Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಮೀರ್ ಇಲಾಖೆಯಲ್ಲಿ ಅಕ್ರಮಗಳದ್ದೇ ಜೋರು ಸದ್ದು..!

---Advertisement---

 

ಜಮೀರ್ ಅಹ್ಮದ್ ಇಲಾಖೆಯಲ್ಲಿ ಅಕ್ರಮಗಳ ಸದ್ದು ಕೇಳಿಸ್ತಾ ಇದೆ. ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಈ ಎಲ್ಲಾ ವಿಚಾರಗಳು ಗೊತ್ತಿದ್ದರೂ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರು, ಸಚಿವರು ಸೈಲೆಂಟ್ ಆಗಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಸಚಿವ ಜಮೀರ್ ಅಹ್ಮದ್ ಅಣತಿಯಂತೆಯೇ ಅಧ್ಯಕ್ಷ ರಾಕೇಶ್ ಸಿಂಗ್ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ರೇರಾ ಅಡಿಯಲ್ಲಿ ಬಿಲ್ಡರ್ ಹಾಗೂ ಪ್ರಾಜೆಕ್ಟ್ ನ ವಿರುದ್ಧ ಲೆಕ್ಕಕ್ಕೆ ಸಿಗದಷ್ಟು ದೂರುಗಳು ದಾಖಲಾಗಿವೆ. ಆದ್ರೆ ರೇರಾ ಜನಸಾಮಾನ್ಯರ, ಗ್ರಾಹಕರ ಪರ ನಿಲ್ಲುತ್ತಿಲ್ಲ. ಸಕಾಲಕ್ಕೆ ಪ್ಲ್ಯಾಟ್ ಹಸ್ತಾಂತರ ಮಾಡದಿದ್ರೂ ಬಿಲ್ಡರ್ ಗಳ ಮೇಲೆ ಯಾವುದೇ ಕ್ರಮಗಳಿಲ್ಲ. ನಿಗದಿತ ಅವಧಿಗೆ ಯೋಜನೆ ಪೂರ್ಣಗೊಳಿಸದಿದ್ದರು ಮೌನವಾಗಿದೆ. ಪ್ರಾಧಿಕಾರದಲ್ಲಿ ದಾಖಲಾಗಿರುವ ದೂರುಗಳನ್ನು ಇತ್ಯರ್ಥವೇ ಮಾಡಿಲ್ಲ ಎಂಬ ಆರೋಪವೂ ಇದೆ.

ಈ ಸಂಬಂಧ ಈಗಾಗಲೇ ಸಾಕಷ್ಟು ದೂರುಗಳು ದಾಖಲಾಗಿವೆ. ರಾಜ್ಯದಲ್ಲಿ ರೇರಾ ಕಾಯ್ದೆ ಜಾರಿಯಾಗಿ ಒಟ್ಟು 8 ವರ್ಷಗಳಾಗಿವರ. ಆದರೆ ಬಹುತೇಕ ದೂರುಗಳು ಇತ್ಐರ್ಥವಾಗಿಲ್ಲ. ಹಾಗೇ ಉಳಿದ ದೂರುಗಳಲ್ಲಿ ಅದರಲ್ಲೂ ಕಳೆದ 8 ವರ್ಷದಲ್ಲಿ ರೇರಾ ಅಡಿ ಬರೋಬ್ಬರಿ 12,165 ದೂರುಗಳು ದಾಖಲಾಗಿವೆ. ಸಾವಿರಾರು ದೂರುಗಳು ದಾಖಲಾದ್ರೂ ರೇರಾ ನಿರ್ಲಕ್ಷ್ಯ ಮಾಡಿದೆ. ದೂರುಗಳನ್ನ ವಿಲೇವಾರಿ ಮಾಡೋದಕ್ಕೂ ಸಹ ನಿರ್ಲಕ್ಷ್ಯ ಮಾಡಿದೆ. ಮಾಹಿತಿಗಳ ಪ್ರಕಾರ, ಇನ್ನೂ 2 ಸಾವಿರದಷ್ಟು ಕೇಸ್​ಗಳು ಬಾಕಿ ಇವೆ. ಇನ್ನು, ವಿಲೇವಾರಿ ಆದ ಹಲವು ಕೇಸ್​ಗಳಲ್ಲಿ ಆದೇಶವೇ ನೀಡಿಲ್ಲ ಎನ್ನಲಾಗಿದೆ. ಸದ್ಯ ಜಮೀರ್ ಅಹ್ಮದ್ ವಸತಿ ಇಲಾಖೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ಕೇಳಿ ಬಂದಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...