ನವದೆಹಲಿ: ಇಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಆಚರಣೆ ಮಾಡಿದ್ದಾರೆ. ಈ ವೇಳೆ ಭಾಷಣದ ವೇಳೆ ಪ್ರಧಾನಿ ಮೋದಿ ಭಾಷಣದ ವರಸೆ ಬದಲಾಯಿಸಿದ್ದಾರೆ. ಪ್ರತಿ ಸಲ ಭಾಷಣ ಮಾಡುವಾಗ ಭಾಯಿಯೋ ಔರ್ ಬೆಹನೋ ಎಂದು ಭಾಷಣ ಆರಂಭಿಸುತ್ತಿದ್ದರಯ. ಆದರೆ ಈ ಬಾರಿ ಭಾಷಣದ ಶೈಲಿಯನ್ನೇ ಬದಲಾಯಿಸಿದ್ದಾರೆ.
ಪ್ರತಿ ಬಾರಿ ಭಾಷಣ ಆರಂಭಿಸುವಾಗಲೂ ನೆರೆದಾಗಲೂ ಜನರನ್ನುದ್ದೇಶಿಸಿ ತಮ್ಮ ಭಾಷಣದ ಮೂಲಕವೇ ಹುಮ್ಮಸ್ಸು ತುಂಬುತ್ತಿದ್ದರು. ಆದ್ರೆ ಈ ಬಾರಿಯ ಭಾಷಣದಲ್ಲಿ ಭಾಯಿಯೋ ಔರ್ ಬೆಹೆನೋ ಡೈಲಾಗ್ ಹೋಗಿ ಇದೀಗ ಬದಲಾಗಿದೆ.
ಮೇರೆ ಪ್ಯಾರೆ ಪರಿವಾರ್ ಜನೋ ಎಂದು ತಮ್ಮ ಭಾಷಣ ಮಾಡಿದ್ದಾರೆ. ಅಂದಹಾಗೆ ಪರಿವಾರ್‌ಜನೋ ಅಂದ್ರೆ ಪರಿವಾರದವರೇ ಎಂದರ್ಥ. ಸತತ 10ನೇ ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ.