Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಸೇತುವೆ ಮೇಲೆ ಪೆಟ್ರೋಲ್ ಟ್ಯಾಂಕ್ ಗೆ ಬೆಂಕಿ : ಕೆಳಗಿದ್ದ ಬೈಕ್ ಸವಾರ ಸೇರಿ ನಾಲ್ವರು ಸಾವು..!

---Advertisement---

 

ಮುಂಬೈ: ಪೆಟ್ರೋಲ್ ಟ್ಯಾಂಕ್ ಪಲ್ಟಿಯಾದ ಪರಿಣಾಮ ಹೊತ್ತಿ ಉರಿದ ಬೆಂಕಿಯಲ್ಲಿ ನಾಲ್ವರು ತಮ್ಮ ಪ್ರಾಣ ಬಿಟ್ಟಿದ್ದಾರೆ. ಪುಣೆ – ಮುಂಬೈ ಎಕ್ಸ್‌ಪ್ರೆಸ್‌ ವೇನಲ್ಲಿ ಈ ಘಟನೆ ನಡೆದಿದೆ. ಎಲ್ಲೋ ಹೋಗುತ್ತಿದ್ದವನನ್ನು ಯಮ ಕೈ ಬೀಸಿ ಕರೆದಿತ್ತು ಎನಿಸುತ್ತದೆ. ಅದಕ್ಕೆ ಎಲ್ಲೋ ಹೋಗುತ್ತಿದ್ದವನು ಕೂಡ ಈಗ ಯಮಲೋಕ ಸೇರಿದ್ದಾನೆ.

 

ಪುಣೆ – ಮುಂಬೈ ಎಕ್ಸ್ ಪ್ರೆಸ್ ವೇನಲ್ಲಿ ಈ ದುರ್ಘಟನೆ ನಡೆದಿದೆ. ಲೋನಾವಾಲಾ – ಖಂಡಲಾ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಇಂಥದ್ದೊಂದು ಅನಾಹುತ ನಡೆದಿದೆ ಎಮ್ನಲಾಗುತ್ತಿದೆ.

ಲಾರಿ ಪಲ್ಟಿಯಾದ ಪರಿಣಾಮ ಕ್ಷಣ ಮಾತ್ರದಲ್ಲಿಯೇ ಬೆಂಕಿ ಜೋರಾಗಿಯೇ ಹೊತ್ತಿಕೊಂಡಿದೆ. ಬೆಂಕಿ ನೋಡ ನೋಡುತ್ತಿದ್ದಂತೆ ಹೆಚ್ಚಾದ ಪರಿಣಾಮ ಬರೀ ಸೇತುವೆ ಮೇಲೆ ಮಾತ್ರವಲ್ಲ ಕೆಳಗೆ ಹೋಗುತ್ತಿರುವವರ ಮೇಲೂ ಪರಿಣಾಮ ಬೀರಿದೆ. ಬೈಕ್ ನಲ್ಲಿ ಸಂಚರಿಸುತ್ತಿದ್ದವನ ಮೇಲೆ ಬೆಂಕಿ ಬಿದ್ದು, ಸಾವನ್ನಪ್ಪಿದ್ದಾನೆ. ಬೆಂಕಿ ತಗುಲಿದ ಪರಿಣಾಮ ಆ ವ್ಯಕ್ರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

Join WhatsApp

Join Now

Join Telegram

Join Now

Leave a Comment