Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ಬೆಳಗೆರೆಯಲ್ಲಿ ಜಿಲ್ಲಾಂತರ್ಗತ ಪ್ರೌಢಶಾಲೆಗಳ ಕನ್ನಡ ಚರ್ಚಾ ಸ್ಪರ್ಧೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ನವೆಂಬರ್. 21 :ಪ್ರತಿವರ್ಷ ನಮ್ಮ ಶಾಲೆಯಲ್ಲಿ ದಿವಂಗತ ಕುಸುಮಾನಾಯಕ್ ಸ್ಮಾರಕವಾಗಿ ಜಿಲ್ಲಾಂತರ್ಗತ ಪ್ರೌಢಶಾಲೆಗಳ ಕನ್ನಡ ಚರ್ಚಾ ಸ್ಪರ್ಧೆಯನ್ನ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ‌ ಒಟ್ಟು15 ಪ್ರೌಢಶಾಲೆಗಳಿಂದ 30 ವಿದ್ಯಾರ್ಥಿಗಳು ಭಾಗವಹಿಸಿ ಪರ ಹಾಗೂ ವಿರೋಧವಾಗಿ ಮಂಡಿಸಿದರು ಎಂದು ಶ್ರೀಶಾರದ ಮಂದಿರ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಕೆ.ರಾಜಣ್ಣ ಹೇಳಿದರು.

ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ. ಬಿ ಸೀತಾರಾಮಶಾಸ್ತ್ರಿ ಪ್ರೌಢಶಾಲೆ‌ ಹಾಗೂ‌ ಪದವಿ ಪೂರ್ವ ಕಾಲೇಜಿನ ಪ್ರಾರ್ಥನ ಮಂದಿರದಲ್ಲಿ ನಡೆದ ದಿವಂಗತ ಕುಸುಮಾ ನಾಯಕ್ ಸ್ಮಾರಕ ಜಿಲ್ಲಾಂತರ್ಗತ ಪ್ರೌಢಶಾಲೆಗಳ ವಾರ್ಷಿಕ ಚರ್ಚ್ ವಿಷಯ ಪೋಷಕರಲ್ಲಿನ ಮಕ್ಕಳ ಅಭಿವೃದ್ಧಿ ಭ್ರಮೆಯ ಆಂಗ್ಲ ಭಾಷೆ ಮೋಹ,ಮಾತೃ ಭಾಷೆಗೆ ಶಿಕ್ಷಣಕ್ಕೆ ಮಾರಕವಾಗಿದೆ ಎನ್ನು ವಿಷಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು..

ಸರ್ಕಾರಿ ಪಿಯು‌ಕಾಲೇಜಿನ ಉಪನ್ಯಾಸಕ ಹಾಗೂ ಚರ್ಚ್ ಸ್ಪರ್ಧೆಯ ತೀರ್ಪುಗಾರರಾದ ಬಿ.ಎಸ್.ದತ್ತಾತ್ರೇಯ ಮಾತನಾಡಿ.
ವಿದ್ಯಾರ್ಥಿ ಗಳು ಪಠ್ಯ ಪುಸ್ತಕದ ಜತೆಗೆ ಕಥೆ ಕಾದಂಬರಿ ಹಾಗೂ ಪತ್ರಿಕೆಗಳ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು‌.ಈ. ಶಾಲೆಯ ವಾತವರಣ ನಿಜಕ್ಕೆ ಹಿಂದಿನ ಕಾಲದ ಗುರುಕುಲವನ್ನ ನೆನಪಿಸುತ್ತಿದೆ ಸಾಹಿತಿಗಳಾದ ದಿ.ಕೃಷ್ಣಶಾಸ್ತ್ರಿಗಳು ಸಾಹಿತ್ಯ ಕೃಷಿ ಜತೆಗೆ ಶಿಕ್ಷಕ್ಕೆ ಹೆಚ್ಚು ಮಹತ್ವ ನೀಡಿ ಈ ಭಾಗದಲ್ಲಿ ಶಾಲೆ ತೆರೆಯುವುದರ ಮೂಲಕ ಈ ಭಾಗದ ನೂರಾರು ಬಡಮಕ್ಕಳ ಭವಿಷ್ಯ ಕ್ಕೆ ಭದ್ರ ಬುನಾದಿ ಹಾಕಿ ದಾರಿದೀಪವಾಗಿದ್ದಾರೆ.

ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿ ಗಳು ಇಂದು ಸರ್ಕಾರಿ‌ ಹುದ್ದೆಗಳಲ್ಲಿದ್ದಾರೆ.ಶಾಸ್ತ್ರೀಗಳಿಗೆ ಸ್ಫೂರ್ತಿ ಯಾಗಿ ಮುಕುಂದರ ಸ್ವಾಮಿಗಳ ಆಶಿರ್ವಾದ ಸಿಕ್ಕ ಹಿನ್ನೆಲೆ ಈ ಶಾಲೆ ಗುರುಕುಲವಾಗಿದೆ.
ವಿದ್ಯಾರ್ಥಿಗಳು ಶಿಕ್ಷಣ ದ ಜತೆಗೆ ಸಂಸ್ಕಾರ ಕಲಿತುಕೊಳ್ಳಬೇಕು,ಈ ಶಾಲೆಯಲ್ಲಿ ಸಂಸ್ಕಾರ ವಿದೆ.ವಿದ್ಯಾರ್ಥಿಗಳು ಪಠ್ಯದ ಜತೆಗೆ ಕತೆ,ಕಾದಂಬರಿ, ವೃತ್ತ ಪತ್ರಿಕೆಗಳನ್ನ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ,ಪಠ್ಯಗಳು ತರಗತಿಗಳ ಉತ್ತಿರ್ಣಕ್ಕೆ ಕಾರಣವಾದರೆ ‌ಪತ್ರಿಕೆಗಳು ಪದಗಳ ಜೋಡಣೆ,ಹಾಗೂ ದೇಶದ ಮೂಲೆ ಮೂಲೆಗಳಲ್ಲಿ ವಿಷಯಗಳ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರು ಶಿಕ್ಷಣ ಹೆಚ್ಚು ಮಹತ್ವ ‌ನೀಡಬೇಕು. ಇಂತಹ ಕಾರ್ಯಕ್ರಮ ಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು..

ಸರ್ಕಾರಿ ಪದವಿ ಪೂರ್ವ ಕಾಲೇಜೀನ ನಿವೃತ್ತಿ ಪ್ರಚಾರ್ಯ ಎಂ.ರವೀಶ ಮಾತನಡಿ,ಶಾಲೆ ಕಾಲೇಜುಗಳಲ್ಲಿ ಪಠ್ಯದ ಜತೆಗೆ ಚರ್ಚಾ ಸ್ಪರ್ದೆ,ಆಶುಭಾಷಣ ಸ್ಪರ್ಧೆ, ಸಂಗೀತ,ಕೋಲಾಟ ,ಜಾನಪದ ಕಾರ್ಯಕ್ರಮ ಸೇರಿದಂತೆ ‌ ಪಠ್ಯಾತರ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಕ್ಕಳನ್ನ ಪ್ರತಿಭೆಗಳನ್ನ ಗುರಿತಿಸಲು ಸಾಧ್ಯ ವಾಗುತ್ತದೆ .ಉತ್ತಮ‌ಪ್ರಜೆಗಳನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಚರ್ಚಾಸ್ಪರ್ಧೆ ಕಾರ್ಯಕ್ರಮ ದಲ್ಲಿ ನಿವೃತ್ತಿ ಮುಖ್ಯೋಪಾಧ್ಯಯ ಹಾಗೂ ತೀರ್ಪು ಗಾರರಾದ ಎಚ್ ಗಂಗಾಧರಪ್ಪ ಮಾತನಾಡಿದರು..

ಈ ಕಾರ್ಯಕ್ರಮದಲ್ಲಿ ಶಾರದ ಮಂದಿರ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಮಂಜುನಾಥ, ಮಾರ್ಗದರ್ಶಕರಾದ ಶ್ರೀಪಾದ ಪೂಜಾರ್, ಬಿ.ಸೀತಾರಾಮಶಾಸ್ತ್ರಿ ಪದವಿಪೂರ್ವ ಕಾಲೇಜಿನ ಪಾಂಶುಪಾಲ ಚನ್ನಕೇಶವ, ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್ ವೀರಣ್ಣ,ಉಪನ್ಯಾಸಕರಾದ ಅಬ್ದುಲ್ ವಾಹಿದ್, ಯಜ್ಞವಲ್ಕ ಶಿಕ್ಷಕರಾದ ಗರೀಶ ಚಿದಾನಂದ ರಾಘವೇಂದ್ರ ಸುಹಾಸ್ ಶಶಿಕಲಾ ಮಿನಾಕ್ಷ್ಕಿ ಜ್ಯೋತಿ ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now