ಸುದ್ದಿಒನ್, ಚಿತ್ರದುರ್ಗ, ಫೆ. 18 : ಐತಿಹಾಸಿಕ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಅಂಗಸಂಸ್ಥೆಗಳಲ್ಲಿ ನಿರ್ಮಾಣ ಮಾಡಿರುವ ಬೃಹತ್, ಮಧ್ಯಮ ಹಾಗೂ ಉತ್ತಮ ಗಾತ್ರದ ಉದ್ಯಾನವನಗಳು ಗಮನಸೆಳೆಯುತ್ತಿವೆ. ಅಂತಹ ಉದ್ಯಾನವನಗಳಿಗೆಲ್ಲ ಸೇರಿ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ರೋಲಿಂಗ್ ಶೀಲ್ಡ್ ಪಡೆದಿರುವುದು ಒಂದು ವಿಶೇಷವಾಗಿದೆ.
ಫೆಬ್ರವರಿ 15 ರಿಂದ 17 ರವರೆಗೆ ನಗರದ ವಿ.ಪಿ.ಬಡಾವಣೆಯ ತೋಟಗಾರಿಕೆ ಇಲಾಖೆಯ ಆವರಣದಲ್ಲಿ 32ನೇ ವರ್ಷದ ಫಲಪುಷ್ಪ ಪ್ರದರ್ಶನ ನಡೆಯಿತು. ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳಲ್ಲಿನ ಉದ್ಯಾನವನಗಳ ಉತ್ತಮ ನಿರ್ವಹಣೆಗಾಗಿ ಸತತ 31ವರ್ಷಗಳಿಂದಲೂ ರೋಲಿಂಗ್ ಶೀಲ್ಡ್ ಪಡೆದ ಹೆಗ್ಗಳಿಕೆ ಪಾತ್ರವಾಗಿದೆ. ಈ ಬಾರಿಯೂ ಸಿಬ್ಬಂದಿಯು ಪಾರಿತೋಷಕ ಪಡೆದಿರುವುದಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ. ಸಿ. ಕಳಸದ ಐಎಎಸ್(ನಿವೃತ್ತ) ಹಾಗೂ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಸಂತಸ ವ್ಯಕ್ತಪಡಿಸಿ, ನಿರ್ವಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಭಾಗವಹಿಸಿದ ಉದ್ಯಾನವನಗಳ ಪೈಕಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಬೃಹತ್ ಗಾತ್ರದ ಉದ್ಯಾನವನ, ಶ್ರೀ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಭಾರಿ ಗಾತ್ರದ ಉದ್ಯಾನವನ, ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಉದ್ಯಾನವನ ಉತ್ತಮ ಗಾತ್ರದ್ದು, ಎಸ್‍ಜೆಎಂ ಫಾರ್ಮಸಿ ಕಾಲೇಜು ಮಧ್ಯಮ, ಬಿಚ್ಚುಗತ್ತಿ ಭರಮಣ್ಣನಾಯಕ ಉದ್ಯಾನವನ ಮಧ್ಯಮ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಕೊರೇನಿಕ್ಸ್ ಉದ್ಯಾನವನ ಮಧ್ಯಮ, ಬಸವೇಶ್ವರ ವೈದ್ಯಕೀಯ ಕ್ವಾಟ್ರಸ್ ಉದ್ಯಾನವನ ಮಧ್ಯಮ, ಬಸವೇಶ್ವರ ವೈದ್ಯಕೀಯ ವಿದ್ಯಾರ್ಥಿಗಳ ಉದ್ಯಾನವನ, ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಉದ್ಯಾನವನ ಉತ್ತಮ ಗಾತ್ರ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಉದ್ಯಾನವನ ಭಾರಿ ಗಾತ್ರ, ಎಸ್.ಜೆ.ಎಂ. ಪಾಲಿಟೆಕ್ನಿಕ್ ಉದ್ಯಾನವನ ಮಧ್ಯಮಗಾತ್ರ, ಎಸ್.ಜೆ.ಎಂ. ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ, ಎಸ್.ಜೆ.ಎಂ. ಉದ್ಯೋಗಸ್ಥ ಮಹಿಳೆಯರ ಉದ್ಯಾನವನ ಹಾಗೂ ಎಸ್.ಜೆ.ಎಂ. ದಂತ ಮಹಿಳಾ ವಿದ್ಯಾರ್ಥಿ ನಿಲಯ ಇವುಗಳು ಸೇರಿವೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
















