ಬೆಂಗಳೂರು: ಖದೀಮರು ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಹಾಡಹಗಲೇ ದರೋಡೆ ಮಾಡಿದ್ದಾರೆ. ಅದು ಒಂದೆರಡು ಸಾವಿರ, ಲಕ್ಷ ಅಲ್ಲ ಬರೋಬ್ಬರಿ 7 ಕೋಟಿ ರೂಪಾಯಿ. ಆ ಸಂಬಂಧ ತನಿಖೆ ನಡೆಯುತ್ತಿದ್ದು, ಒಟ್ಟು ನಾಲ್ಕು ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕರ್ನಾಟಕ ಗಡಿಭಾಗಗಳಲ್ಲಿ ವಿಚಾರಣೆ ಶುರುವಾಗಿದೆ. ಈ ತನಿಖೆ ಎಲ್ಲಿಗೆ ಬಂತು ಎಂಬುದರ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ.
ನಿನ್ನೆ ನಡೆದ ದರೋಡೆಯ ಕೇಸ್ ಬಗ್ಗೆ ಪೊಲೀಸರು ಈಗಾಗಲೇ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ರಾಬರಿಗೆ ಬಳಕೆ ಮಾಡಿಕೊಂಡಂತ ವಾಹನಗಳಲ್ಲಿ, ಒಂದು ವಾಹನದ ಫೋಟೋ ಹಾಕಿದ್ದರು. ಅದರ ಬಗ್ಗೆ ಚೆಕ್ ಮಾಡಿದಾಗ ಅದು ಬೇರೆಯವರ ಹೆಸರಿನ ನಂಬರ್ ಪ್ಲೇಟ್ ಬಳಕೆ ಮಾಡಿದ್ದರು. ಆ ನಂಬರ್ ಹುಡುಕಿಕೊಂಡು ಹೋದಾಗ ಮಿಸ್ ಯೂಸ್ ಆಗಿರುವುದು ತಿಳಿದು ಬಂದಿದೆ.
ಈಗ ಆ ಹಣವನ್ನು ಹೊರಗಡೆ ತೆಗೆದುಕೊಂಡು ಹೋಗಿದ್ದಾರಾ ಹೇಗೆ ಎಂಬ ತನಿಖೆ ನಡೆಯುತ್ತಿದೆ. ಯಾಕಂದ್ರೆ ಅವರು ವಾಹನವನ್ನು ಬದಲಾಯಿಸಿಕೊಂಡಿದ್ದಾರೆ, ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇಡೀ ನಗರದಲ್ಲಿರುವ ಸಿಸಿಟಿವಿಯನ್ನು ಪರಿಶೀಲನೆ ಮಾಡ್ತಾ ಇದ್ದೀವಿ. ಖಂಡಿತ ಹಿಡಿದು ಹಾಕ್ತೀವಿ. ಬಿಜಾಪುರದಲ್ಲೂ ಇದೇ ರೀತಿಯ ಘಟನೆ ಆಗಿತ್ತು. ಅಲ್ಲಿಯೂ ಹಿಡಿದಿದ್ದರು. ವಾಹನಗಳು ಯಾವ್ದು, ನಮಗೆ ಬಂದ ಮಾಹಿತಿ, ಒಳಗೆ ಬಂದ ವಾಹನಗಳು ಯಾವ್ದು ಹೀಗೆ ಈಗಿನ ಟೆಕ್ನಿಕಲ್ ಬಳಕೆ ಮಾಡಿಕೊಂಡು ತಪಾಸಣೆ ನಡೆಸಲಾಗುತ್ತಿದೆ. ರಾಬರಿ ಮಾಡಿರುವವರನ್ನು ಬಿಡುವ ಮಾತೇ ಇಲ್ಲ. ಪೊಲೀಸರು ಎಲ್ಲಾ ರೀತಿಯಲ್ಲೂ ತಪಾಸಣೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಸಿಕ್ಕಿ ಹಾಕಿಕೊಳ್ತಾರೆ ಎಂದು ಭರವಸೆ ನೀಡಿದ್ದಾರೆ.





