ಚಾಮರಾಜನಗರ: ಕಾಂಗ್ರೆಸ್ ಸರ್ಕಾರದಲ್ಲಿ ಮೊದಲೆ ಅಧಿಕಾರ ಹಂಚಿಕೆಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಕೂಡ ಈ ಅವಧಿಯನ್ನು ಪೂರ್ಣ ಮಾಡಲೇಬೇಕೆಂಬ ಆಸೆಯನ್ನ ಹೊತ್ತಿದ್ದಾರೆ. ಇದರ ನಡುವೆ ಇನ್ನು ಎಷ್ಟು ಬಜೆಟ್ ಮಂಡನೆ ಮಾಡ್ತೀವಿ ಎಂಬುದನ್ನ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು 2028 ರ ಚುನಾವಣೆಯ ನೇತೃತ್ವದ ಬಗ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ಮಾತನಾಡಿದ್ದಾರೆ. ನೋಡೋಣಾ ಇನ್ನು ಚುನಾವಣೆ ಬರಲಿ ಎಂದಿದ್ದಾರೆ. ಇದೇ ವೇಳೆ ಬಜೆಟ್ ಬಗ್ಗೆ ಮಾತನಾಡಿದ್ದು, ಜನ ಎಲ್ಲಿಯವರೆಗೂ ಅಪೇಕ್ಷೆ ಪಡುತ್ತಾರೆ ಅಲ್ಲಿಯವರೆಗೂ ಬಜೆಟ್ ಮಂಡನೆ ಮಾಡ್ತೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಆಗಿರುವ ದರೋಡೆ ದೊಡ್ಡಮಟ್ಟದ್ದು. ಈ ದರೋಡೆ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸುಳಿವು ಸಿಕ್ಕಿದೆ. ಅವರ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದರೋಡೆಕೋರರು ಯಾರಿದ್ದಾರೆ ಅವರನ್ನು ಅರೆಸ್ಟ್ ಮಾಡಲು ಹೇಳಿದ್ದೇವೆ. ರಾಜ್ಯದಲ್ಲಿ ಮಳೆಯಿಂದಾದ ಸಮಸ್ಯೆಗೆ ಪರಿಹಾರ ಕೊಡಲು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರಕ್ಕೆ ಸೂಚಿಸಿದ್ದೇನೆ ಅಂತ ತಿಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷವಾಗಿದೆ. ಇದರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಜನ ನಂಗೆ ಐದು ವರ್ಷ ಅಧಿಕಾರ ಮಾಡಬೇಕು ಅಂತ ಆಶೀರ್ವಾದ ಮಾಡಿದ್ದಾರೆ. ನಾವೀಗ ಅದನ್ನ ಈಡೇರಿಸುವಂತ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಯಾವ ಕ್ರಾಂತಿಯೂ ಇಲ್ಲ. ಕ್ರಾಂತಿ ಅಂತ ಹುಟ್ಟು ಹಾಕಿದವರೇ ಮಾಧ್ಯಮದವರು. ಕ್ರಾಂತಿಯೂ ಇಲ್ಲ ಭ್ರಾಂತಿಯೂ ಇಲ್ಲ. ಐದು ವರ್ಷ ಏನು ಅಧಿಕಾರ ಕೊಟ್ಟಿದ್ದಾರೆ, ಐದು ವರ್ಷ ಆದ್ಮೇಲೆ ಚುನಾವಣೆ ನಡೆಯುತ್ತೆ, ಆಗಲೂ ನಾವೇ ಗೆಲ್ಲುತ್ತೀವಿ. ಎರಡೂವರೆ ವರ್ಷ ಆಗಲಿ ಆಮೇಲೆ ನೋಡೋಣಾ ಅಂತ ಹೈಕಮಾಂಡ್ ಗೆ ಹೇಳಿದ್ದೆ ಅದರ ಮೇಲೆ ಚರ್ಚೆಗಳು ಹುಟ್ಟುಕೊಂಡಿವೆ. ರಿಶಫಲ್ ಬಗ್ಗೆ ಮಾತನಾಡಿದ್ದೆ ಅದರ ಮೇಲೆ ಚರ್ಚೆಗಳು ಹುಟ್ಟುಕೊಂಡಿವೆ ಅಷ್ಟೇ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











