ಸುದ್ದಿಒನ್, ಹಿರಿಯೂರು, ನವೆಂಬರ್. 14 : ಜವಾಹರಲಾಲ್ ನೆಹರೂ ಅವರು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಮೇಲೆತ್ತಲು ಶ್ರಮಿಸಿ ದೇಶವನ್ನು ಅಧಿವೃದ್ಧಿಗೊಳಿಸಿ ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಮಹಾನ್ ಚೇತನ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ತಿಳಿಸಿದರು.
ನಗರದ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿವಂಗತ ಜವಹರಲಾಲ್ ನೆಹರೂರವರ ಜನ್ಮದಿನಾಚರಣೆ ಕಾರ್ಯಕ್ರಮ ಕುರಿತು ಮಾತನಾಡಿದರು.
ನೆಹರೂ ಅವರು ದೂರದೃಷ್ಟಿಯುಳ್ಳ ನಾಯಕ. ಕಾಂಗ್ರೆಸ್ ಕಾರ್ಯಕರ್ತರು ನೆಹರೂ ಕಾರ್ಯಕ್ರಮಗಳನ್ನು ಮುಂದಿಟ್ಟು ಬಿಜೆಪಿಗೆ ತಕ್ಕ ಉತ್ತರ ನೀಡಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತೆಯ ಪ್ರಮಾಣ ಶೇ 14ರಷ್ಟಿತ್ತು. ಈ ಪ್ರಮಾಣ ಹೆಚ್ಚಿಸಲು ಅನೇಕ ಶಾಲಾ–ಕಾಲೇಜು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದ್ದವರನ್ನ ಸ್ಮರಿಸಬೇಕು. ಆದರೆ ಈ ಬಗ್ಗೆ ಅರಿವಿಲ್ಲದ ಬಿಜೆಪಿ ಮುಖಂಡರು ಅವರನ್ನು ಅತ್ಯಂತ ಕೆಟ್ಟದಾಗಿ ಟೀಕಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ನಗರಸಭಾಧ್ಯಕ್ಷ ಆರ್. ಬಾಲಕೃಷ್ಣ, ಮಾಜಿ ತಾಪಂ ಅಧ್ಯಕ್ಷೆ ಡಾ.ಸುಜಾತ, ತಾಪಂ ಸದಸ್ಯೆ ತಿಪ್ಪಮ್ಮ, ಮಾಜಿ ನಗರಸಭೆ ಸದಸ್ಯರಾದ ಬಿ.ಎನ್.ಪ್ರಕಾಶ್, ಮಂಜುಳ, ಅಂಬಿಕಾ ಅರಾಧ್ಯ, ವಿ.ಶಿವಣ್ಣ, ತಿಪ್ಪೇಸ್ವಾಮಿ, ಗಿಡ್ಡೋಬನಹಳ್ಳಿ ಅಶೋಕ್, ಕಾರ್ಮಿಕ ಘಟಕದ ಅಧ್ಯಕ್ಷ ವಿ.ಶಿವಕುಮಾರ್, ಎಸ್ ಎಲ್ ಶಿವಕುಮಾರ್, ಅರೋಗ್ಯ ರಕ್ಷಾ ಸಮಿತಿ ಸದಸ್ಯ ಕಬ್ಬಡಿ ರವಿ, ನೌಶಾದ್, ಜ್ಞಾನೇಶ್ ಕುಮಾರ್, ಕಣುಮಣ್ಣ, ಶಿವಮೂರ್ತಿ, ಡಿ.ಕೆ.ರಘು, ಮೆಹರ್ ತಾಜ್, ತಿಪ್ಪೇಸ್ವಾಮಿ, ರಾಜಪ್ಪ ಘಾಟ್ ಇತರರಿದ್ದರು.

















