ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವೆ ಘೋರ ಯುದ್ಧವೆ ನಡೀತಾ ಇದೆ. ಅದೆಷ್ಟೋ ಜನ ಇರಾನ್ – ಇಸ್ರೇಲ್, ದುಬೈ ದೇಶಗಳಲ್ಲಿ ಸಿಲುಕಿ ವಾಪಾಸ್ ಬರುವುದಕ್ಕೂ ಆಗದೆ ಒದ್ದಾಡುತ್ತಿದ್ದಾರೆ. ಪ್ರವಾಸಕ್ಕೆಂದು ಹೋದವರು ಕೂಡ ಲಾಕ್ ಆಗಿದ್ದಾರೆ. ವಿಮಾನಗಳು ರದ್ದಾಗಿರುವ ಕಾರಣ ಈ ರೀತಿಯ ಪರಿಸ್ಥಿತಿ ಎದುರಾಗಿದೆ. ಆದರೆ ಬಳ್ಳಾರಿಯಿಂದ ಪ್ರವಾಸಕ್ಕೆಂದು ಹೋದಂತ 32 ಜನ ಸೇಫಾಗಿ ತವರಿಗೆ ಮರಳಿದ್ದಾರೆ.
ಪ್ರವಾಸಕ್ಕೆಂದು ತೆರಳಿ ದುಬೈನಲ್ಲಿ ಸಿಲುಕಿದ್ದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಯ 50 ಮಂದಿ ವಾಪಾಸ್ ಆಗಿದ್ದಾರೆ. ದುಬೈನಲ್ಲಿ ಅತಂತ್ರರಾಗಿದ್ದ ಕನ್ನಡಿಗರಿಗೆ ಸಿಎಂ ಸಿದ್ದರಾಮಯ್ಯ ಅವರು ಅಭಯ ನೀಡಿದ್ದರು. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ, ನಿಮ್ಮನ್ನೆಲ್ಲಾ ಸೇಫಾಗಿ ಕರೆಸಿಕೊಳ್ತೀವಿ ಎಂಬ ಮಾತನ್ನ ಹೇಳಿದ್ರು. ಇಂದು ಅವರೆಲ್ಲರೂ ಕೆಂಪೇಗೌಡ ಏರ್ಪೋರ್ಟ್ ಗೆ ಬಂದು ಇಳಿದಿದ್ದಾರೆ.

ಏರ್ಪೋರ್ಟ್ ನಲ್ಲಿಯೇ ಪ್ರವಾಸಿಗರನ್ನು ಮಾಜಿ ಸಚಿವ ಬಿ.ನಾಗೇಂದ್ರ ಅವರು ಬರಮಾಡಿಕೊಂಡಿದ್ದಾರೆ. ಬೆಂಗಳೂರಿಗೆ ಬಂದೊಡನೆ ಪ್ರವಾಸಿಗರು ತುಂಬಾನೇ ಖುಷಿ ಪಟ್ಟಿದ್ದಾರೆ. ನಾಗೇಂದ್ರ ಅವರನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಏರ್ಪೋರ್ಟ್ ನಲ್ಲಿಯೇ ನಾಗೇಂದ್ರ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಧನ್ಯವಾದವನ್ನ ತಿಳಿಸಿದ್ದಾರೆ. ನಾಗೇಂದ್ರಣ್ಣ ಅವರಿಂದ ನಾವೂ ಬೇಗ ಊರಿಗೆ ಬರುವುದಕ್ಕೆ ಸಾಧ್ಯ ಆಯ್ತು. ಇದರಲ್ಲಿ ಎರಡು ಮಾತಿಲ್ಲ ನಮ್ಮನ್ನೆಲ್ಲ ತಾಯ್ನಾಡಿಗೆ ಕರೆದುಕೊಂಡು ಬಂದಿದ್ದು ಇವರೆ. ದುಬೈ ಹೊಸ ಊರು. ಬಾಂಬ್ ಎಲ್ಲಿ ಬೀಳುತ್ತೋ ಗೊತ್ತಾಗ್ತಾ ಇರಲಿಲ್ಲ. ನಾವೆಲ್ಲಾ ನಾಗೇಂದ್ರ ಸರ್ ಅವರಿಗೆ. ಇಂದು ಇಲ್ಲಿಗೆ ಸೇಫಾಗಿ ಕರೆತಂದಿದ್ದಾರೆ. ನಾವೂ ಅವರುಗೆ ಎಷ್ಟು ಧನ್ಯವಾದಗಳನ್ನ ಹೇಳಿದರು ಸಾಲದು ಎಂದಿದ್ದಾರೆ.












