Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಡಿಯೂರಪ್ಪ ಅವರು ಕಣ್ಣೀರಾಕಿ ಹೊರ ನಡೆದ ಇತಿಹಾಸ ನೆನಪಿದೆ : ಪ್ರಿಯಾಂಕ್ ಖರ್ಗೆ

---Advertisement---

ಬೆಂಗಳೂರು: ಸರ್ಕಾರದ ಕುರ್ಚಿ ಕದನ ಗೊಂದಲ ಇನ್ನು ಇದೆಯಾ ಎಂಬ ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ನಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನ ತಿಳಿಸಿದ್ದಾರೆ. ಅದನ್ನ ಬಹಿರಂಗವಾಗಿ ಮಾಧ್ಯಮ ಸ್ನೇಹಿತರ ಜೊತೆಗೆ ಕೂತು ಮಾತನಾಡಿದ್ದಾರೆ. ಆ ಇಬ್ಬರೆ ಹೇಳಿದ ಮೇಲೆ ನಾನ್ಯಾರು ಅದನ್ನ ಹೇಳುವುದಕ್ಕೆ. (ಊಟ – ತಿಂಡಿಗೆ) ಕರೆದರು ಅದು ಹೆಡ್ಕೈನ್. ಕರೆಯದೆ ಇದ್ದರು ಹೆಡ್ಲೈನ್. ಕರೆಯದೆ ಇದ್ದರೆ ಸಮನ್ವಯ ಇಲ್ಲ ಅಂತೀರ. ಕರೆದರು ಹೇಡ್ಲೈನ್ ಮಾಡ್ತೀರಿ. ಯಾಕೆ ಅದನ್ನ ಹೇಳಿ ಕೇಳಿ ಮಾಡಬೇಕಾ. ಯಾಕೆ ಡೈಲಿ ಊಟ – ತಿಂಡಿ ಮಾಡಲ್ವಾ. ಈ ಹಿಂದೆ ಪರಮೇಶ್ವರ್ ಅವರು ಮಾಡಿದಾಗ ಅದಕ್ಕೂ ಆಕ್ಷೇಪ, ಜಾರಕಿಹೊಳಿ ಅವರು ಮಾಡಿದಾಗ ಅದಕ್ಕೂ ಸುದ್ದಿ. ಹಾಗಾದ್ರೆ ನಾವೆಲ್ಲಾ ಸ್ನೇಹುತರು ಸೇರುವುದೇ ಬೇಡ್ವಾ..? ಎಂದಿದ್ದಾರೆ.

ಇದೆ ವೇಳೆ ರಾಹುಲ್ ಗಾಂಧಿ ಅವರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದು, ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದರ ಉದ್ದೇಶ ಬೇರೆನೆ ಆಗಿತ್ತು. ಅದನ್ನ ನಿಮ್ಮ ಮುಂದೆ ಕೂಡ ಹೇಳಿದ್ದೀನಿ. ಅದನ್ನೇ ದಿನಾ ಕೇಳ್ಕೋಳ್ತಾ ಕೂತರೆ ಹೇಗೆ..? ಈಗ ಸಿಎಂ ಹಾಗೂ ಡಿಸಿಎಂ ಇಬ್ಬರನ್ನು ಭೇಟಿಯಾದೆ. ನಿಮ್ಮ‌ ಸಮ್ಮುಖದಲ್ಲಿಯೇ ಭೇಟಿಯಾಗಿದ್ದೇನೆ. ನಿಮ್ಮ ಕ್ಯಾಮೆರಾಗಳು ಬಿಡ್ತಾವಾ..? ಈಗ ನಾನು ಸಚಿವ. ಸಿಎಂ, ಡಿಸಿಎಂ ಭೇಟಿಯಾಗದೆ ಇನ್ನ್ಯಾರಿಗೆ ಭೇಟಿಯಾಗ್ಲಿ ಎಂಬ ಪ್ರಶ್ನೆ ಕೇಳಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ರಾಜ್ಯದ ವಿಚಾರವನ್ನ ತಿಳಿಸಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ನಮ್ಮ ನಾಯಕರೆ. ಕೇಳಿದ್ರೆ ಹೇಳ್ತೀನಿ. ಆದ್ರೆ ನಮ್ಮದೇನೋ ವೈಯಕ್ತಿಕ ವಿಚಾರಕ್ಕೆ ಭೇಟಿಯಾಗಿ ಬಂದಿದ್ದೀನಿ ಎಂದಿದ್ದಾರೆ. ಬಿಜೆಪಿಯವರು ಒಂದು ಸಲ ಆದ್ರೂ ಸ್ವಂತ ಬಲದ ಮೇಲೆ ಬಂದಿದ್ದಾರಾ..? ಒಂದು ಸಲ ಐದು ಮುಖ್ಯಮಂತ್ರಿಗಳಿದ್ದರು. ಇವರು ಸ್ಥಿರತೆ, ಅಧಿಕಾರ ಹಂಚಿಕೆ ಬಗ್ಗೆ ಮಾತಾಡ್ತಾರೆ. ಇದೇ ಬ್ಯಾಂಕ್ವೆಟ್ ಹಾಲ್ ನಿಂದ ಯಡಿಯೂರಪ್ಪ ಅವರು ಕಣ್ಣೀರಾಕಿ ಹೊರ ನಡೆದ ಇತಿಹಾಸ ನಡೆದಿದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now