನ ಕಾಲದಲ್ಲಿಯೇ ಮಾಡಿದ್ದಾರೆ. ಹರಕೆಯ ನೇಮ ಎಂಬುದು ಇಲ್ಲ. ಧರ್ಮ ನೇಮ ಇದೆ. ಸಂಕ್ರಮಣ ಕೊಡುವಂತಹ ನಿಯಮ ಇದರ. ನವರಾತ್ರಿ ಪೂಜೆ ಅಮನತ ಇದರ. ಅದೆಲ್ಲವೈ ಹರಕೆಯ ಭಾಗಗಳು. ಆದರೆ ಹರಕೆಯ ನೇಮ ಎಂಬುದು ಇಲ್ಲ.
ಧರ್ಮ ನೇಮ ಅಂತ ಒಬ್ಬ ಗುತ್ತಿನವನು ಆಯ್ಕೆ ಆಗಬೇಕಿದ್ದರೆ ಅವನು ಧರ್ಮ ಕೊಟ್ಟು ಮಾಡುವಂತಹ ನಿಯಮ ಇದೆ. ಒಂದು ವೇಳೆ ಅವರು ಮೊನ್ನೆ ಧರ್ಮ ನೇಮವೇ ಮಾಡಿದಿದ್ದರೆ ಆ ಸಮಯ ಕೂಡ ಧರ್ಮ ನೇಮದ್ದಲ್ಲ. ಅವರು ಮಾಡಿದ್ದು ದೈವಾರಾಧನೆ ನಿಯಮಕ್ಕೆ ವಿರುದ್ಧವಾಗಿದೆ ಎಂದು ದೈವರಾಧಕರಾದ ತಮ್ಮನ್ನ ಬೇಸರ ಹೊರ ಹಾಕಿದ್ದಾರೆ. ಕಾಂತಾರ ಸಿನಿಮಾ ಬಂದಾಗಿನಿಂದ ಜನ ಅದರಲ್ಲಿ ಬರುವ ದೈವಗಳನ್ನ ಅನುಕರಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿಯೇ ಕರಾವಳಿಗರು ಬೇಸರವನ್ನು ಹೊರ ಹಾಕುತ್ತಿದ್ದಾರೆ.


















