Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರು ದರೋಡೆ ಕೇಸಲ್ಲಿ ತಗಲಾಕಿಕೊಂಡವರು ದೊಡ್ಡವರು..!

---Advertisement---

ಬೆಂಗಳೂರು: ಹಾಡಹಗಲೇ ಏಳು ಕೋಟಿ ಕದ್ದು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಆರೋಪಿಗಳು ತಗಲಾಕಿಕೊಂಡಿದ್ದಾರೆ. ಹೇಗೆಲ್ಲಾ ಮಾಸ್ಟರ್ ಪ್ಲ್ಯಾನ್ ಆಯ್ತು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಈ ಕೇಸಲ್ಲಿ ಕಾನ್ಸ್‌ಟೇಬಲ್ ಲಾಕ್ ಆಗಿದ್ದಾರೆ. ಹೇಗಿದೆ ಅಂದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ರಾಬರಿ ಮಾಸ್ಟರ್ ಮೈಂಡ್ ಪೊಲೀಸ್ ಠಾಣೆಯಲ್ಲಿಯೇ ಇರುವಾಗ ದರೋಡೆಕೋರರಿಗೆ ದರೋಡೆ ಮಾಡಿ ತಪ್ಪಿಸಿಕೊಳ್ಳುವುದು ಕಷ್ಟವಾ..?

ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನನ್ನ ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ. ದರೋಡೆಗೆ ಬಳಿಸಿದ ಕಾರುಗಳು, ಪೊಲೀಸರ ದಿಕ್ಕನ್ನ ಬದಲಾಯಿಸುವ ಐಡಿಯಾವನ್ನು ಈತನೇ ಕೊಟ್ಟನಾ ಎಂಬೆಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಕೇವಲ ಕಾನ್ಸ್‌ಟೇಬಲ್ ಮಾತ್ರವಲ್ಲ ಸಿಎಂಎಸ್ ಮಾಜಿ ಉದ್ಯೋಗಿಯ ಕೈವಾಡವೂ ಇದರಲ್ಲಿ ಇದೆ ಎನ್ನಲಾಗ್ತಾ ಇದೆ. ಈ ಹಿಂದೆ ಕೆಲಸ ಮಾಡುತ್ತಲೇ ರಾಬರಿಗೆ ಯತ್ನಿಸಿದ್ದರು ಈ ಮಾಜಿ ಉದ್ಯೋಗಿ. ಈಗ ಈ ರಾಬರಿಯಲ್ಲಿ ಮತ್ತೆ ಭಾಗಿಯಾಗಿರುವ ಸಾಧ್ಯತೆ ಇದೆ. ಸಿಎಂಎಸ್ ಸಿಬ್ಬಂದಿಗಳು ಈ ರಾಬರಿ ಕೇಸ್ ನಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಆ ವಾಹನದಲ್ಲಿ ಇದ್ದಂತ ನಾಲ್ಕು ಜನರನ್ನು ವಶಕ್ಕೆ ಪಡೆಯಲಾಗಿದೆ.

ರಾಬರ್ಸ್ ಕರೆಕ್ಟ್ ಪ್ಲ್ಯಾನ್ ಮಾಡಿದ್ದಾರೆ. ಪೊಲೀಸರನ್ನು ಡೈವರ್ಟ್ ಮಾಡಿ ಸುಲಭವಾಗಿ ಹಣ ಶಿಫ್ಟ್ ಮಾಡಲಾಗಿದೆ. ಅದರಲ್ಲೂ ಸಿಸಿಟಿವಿ ಇಲ್ಲದ ಜಾಗವನ್ನು ಗುರುತಿಸಿ ದರೋಡೆ ಮಾಡಲಾಗಿದೆ. ಇನ್ನೋವಾ ಕಾರಿನಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿ ಇಲ್ಲದ ಜಾಗದಲ್ಲಿ ಹಣವನ್ನ ಡಿಸ್ಟ್ರಿಬ್ಯೂಟ್ ಆಗಿದೆ‌. ಹೀಗೆ ಪೊಲೀಸರ ಕೈಗೆ ಲಾಕ್ ಆಗದಂತೆ ಏನೆಲ್ಲಾ ಪ್ಲ್ಯಾನ್ ಮಾಡಬೇಕೋ ಅದನ್ನ ಮಾಡಿ, ಹಣ ದೋಚಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...