Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

5 ರಾಜ್ಯದ ಚುನಾವಣೆ : ಬಿವೈ ವಿಜಯೇಂದ್ರ ಹೇಳಿದ್ದೇನು..?

Facebook
Twitter
Telegram
WhatsApp

ನವದೆಹಲಿ: ಇಂದು ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಫಲಿತಾಂಶ ಮುಂಬರುವ ಕರ್ನಾಟಕ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ. ಈ ಸಂಬಂಧ ಬಿವೈ ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯ ವಿಜಯಯಾತ್ರೆ ಇಲ್ಲಿಗೆ ನಿಲ್ಲುವುದಿಲ್ಲ ಎಂದಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್ಗಢ ವಿಧಾನಸಭಾ ಫಲಿತಾಂಶ ರಾಜ್ಯ ರಾಜಕೀಯದ ಮೇಲೂ ಪ್ರಭಾವ ಬೀರಲಿದೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ವಿಜಯಯಾತ್ರೆ ಮುಂದುವರೆಯಲಿದೆ. ದೇಶದಲ್ಲಿ ಬದಲಾವಣೆಯ ಯಾತ್ರೆ ಮುಂದುವರೆಯುತ್ತಿದೆ ಎಂದು ವಿಪಕ್ಷಗಳ ಬೊಬ್ಬೆ ಹೊಡೆಯುತ್ತಿದ್ದವು. ದೇಶದಲ್ಲಿನ ವಾತಾವರಣ ಬಿಜೆಪಿಯ ಪರವಾಗಿಯೇ ಇದೆ. ಮೋದಿ ಪರವಾಗಿಯೇ ಇದ್ದೇವೆ ಎಂದು ಜನ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.

ಐದು ರಾಜ್ಯಗಳ ಚುನಾವಣೆ ಸೆಮಿಪೈನಲ್ ಎಂಬಂತೆ ವ್ಯಾಖ್ಯಾನವಿತ್ತು. ಅಲೆಯಲ್ಲ, ಸುನಾಮಿ ರೀತಿಯಲ್ಲಿ ಬಿಜೆಪಿ ಪರವಾಗಿ ಜನರ ಬೆಂಬಲವಿದೆ. ತೆಲಂಗಾಣದಲ್ಲಿ ಬಿಜೆಪಿ ಫಲಿತಾಂಶಕ್ಕೆ ಬಹಳಷ್ಟು ನಿರೀಕ್ಷೆ ಇರಲಿಲ್ಲ. ಆದರೆ ಕರ್ನಾಟಕದಲ್ಲಿನ ಫಲಿತಾಂಶದಿಂದ ನಮಗೆ ಹಿನ್ನಡೆಯಾಗಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ತೆಲಂಗಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಗ್ಯಾರಂಟಿ ಎಲ್ಲಾ ಕಡೆ ವರ್ಕ್ ಆಗಿಲ್ಲ. ಕರ್ನಾಟಕದಲ್ಲಿ ಮತದಾರರ ಕಣ್ಣಿಗೆ ಮಂಕುಬೂದಿ ಎರಚಿದಂತೆ ತೆಲಂಗಾಣದಲ್ಲೂ ಬೂದಿ ಎರಚಿ ಗೆದ್ದಿದ್ದಾರೆ. ಬಿಆರ್‌ಎಸ್ ಆಡಳಿತ ವಿರೋಧಿ ಅಲೆಯನ್ನು ನಮ್ಮ ಪಕ್ಷ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೆಂಗಳೂರಿನಲ್ಲಿ 3 ದಿನ ಸಾಧಾರಣ ಮಳೆ‌: ಉಳಿದಂತೆ ಎಲ್ಲೆಲ್ಲಿ ಎಷ್ಟು ಮಳೆ ಸಾಧ್ಯತೆ..?

ಬೆಂಗಳೂರು: ಬಿಸಿಬಿಸಿ ಎನ್ನುತ್ತಿದ್ದ ಬೆಂಗಳೂರು ಮಂದಿಗೆ ನಿನ್ನೆ ವರುಣರಾಯ ತಂಪೆರೆದಿದ್ದ. ಮಧ್ಯಾಹ್ನವೇ‌ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕತ್ತಲು ಕವಿದಿತ್ತು. 3 ಗಂಟೆಯ ವೇಳೆಗೆ ಎಲ್ಲೆಲ್ಲೂ ಜೋರು ಮಳೆಯಾಗಿತ್ತು. ಮಳೆ ಕಂಡು ಬೆಂಗಳೂರು ಮಂದಿ

ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ನಿಖಿಲ್ ಫಸ್ಟ್ ರಿಯಾಕ್ಷನ್ : ಅಜ್ಜ, ಅಜ್ಜಿ ಬಗ್ಗೆ ಮನವಿ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಸುದ್ದಿ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದಾದ್ಯಂತೆ ಸದ್ದು ಮಾಡುತ್ತಿದೆ. ನಟಿ ಮಣಿಯರು ಕೂಡ ಇದಕ್ಕೆ ಆಕ್ರೋಶಿತರಾಗಿ ಮಾತನಾಡುತ್ತಿದ್ದಾರೆ. ಇದೀಗ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮೊ

error: Content is protected !!