ಚಿತ್ರದುರ್ಗ. ಚಿತ್ರದುರ್ಗ ನಗರಸಭೆಯ 2026-27ನೇ ಸಾಲಿನ ಆಯ-ವ್ಯಯ ತಯಾರಿ ಬಗ್ಗೆ ಸಾರ್ವಜನಿಕ ಸಲಹಾ ಸೂಚನಾ ಸಭೆಯನ್ನು ನಗರಸಭೆ ಆಡಳಿತಾಧಿಕಾರಿಗಳು, ಪೌರಾಯುಕ್ತರು ಅಧ್ಯಕ್ಷತೆಯಲ್ಲಿ ಇದೇ ಡಿಸೆಂಬರ್ 04ರಂದು ಬೆಳಿಗ್ಗೆ 11ಕ್ಕೆ ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ನಗರದ ಗಣ್ಯ ವ್ಯಕ್ತಿಗಳು, ವರ್ತಕರು, ಹಿರಿಯ ನಾಗರೀಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಿವೃತ್ತ ಅಧಿಕಾರಿ, ನೌಕರರು, ಪತ್ರಕರ್ತರು, ಸಾರ್ವಜನಿಕರು ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




