Global wealth surges as China overtakes US to grab top spot
ಹೊಸ ವರದಿಯೊಂದು ಹೊರಬಿದ್ದಿದ್ದು, ಅದರಲ್ಲಿ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಆ ಹೊಸ ವರದಿಯಲ್ಲಿ ಚೀನಾ ದೇಶ ಅಮೆರಿಕಾವನ್ನೆ ಹಿಂದಿಕ್ಕಿದೆ. ಮೆಕ್ ಕಿನ್ಸೆ ಅಂಡ್ ಕೋ ಕನ್ಸಲ್ಟೆಂಟ್ಸ್ ಎಂಬ ಸಂಶೋಧನ ಸಂಸ್ಥೆ ಈ ವರದಿಯನ್ನ ಬಿಡುಗಡೆ ಮಾಡಿದೆ.
ಚೀನಾ ಹಾಗೂ ಅಮೆರಿಕ ವಿಶ್ವದ ಎರಡು ಅತಿ ದೊಡ್ಡ ಆರ್ಥಿಕತೆಗಳು. ಮೂರನೇ ಎರಡಕ್ಕಿಂತ ಹೆಚ್ಚಿನ ಸಂಪತ್ತನ್ನು ಶೇ 10ರಷ್ಟಿರುವ ಶ್ರೀಮಂತ ಕುಟುಂಬಗಳು ಹೊಂದಿವೆ. ಮತ್ತು ಅವರು ಪಾಲು ಏರಿಕೆ ಆಗುತ್ತಲೇ ಇದೆ ಎಂದು ವರದಿ ಹೇಳಿದೆ. ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಬೆಳೆದಿದೆ. ಅದರಲ್ಲಿ ಚೀನಾವೂ ಅಮೆರಿಕಾವನ್ನು ಪಕ್ಕಕ್ಕೆ ಸರಿಸಿ, ಮೊದಲ ಸ್ಥಾನವನ್ನ ಪಡೆದುಕೊಂಡಿದೆ.
ಆಸ್ತಿಗಳ ಮೌಲ್ಯದಲ್ಲಿನ ಏರಿಕೆ ಮತ್ತು ಅದಕ್ಕೆ ಮೂಲವಾದ ಬಡ್ಡಿ ದರದಲ್ಲಿನ ಇಳಿಕೆ ಎಂದು ಮೆಕ್ಕಿನ್ಸೆ ವರದಿ ಹೇಳುತ್ತದೆ. ಆದಾಯಕ್ಕೆ ಹೋಲಿಸಿದಲ್ಲಿ ಆಸ್ತಿ ಬೆಲೆಗಳು ದೀರ್ಘಾವಧಿ ಸರಾಸರಿಯಲ್ಲಿ ಹತ್ತಿರಹತ್ತಿರ ಶೇ 50ರಷ್ಟು ಏರಿಕೆಯಾಗಿದೆ. ಕಳೆದ ಎರಡು ದಶಕದಲ್ಲಿ ಹೀಗೆ ತೀವ್ರ ಸ್ವರೂಪದಲ್ಲಿ ನಿವ್ವಳ ಮೌಲ್ಯ ಏರಿಕೆ ಆಗಿ ಜಾಗತಿಕ ಜಿಡಿಪಿ ಕೂ ಭಾರೀ ಹೆಚ್ಚಳವಾಗಿದೆ.