Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿಥಲಗೊಂಡ ನೀರಿನ ಓವರ್ ಹೆಡ್ ಟ್ಯಾಂಕ್ : ಭಯದಲ್ಲಿ ಗ್ರಾಮಸ್ಥರು

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್,ಚಳ್ಳಕೆರೆ, ನವೆಂಬರ್. 22 : ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಶಿಥಿಲಗೊಂಡ ಓವರ್ ಹೆಡ್ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದ್ದು, ಇಲ್ಲಿನ ಅಕ್ಕಪಕ್ಕದಲ್ಲಿ ವಾಸ ಮಾಡುವಂತಹ ಗ್ರಾಮಸ್ಥರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ.

ಈ ನೀರಿನ ಓವರ್ ಟ್ಯಾಂಕ್ ತುಂಬಾ ಹಳೆಯದಾಗಿದ್ದು, ಸರಿಯಾದ ನಿರ್ವಹಣೆ ಕೊರತೆಯಿಂದಾಗಿ ಹಲವು ವರ್ಷಗಳಿಂದ ಸ್ವಚ್ಛತೆ ಇಲ್ಲದಂತಾಗಿದೆ. ಇಲ್ಲಿನ ಜನರು ಅನಿವಾರ್ಯವಾಗಿ ಇದೇ ನೀರನ್ನು ಸೋಸಿಕೊಂಡು ಬಳಸಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ.

ಕಂಬಗಳು ಸಿಮೆಂಟ್ ಕಳಚಿ, ಕಬ್ಬಣ ತುಕ್ಕು ಹಿಡಿದು ದೃಢತ್ವ ಕಳೆದುಕೊಂಡು ಅಸ್ತಿ ಪಂಜರದಂತೆ ಕಾಣುತ್ತಿದೆ. ಗಲೀಜು ತುಂಬಿರುವ ಟ್ಯಾಂಕ್ ಗೆ ರಾತ್ರಿ ಪೂರ ನೀರು ತುಂಬಿಸಲಾಗುತ್ತದೆ. ಟ್ಯಾಂಕ್ ತುಂಬಿ ನೀರು ವ್ಯರ್ಥವಾಗಿ ಹರಿದು ಹೋದರು ನೀರು ನಿಲ್ಲಿಸುವುದಿಲ್ಲ. ಅಕ್ಕ ಪಕ್ಕದಲ್ಲಿ ಮನೆಗಳು ಇರುವ ಕಾರಣ ನೀರು‌ಮನೆ ಮೇಲೆ ಬೀಳುತ್ತಿವೆ.

ಅಧಿಕಾರಿಗಳು, ಜನಪ್ರತಿನಿದಿಗಳು‌, ಕಂಡೂ ಕಾಣದಂತ್ತಿದ್ದಾರೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲ. ಅಪಾಯ ತಂದೊಡ್ಡುವ ನೀರಿನ ಟ್ಯಾಂಕ್ ಯಾವಾಗ ಬಿಡುತ್ತದೋ ಎನ್ನುವ ಭಯದ ವಾತವರಣದಲ್ಲಿ ನಾವಿದ್ದೆವೆ ಎನ್ನುತ್ತಾರೆ ಟ್ಯಾಂಕಿನ ಅಕ್ಕ ಪಕ್ಕದ ಮನೆವರಾದ ಮೂರ್ತಪ್ಪ., ಪುಟ್ಟಕ್ಕ, ರಂಜನಿ, ಶಾಂತಮ್ಮ, ತಿಪ್ಪೀರಮ್ಮ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...