Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಟುಂಬವನ್ನು ಒಗ್ಗೂಡಿಸುವ ಹಬ್ಬ , ಯುಗಾದಿ : ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರ ವಿಷೇಶ ಲೇಖನ

Facebook
Twitter
Telegram
WhatsApp

 

ಭಾರತೀಯರು ಯುಗಾದಿಯನ್ನು ಹೊಸ ವರ್ಷವೆಂದು ನಂಬಿಕೊಂಡು ಪ್ರತಿವರ್ಷದ ವಸಂತ ಮಾಸವನ್ನು ವರ್ಷದ ಆರಂಭವೆಂದು ಭಾವಿಸುವ, ಸಂಭ್ರಮಿಸುವ ಸಂಪ್ರದಾಯ ಅನೇಕ ವರ್ಷಗಳಿಂದ ನಡೆದುಕೊಂಡುಬಂದಿದೆ.

ಕಲ್ಲು, ಮಣ್ಣು, ಸೂರ್ಯ, ಚಂದ್ರ, ನಕ್ಷತ್ರ,
ಗಿಡ, ಮರಗಳು, ಪ್ರಾಣಿ, ಪಕ್ಷಿ ಹೀಗೆ ಪ್ರಕೃತಿಯ ಆರಾಧನೆ ಮಾಡುವ ಭಾರತೀಯ ಸಂಪ್ರದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೀಗಾಗಿಯೇ ಗಿಡ, ಮರಗಳ ಎಲೆಗಳೆಲ್ಲಾ ಭೂಮಿಗೆ ಬಿದ್ದು ಹೊಸ ಚಿಗುರು ಮೂಡುವ ದಿನಗಳಲ್ಲಿ ಹೊಸ ವರ್ಷಾಚರಣೆಯ ಆರಂಭವೆಂದು ಪ್ರಕೃತಿಯನ್ನು ಪೂಜಿಸುವ ಸಂಪ್ರದಾಯ ದೇಶದ ವಿವಿಧೆಡೆ ಹಲವು ಸ್ವರೂಪಗಳಲ್ಲಿ ಅಂತರ್ಗತವಾಗಿ ರೂಢಿಯಲ್ಲಿದೆ.

ಹಾಗೆ ನೋಡಿದರೆ ಯುಗಾದಿ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಮಾಗಿಯ ಕಾಲದಲ್ಲಿ ಬರುವ ಯುಗಾದಿ ಸಂದರ್ಭದಲ್ಲಿ ರೈತಾಪಿ ವರ್ಗಕ್ಕೆ ಬಿಡುವಿನ ವೇಳೆ ಭೂಮಿಯನ್ನು ಉತ್ತು ಮಳೆಗಾಗಿ ಕಾಯುವ ಸಂದರ್ಭವಾಗಿರುವುದರಿಂದ ಹೊಲಗಳಲ್ಲಿ – ರೈತರಿಗೆ ಯಾವುದೇ ಕೃಷಿ ಚಟುವಟಿಕೆಗಳು ಇರುವುದಿಲ್ಲ. ಕೆಲವು ದಶಕಗಳ ಹಿಂದೆ ಕೃಷಿಯೇ ಮೂಲ ಹಾಗೂ ಬಹುತೇಕ ಕುಟುಂಬಗಳ ಕಸುಬಾಗಿತ್ತು. ಹೀಗಾಗಿ ಯುಗಾದಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಪರಿಪಾಠ ಶತ ಶತಮಾನಗಳಿಂದ ರೂಢಿಯಲ್ಲಿದೆ.

ಜಗತ್ತು ಎಷ್ಟೇ ಆಧುನಿಕತೆಯತ್ತ ನಡೆದರೂ ಕೆಲವು ಸಂಸ್ಕೃತಿ, ಆಚರಣೆಗಳು ಇಂದಿಗೂ ಯಥಾಸ್ಥಿತಿಯಲ್ಲಿ ನಡೆದುಕೊಂಡು ಬರುತ್ತಿರುವುದಕ್ಕೆ ಯುಗಾದಿ ಹಬ್ಬ ಅತ್ಯಂತ ಉತ್ತಮ ಉದಾಹರಣೆಯಾಗಿದೆ. ಯುಗಾದಿ ಸಮಯದಲ್ಲಿ ಬಹುತೇಕರು ತಮ್ಮ ಸ್ವಗ್ರಾಮಕ್ಕೆ ತೆರಳಿ ಕುಟುಂಬದ ಜೊತೆಗೂಡಿ ಆಚರಿಸುವ ಪರಿಪಾಠವಿದೆ. ದೂರದ ಊರುಗಳಿಗೆ ದುಡಿಮೆಗೆ ತೆರಳಿದವರು, ಪರ ಊರುಗಳಲ್ಲಿ ಜೀವನ ಕಟ್ಟಿಕೊಂಡವರು, ಅದೆಷ್ಟೇ ಒತ್ತಡದಲ್ಲಿ ಜೀವಿಸುವ ವ್ಯಕ್ತಿಗಳು ಕೂಡ ಯುಗಾದಿ ಹಬ್ಬಕ್ಕೆ ಹುಟ್ಟೂರಿಗೆ ಆಗಮಿಸುವ ಪರಿಪಾಠವಿದೆ. ದುಡಿಯಲು ಹೋದವರು ಅನ್ಯ ಕಾರ್ಯ ನಿಮಿತ್ತ ಪರ ಊರಿಗೆ ಹೋದವರು ಯುಗಾದಿ ಹಬ್ಬಕ್ಕೆ ಬಾರದೆ ಹೋದಾಗ “ತುಂಬಿದಂತ ಹಬ್ಬದಲ್ಲಿಯೂ ಮಕ್ಕಳು ಮನೆಗೆ ಬರಲಿಲ್ಲ” ಎಂದು ಕುಟುಂಬದ ಹಿರಿಯರು ಅಲವತ್ತುಕೊಳ್ಳುವುದನ್ನು ನಾವು ಕಾಣಬಹುದಾಗಿದೆ.

ಹಿಂದಿನ ಕಾಲದಲ್ಲಿ ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದ ಸಮಾಜದಲ್ಲಿ ಈಗಿನ ಕಾಲದಂತೆ ಪ್ರತಿದಿನವೂ ಮೃಷ್ಟಾನ್ನ ಭೋಜನ, ಹೊಸ ಬಟ್ಟೆಗಳನ್ನು ಖರೀದಿಸುವ ಶಕ್ತಿ ಜನರಲ್ಲಿ ಇರಲಿಲ್ಲ. ಆದರೆ ಯುಗಾದಿ ಹಬ್ಬಕ್ಕೆ ಮಾತ್ರ ಕಡ್ಡಾಯವಾಗಿ ಮನೆಮಂದಿಗೆಲ್ಲಾ ಹೊಸ ಬಟ್ಟೆ ಖರೀದಿಸುವ, ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿ ಮನೆಯ ಸದಸ್ಯರೆಲ್ಲ ಒಗ್ಗೂಡಿ ಉಣ್ಣುವ, ಬಡತನ, ಕಷ್ಟಗಳನ್ನೆಲ್ಲಾ ಮರೆತು ಮೂರ್ನಾಲ್ಕು ದಿನ ಸಂಭ್ರಮಿಸುವ ಅವಕಾಶ ಒದಗಿ ಬರುತ್ತಿದ್ದುದೆ ಯುಗಾದಿ ಸಂದರ್ಭದಲ್ಲಿ.

ಗ್ರಾಮೀಣ ಭಾಗದ ಕೃಷಿ ಕುಟುಂಬಗಳು ಯುಗಾದಿ ಹಬ್ಬದ ಆಚರಣೆಗಾಗಿ ವರ್ಷವಿಡಿ ಅಲ್ಪ-ಸ್ವಲ್ಪ ದವಸ, ಧಾನ್ಯಗಳನ್ನು, ಬೆಳೆ ಮಾರಿ ಬಂದ ಅಲ್ಪ ಹಣವನ್ನು ಯುಗಾದಿ ಹಬ್ಬಕ್ಕೆಂದು ಗಂಟು ಕಟ್ಟಿಟ್ಟು ವರ್ಷವೆಲ್ಲಾ ಜತನದಿಂದ ಕಾಪಾಡುವ ಅನಿವಾರ್ಯತೆಯನ್ನು ನೆನೆದಾಗ ಯುಗಾದಿ ಆಚರಣೆಯ ಬಗ್ಗೆ ಜನರಲ್ಲಿ ಒಡಮೂಡಿದ್ದ “ಅನಿವಾರ್ಯತೆಯ” ಅರಿವು ಆಧುನಿಕ ಸಮಾಜಕ್ಕೆ ಅರ್ಥವಾಗುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ದುಡಿಮೆ, ಹಣ ಗಳಿಕೆಗೆ ಹಲವು ದಾರಿಗಳಿವೆ. ಬೇಕಾದ ವಸ್ತು, ವಸ್ತ್ರ, ಆಹಾರಗಳನ್ನು ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿ ಅರ್ಧ ಗಂಟೆಯಲ್ಲಿ ಎಲ್ಲವನ್ನು ಪಡೆದು ವೈಭೋಗಿಸುವ ಪ್ರವೃತ್ತಿ ಆರಂಭಗೊಂಡಿದೆ. ಆದರೆ, ಕೆಲವು ವರ್ಷಗಳ ಹಿಂದೆ ಬಟ್ಟೆ ವಸ್ತ್ರ ಖರೀದಿಸುತ್ತಿದ್ದುದು ವರ್ಷಕ್ಕೊಮ್ಮೆ ಮಾತ್ರ ಅದು ಯುಗಾದಿಯ ಸಂದರ್ಭದಲ್ಲಿ !

ಕಾಲ ಬದಲಾಗಿದೆ. ಆದರೆ ಮನುಷ್ಯ ಸಂಬಂಧಗಳು, ಸಂಕಟಗಳು ಹಾಗೆಯೇ ಮುಂದುವರಿಸಿಕೊಂಡು ಬರುತ್ತಿವೆ.
ಸುಃಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎನ್ನುವ ಸಂದೇಶವನ್ನು ಸಾರುವ ಉದ್ದೇಶದಿಂದ ಯುಗಾದಿಹಬ್ಬದ ಮೊದಲ ದಿನ ಬೇವು-ಬೆಲ್ಲ ಸವಿಯುವ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡು ಬರುತ್ತಿದೆ. ಮನುಷ್ಯನ ಆರ್ಥಿಕ ಸ್ಥಿತಿಗತಿ, ಅಧಿಕಾರದ ಸ್ಥಾನಮಾನ ಯಾವುದೇ ಸ್ತರದಲ್ಲಿರಲಿ, ಸುಃಖ ದುಃಖಗಳು ಮಾತ್ರ ಯಾರನ್ನೂ ಬಿಟ್ಟಿಲ್ಲ. ಹೀಗಾಗಿಯೇ ಎಲ್ಲರೂ ಬೇವು-ಬೆಲ್ಲದ ರುಚಿಯನ್ನು ಅನುಭವಿಸಲೇ ಬೇಕು, ಇದು ಪ್ರಕೃತಿಯ ನಿಯಮ.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!