ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕದನ ಜೋರಾಗಿಯೇ ಇದೆ. ಇದನ್ನ ಹೈಕಮಾಂಡ್ ನಾಯಕರೇ ಬಗೆಹರಿಸಬಹುದಾದ ಸಮಸ್ಯೆ ಇದಾಗಿದೆ. ಹೀಗಾಗಿ ಹೈಕಮಾಂಡ್ ಕೂಡ ಎಂಟ್ರಿಯಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹೈಕಮಾಂಡ್ ನಾಯಕರು ನಂಗೆ ಹಾಗೂ ಅವರಿಗೆ ಇಬ್ಬರಿಗೂ ಹೈಕಮಾಂಡ್ ನಾಯಕರು ಕರೆದಿದ್ದಾರೆ ಎಂಬ ಮಾಹಿತಿಯನ್ನ ನೀಡಿದ್ದಾರೆ.
ಬ್ರೇಕ್ ಫಾಸ್ಟ್ ಗೆ ಕರೆದಿದ್ದೀವಿ. ಬ್ರೇಕ್ ಫಾಸ್ಟ್ ಗೆ ಬಂದಾಗ ಇದೆಲ್ಲ ಚರ್ಚೆ ಮಾಡ್ತೀವಿ. ನನ್ನ ಸ್ಟ್ಯಾಂಡ್ ನಲ್ಲಿಯೇ ಇರ್ತೀನಿ. ಹೈಕಮಾಂಡ್ ನಾಯಕರು ಏನು ಹೇಳುತ್ತಾರೆ, ಅದನ್ನೇ ಫಾಲೋ ಮಾಡ್ತೀನಿ. ಇಂದು ಅದನ್ನೇ ಹೇಳೋದು ನಾಳೆಯು ಅದನ್ನೇ ಹೇಳೋದು. ಅವರು ಕೂಡ ಸಾಕಷ್ಟು ಸಲ ಅದನ್ನೇ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದಾನೂ ಈ ಕುರ್ಚಿ ಕದನದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಸಿದ್ದರಾಮಯ್ಯ ಅವರು ಕೂಡ ಹೈಕಮಾಂಡ್ ನಾಯಕರು ಏನು ಹೇಳ್ತಾರೋ ಹಾಗೇ ಇರ್ತೀನಿ ಅಂತಾರೆ. ಇನ್ನೊಂದು ಕಡೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಟಾಕ್ ವಾರ್ ಹಾಗೇ ಸೈಲೆಂಟ್ ಆಗಿ ನಡೀತಾ ಇದೆ. ಕಡೆಗೆ ಈ ಯುದ್ಧ ಎಲ್ಲಿ ಹೋಗಿ ನಿಲ್ಲುತ್ತೆ ಎಂಬುದು ಮಾತ್ರ ಗೊತ್ತಿಲ್ಲ. ಸದ್ಯ ಹೈಕಮಾಂಡ್ ಕಡೆಯಿಂದ ಇಬ್ಬರಿಗೂ ಬುಲಾವ್ ಬಂದಿದ್ದು, ಭೇಟಿಯ ಬಳಿಕವಷ್ಟೇ ಸಮಸ್ಯೆ ಪರಿಹಾರದ ಬಗ್ಗೆ ಫೈನಲ್ ಆನ್ಸರ್ ಸಿಗಲಿದೆ. ಸದ್ಯಕ್ಕಂತು ರಾಜ್ಯದ ಜನತೆ ನಿಂತು ನೋಡುವಂತ ಪರಿಸ್ಥಿತಿ ಸಿಎಂ ಕುರ್ಚಿಯ ವಿಚಾರಕ್ಕೆ ಶುರುವಾಗಿದೆ. ಎರಡೂವರೆ ವರ್ಷವಾದ ಮೇಲೆ ಅಧಿಕಾರ ಹಸ್ತಾಂತರ ಮಾಡಬೇಕು ಎಂಬ ಡೀಲ್ ಆಗಿತ್ತು ಅಂತ ಗೊತ್ತೆ ಇಲ್ಲ ಅಂತ ಹಲವರು ಹೇಳ್ತಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











