ಸಮಂತಾ ಮದುವೆಯಾದ ಪದ್ಧತಿ ಯಾವುದು..? ಇಶಾ ಫೌಂಡೇಶನ್ ನಲ್ಲಿ ಭೂತ ಶುದ್ಧಿ ಪದ್ಧತಿ ಅನುಸರಿಸೋದು ಯಾಕೆ..?

1 Min Read

ಟಾಲಿವುಡ್ ನಟಿ ಸಮಂತಾ ನಿನ್ನೆಯಷ್ಟೇ ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ಮದುವೆಯಾಗಿದ್ದಾರೆ. ಇಶಾ ಫೌಂಡೇಶನ್ ನಲ್ಲಿ ಇಬ್ಬರ ವಿವಾಹ ಮಹೋತ್ಸವ ತುಂಬಾ ಸರಳವಾಗಿ ನೆರವೇರಿದೆ. ವಿಶೇಷ ಅಂದ್ರೆ ಭೂತ ಶುದ್ಧಿ ಪದ್ಧತಿಯಲ್ಲಿ ಇಬ್ಬರ ವುವಾಹ ನೆರವೇರಿದೆ. ಇಶಾ ಯೋಗ ಸೆಂಟರ್ ನಲ್ಲಿರುವ ಲಿಂಗ ಭೈರವಿ ದೇವಾಲಯದ‌ ಮುಂದೆ ಮದುವೆಯಾಗಿದ್ದಾರೆ.

ಈ ಭೂತ ಶುದ್ಧಿ ಪದ್ಧತಿ ಎಂದರೆ ಗಾಳಿ, ನೀರು, ಅಗ್ನಿ, ಪೃಥ್ವಿ, ಆಕಾಶಗಳ ಆರಾಧನೆಯನ್ನು ಮಾಡಲಾಗುತ್ತದೆ. ಪಂಚಭೂತಗಳ ಆರಾಧನೆ ಮತ್ತು ಕೆಲವು ಮಂತ್ರಗಳ ಮೂಲಕ ಆಧ್ಯಾತ್ಮಿಕ ಶುದ್ಧಿ, ಪೂರ್ವಜನ್ಮದ ಕರ್ಮಗಳ ಶುದ್ಧಿಗಳನ್ನು ಮಾಡಿ ವಜವಾಹ ಕಾರ್ಯ ಮಾಡಲಾಗುತ್ತದೆ. ಈ ರೀತಿಯ ವಿವಾಹದಿಂದ ದಂಪತಿಗಳಲ್ಲಿ ಸಾಮರಸ್ಯ ಲ, ವೈಯಕ್ತಿಕ ಪ್ರಗತಿ ನತ್ತು ಶಾಂತಿ ಹೆಚ್ಚಾಗಿ ನೆಲೆಸುತ್ತದೆ ಎಂಬುದನ್ನು ನಂಬಲಾಗುತ್ತದೆ. ಸಮಂತಾ ಹಾಗೂ ರಾಜ್ ಭೈರವಿ ದೇವಿಯ ಮೂರ್ತಿಯ ಎದುರು ಕೂತು ಪುಣ್ಯ ಅಗ್ನಿಯ ಎದುರು ಪೂಜೆಗಳನ್ನು ಮಾಡಿದ್ದಾರೆ. ಲಿಂಗ ಭೈರವಿ ಸದ್ಗುರುಗಳಿಂದ ಈಶಾ ಯೋಗ ಕೇಂದ್ರದಲ್ಲಿ ಪ್ರಾಣಪ್ರತಿಷ್ಠೆಯ ಮೂಲಕ ಪ್ರತಿಷ್ಠಾಪಿಸಲ್ಪಟ್ಟಿದೆ.

ಸಮಂತಾ, ಮೊದಲನೇ ಮದುವೆ ಅಂದ್ರೆ ನಾಗಚೈತನ್ಯ ಜೊತೆಗೆ ಡಿವೋರ್ಸ್ ಆದ ಮೇಲೆ ಆಧ್ಯಾತ್ಮದತ್ತ ಗಮನ ಹರಿಸಿದ್ದರು. ಆ ಸಂದರ್ಭದಲ್ಲಿ ಈಶಾ ಫೌಂಡೇಶನ್ ಗೆ ಭೇಟಿ ನೀಡಿದ್ದರು. ಸದ್ಗುರುಗಳ ಮೋಟೀವೇಶನ್ ಮಾತುಗಳನ್ನು ಕೇಳುತ್ತಾ ಬಂದರು. ಬಳಿಕ ಅಲ್ಲಿರುವ ಲಿಂಗ ಭೈರವಿಯ ಭಕ್ತರಾದರು, ಪೂಜಿಸುವುದಕ್ಕೆ ಶುರು ಮಾಡಿದರು. ಸಮಂತಾ ಲಿಂಗ ಭೈರವಿಯ ಆರಾಧಕಿಯಾದರು. ಈಗ ತಮ್ಮ ಜೀವನದ ಬಹು ಮುಖ್ಯ ಘಟ್ಟವನ್ನು ಅಲ್ಲಿಯೇ ಶುರು ಮಾಡಿದ್ದಾರೆ.

Share This Article