140 ಶಾಸಕರು ಡಿಕೆ ಪರ ಇದ್ದಾರೆ.. ಯಾವಾಗ ಬೇಕಾದ್ರು ಸಿಎಂ ಆಗಬಹುದು : ಶಾಸಕ ರವಿ ಗಣಿಗ

1 Min Read

 

ಬೆಂಗಳೂರು: ಇಷ್ಟು ದಿನ ತಣ್ಣಗಿದ್ದ ಅಧಿಕಾರ ಹಂಚಿಕೆ ವಿಚಾರ, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಕೂಡಲೇ ಜೋರು ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಡಿಕೆ ಶಿವಕುಮಾರ್ ಅವರನ್ನ ಸಿಎಂ ಮಾಡುವುದಕ್ಕೆ ಒಕ್ಕಲಿಗ ಸಮುದಾಯ ಶಾಸಕರು, ಸಚಿವರು ಒಟ್ಟುಗೂಡಿದ್ದಾರೆ. ಈ ಬಗ್ಗೆ ಶಾಸಕ ರವಿ ಗಣಿಗ ಪ್ರತಿಕ್ರಿಯೆ ನೀಡಿದ್ದು, ಬರುತ್ತೆ ಸಮಯ ಎಲ್ಲದಕ್ಕು. ನಾನು ಶಾಸಕನಾಗಬೇಕು ಅಂತ ಹಣೆಯಲ್ಲಿ ಬರೆದಿತ್ತು. ಎಲ್ಲೋ ಎಳೆದುಕೊಂಡು ಬರುತ್ತೆ. ಈ ಎಲ್ಲಾ ಗೊಂದಲಕ್ಕೂ ಶೀಘ್ರದಲ್ಲಿಯೇ ಹೈಕಮಾಂಡ್ ನಾಯಕರು ತೆರೆ ಎಳೆಯುತ್ತಾರೆ.

ಈ ರೀತಿಯ ಗೊಂದಲಗಳಿಗೆ ಹೈಕಮಾಂಡ್ ಅವರೇ ನಿರ್ಧಾರ ಮಾಡಬೇಕು. ಬಿಜೆಪಿ ಸರ್ಕಾರ ಇರುವ ಕಡೆ ಒಂದು ವರ್ಷದಲ್ಲಿಯೇ ಸಿಎಂ ಬದಲಾವಣೆ ಮಾಡ್ತಾರೆ, ರಾತ್ರೋ ರಾತ್ರಿ ಬದಲಾಯಿಸಿ ಬಿಡ್ತಾರೆ. ಹಾಗಾದ್ರೆ ಅಲ್ಲೆಲ್ಲಾ ಗೊಂದಲ ಆಗಿಲ್ವಾ..? ಬಿಜೆಪಿಯವರು ಗೊಂದಲ ಇದೆ ಅಂತ ಸುಮ್ಮನೆ ಸೃಷ್ಟಿ ಮಾಡ್ತಾ ಇದ್ದಾರೆ. ಕೆಲವು ಹಿರಿಯ ಶಾಸಕರು ಮಂತ್ರಿ ಆಗ್ಬೇಕು ಅಂತ ಕೇಳೋದಕ್ಕೆ ಹೋಗಿದ್ರು. ಮಂಡ್ಯಗೆ ಇಬ್ಬರು ಮಂತ್ರಿಗಳನ್ನ ಕೊಡಿ ಅಂತ ಕೇಳಿದ್ರು, ತಪ್ಪೇನಿದೆ. ನಮ್ಮತ್ರ ನಂಬರ್ ಇದೆ. ಅವರತ್ರ ನಂಬರ್ ಇಲ್ಲ ಅಂತ ಯಾರೂ ಮಾತನಾಡಿಲ್ಲ. ಒಟ್ಟಿಗೆ ಕೂತು ಊಟ ಮಾಡಿದ್ರೆ ನೀವೇನಂತೀರಾ ಸಿದ್ದರಾಮಯ್ಯ ಬಣ ಊಟ ಮಾಡಿದೆ ಅಂತೀರಾ. ನಮ್ಮದೆ ಕೆಲಸಕ್ಕೆ ಡೆಲ್ಲಿಗೆ ಹೋದ್ರೆ ಓ ಈ ಬಣ ದೆಹಲಿಗೆ ಹೋಯ್ತು ಅಂತೀರಾ. ಮೀಡಿಯಾದಲ್ಲಿ ನೀವೂ ಸೃಷ್ಟಿ‌ ಮಾಡ್ತಾ ಇರೋದು ಇದು.

140 ಶಾಸಕರು ಕಾಂಗ್ರೆಸ್ ಪರ 140 ಶಾಸಕರು ಡಿಕೆ ಪರವಾಗಿಯೇ ಇದ್ದೀವಿ. ಆದರೆ ಸಮಯ, ಸಂದರ್ಭ ಬಂದಾಗ ಡಿಕೆ ಸಾಹೇಬ್ರು ಸಿಎಂ ಆಗ್ತಾರೆ ಎಂದು ಶಾಸಕ ರವಿ ಗಣಿಗ ಮಾಹಿತಿ ನೀಡಿದ್ದಾರೆ.

Share This Article