ಬಳ್ಳಾರಿ; ರಾಜ್ಯದಲ್ಲಿ ಮಳೆ ಜೋರಾಗಿದೆ. ಅದರಲ್ಲೂ ಗುಡುಗು, ಸಿಡಿಲು ಆರ್ಭಟವೂ ಜೋರಾಗಿದೆ. ಹೀಗಾಗಿ ಜನ ಕೂಡ ಎಚ್ಚರಿಕೆಯಿಂದ ಇರಬೇಕಾಗಿದೆ. ಇಂದು ಸಿಡಿಲು ಬಡಿದು ಮೂರು ಜನ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
45 ವರ್ಷದ ಭೀರಪ್ಪ, 26 ವರ್ಷದ ಸುನೀಲ ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದಿರಯವುದಲ್ಲಿ 14 ವರ್ಷ ವಿನೋದ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರಿ ಮೇಯಿಸಲು ಹೋದಾಗ ಸಿಡಿಲು ಬಡಿದಿದೆ. ಮಳೆ ಬಂದಾಗ ಯಾವುದೋ ಮರದ ಕೆಳಗೆ ಆಶ್ರಯ ಪಡೆದ ಈ ಮೂವರು ಇಂದು ಇಹಲೋಕ ತ್ಯಜಿಸಿದ್ದಾರೆ. ಮಳೆ ಬಂತು ಅಂತ ಮರದ ಕೆಳಗೆ ನಿಂತಿದ್ದೆ ಈ ಸಾವಿಗೆ ಕಾರಣವಾಗಿದೆ.
ರಾಜ್ಯಾದ್ಯಂತ ಈಗಾಗಲೇ ಮಳೆ ಶುರುವಾಗಿದೆ. ಮಳೆಗಾಲ ಶುರುವಾದಾಗೆಲ್ಲ ಒಂದಷ್ಟು ಮುಂಜಾಗ್ರತ ಕ್ರಮದ ಬಗ್ಗೆ ಜಾಗೃತಿಯನ್ನ ಮೂಡಿಸಲಾಗುತ್ತದೆ. ಆದರು ಜನ ಅದರ ಬಗ್ಗೆ ಗಮನಹರಿಸುತ್ತಿಲ್ಲ. ಮಳೆ ಬಂದಾಗ ಮಳೆಯಲ್ಲಿ ನೆನೆದರು ಮರದ ಕೆಳಗಡೆ ನಿಲ್ಲಬಾರದು. ಯಾಕಂದ್ರೆ ಸಿಡಿಲು ಹೆಚ್ಚಾಗಿ ಬಡಿಯುವುದು ಮರಗಳಿಗೇನೆ. ಹೀಗಾಗಿ ಮಳೆ ಬಂದಾಗ ಯಾರು ಕೂಡ ಮರದ ಕೆಳಗೆ ಆಶ್ರಯ ಪಡೆಯಬೇಡು. ಈಗಾಗಲೇ ಮಳೆಗಾಲ ಶುರುವಾಗಿರೋ ಕಾರಣ ಒಂದಷ್ಟು ಮುಂಜಾಗ್ರತೆ ಇರಲಿ. ಕೆಲಸಕ್ಕೆ ಹೋಗುವವರು ಕೊಡೆ, ರೇನ್ ಕೋಟ್ ತೆಗೆದುಕಿಂಡು ಹೋಗಿ. ಹೊಲ, ಬಯಲುಗಳಿಗೆ ಹೋಗುವವರು ಆದಷ್ಟು ಕೊಡೆ, ಟಾರ್ಪಲ್ ರೀತಿ ಮಳೆಯಿಂದ ರಕ್ಷಣೆನೀಡುವ ಚೀಲಗಳನ್ನ ತೆಗೆದುಕೊಂಡು ಹೋಗುವುದು ಉತ್ತಮ.




