Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯ ಮೇಲೆ ಕೈ ಇಡೋ ತಾಕತ್ತು ಹೈಕಮಾಂಡ್ ಗೂ ಇಲ್ಲ : ಶಾಕಿಂಗ್ ಹೇಳಿಕೆ ಕೊಟ್ಟ ಯತ್ನಾಳ್

---Advertisement---

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಲ್ಲಿ ಮೊದಲೇ ಏನೇನೋ ಆಗ್ತಿದೆ. ಹೀಗಿರುವಾಗ ಬಿಜೆಪಿಯಲ್ಲಿದ್ದ ಶಾಸಕ ಯತ್ನಾಳ್ ಅವರು ಕಾಂಗ್ರೆಸ್ ಸಿಎಂ ಮತ್ತು ಡಿಸಿಎಂ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನ ನೀಡಿದ್ದಾರೆ. ಒಂದು ಸರ್ಕಾರ ಅಂದ್ರೆ ಸಾಮಾನ್ಯವಾಗಿ ಅಭಿವೃದ್ಧಿ ಆಗಬೇಕು, ಜನರಿಗೆ ಏನು ಸೌಲಭ್ಯ ಸಿಗಬೇಕೋ ಅದು ಸಿಗ್ತಾ ಇಲ್ಲ. ಎಲ್ಲಾ ನೇಮಕಾತಿಗಳು ಇವತ್ತು ಸ್ಥಗಿತವಾಗಿದೆ. ಸಾಧನೆ ಶೂನ್ಯ. ಆದರೆ ಭ್ರಷ್ಟಾಚಾರ ವ್ಯಾಪಕ ಎಂದು ಹೌಹಾರಿದ್ದಾರೆ.

ಡಿಕೆ ಶಿವಕುಮಾರ್ ಅವರು ಪಾಪ ಹತಾಶರಾಗಿದ್ದಾರೆ. ಸಾಕಷ್ಟು ತಯಾರಿಯನ್ನು ಅವರು ಮಾಡಿಕೊಂಡಿದ್ದರು. ಬಿಹಾರಕ್ಕೆ ಸಾಕಷ್ಟು ಹಣ ಕೊಟ್ಟು ಕಳುಹಿಸಿದ್ದರು. ಅದರಲ್ಲಿ ಸರ್ಕಾರದ ಅತಿರಥ ಮಹಾರಥರು ಸುಮಾರು ತಿಂಗಳುಗಟ್ಟಲೇ ಪ್ರಚಾರ ಮಾಡಿ ಬಂದ್ರು ಕೂಡ ಸೋತಿದ್ದಾರೆ. ಅಂದ್ರೆ ಡಿಕೆ ಶಿವಕುಮಾರ್ ಅವರಿಗೆ ಭ್ರಮನಿರಸವಾಗಿದೆ. ಬಿಹಾರ ಚುನಾವಣೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಮುಂದೆ ತಲೆಬಾಗಿ ನಿಂತಿದೆ.

ಯಾಕಂದ್ರೆ ಕರ್ನಾಟಕದಲ್ಲಿ ಈಗ ಗೊಂದಲ ಸೃಷ್ಟಿ ಮಾಡಿದ್ರೆ ಇಲ್ಲಿಯೂ ಅಧಿಕಾರ ಕಳೆದುಕೊಳ್ತೀವಿ ಅಂತ ಇವತ್ತು ಸಿದ್ದರಾಮಯ್ಯ ಅವರಿಗೆ ಕೈ ಹಚ್ಚುವಂತಹ ತಾಕತ್ತು ಕಾಂಗ್ರೆಸ್ ಹೈಕಮಾಂಡ್ ಗೆ ಇಲ್ಲ. ಡಿಕೆ ಶಿವಕುಮಾರ್ ಹಿಂದೆ ಇವತ್ತು ಶಾಸಕರೇ ಇಲ್ಲ. ಎಲ್ಲಾ ಗಯಾಬ್ ಆಗಿದ್ದಾರೆ‌. ಇತ್ತ ಅಭಿವೃದ್ಧಿ ಆಗ್ತಾ ಇಲ್ಲ. ನಿರುದ್ಯೋಗ ಜಾಸ್ತಿಯಾಗಿದೆ‌. ಸರ್ಕಾರಿ ಖಾಲಿ ಹುದ್ದೆಗಳು ಜಾಸ್ತಿ ಇದ್ರು ಕೂಡ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿಲ್ಲ. ನಾನು ರಾಜ್ಯಪಾಲರಿಗೆ ಈ ಸಂಬಂಧ ದೂರು ನೀಡುತ್ತೇನೆ ಎಂಬ ಮಾತನ್ನು ಯತ್ನಾಳ್ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now