ದಕ್ಷಿಣ ಕನ್ನಡ: ಯೂಟ್ಯೂಬ್ ನಲ್ಲಿ ಸಾಕಷ್ಟು ಸೆನ್ಸೇಷನ್ ಸೃಷ್ಟಿಸಿದ್ದಂತ ಯೂಟ್ಯೂಬರ್ ಸಮೀರ್ ಎಂಡಿ ಈಗ ರಿಲ್ಯಾಕ್ಸ್ ಮೂಡಲ್ಲಿದ್ದಾರೆ. ಯಾಕಂದ್ರೆ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಬಂಧನ ಭೀತಿಯಲ್ಲಿದ್ದ ಸಮೀರ್ ಗೆ ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯವೂ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. ಈ ಮೂಲಕ ಪೊಲೀಸರ ಬಂಧನದಿಂದ ಮುಕ್ತಿ ಪಡೆದಿದ್ದಾರೆ.
ಸಮೀರ್ ಜಾಮೀನು ಆದೇಶದ ಪ್ರತಿ ಪಡೆದು ಪೊಲೀಸರ ವಿಚಾರಣೆಗೆ ಹಾಜರಾಗಬಹುದು. ಆದರೆ ಆ ಸಮಯದಲ್ಲಿ ಬಂಧಿಸುವಂತೆ ಇಲ್ಲ. ಸಮೀರ್ ಕೂಡ ವಿಚಾರಣೆಗೆ ಸಹಕಾರ ನೀಡಬೇಕು. ಇನ್ನು ಸಮೀರ್ ಗೆ ಜಾಮೀನು ನೀಡುವುದಕ್ಕೆ ಕೋರ್ಟ್ ಗೆ ಸಮೀರ್ ಏನೆಲ್ಲಾ ನೀಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಸಮೀರ್ 75 ಸಾವಿರದ ಬಾಂಡ್ ನೀಡಬೇಕು. ಮತ್ತೆ ಅದೇ ರೀತಿಯಾದಂತ ತಪ್ಪನ್ನ ಮಾಡಬಾರದು. ಸಮೀರ್ ಎಲ್ಲಿಗೋ ಹೋಗಬಾರದು ಅಂದ್ರೆ ತಪ್ಪಿಸಿಕೊಳ್ಳಬಾರದು. ಯಾವುದೇ ರೀತಿಯಲ್ಲೂ ಸಾಕ್ಷಿಗಳನ್ನು ತಿರುಚಬಾರದು. ಪ್ರಾಸಿಕ್ಯೂಷನ್ ಸಾಕ್ಷಿಯನ್ನು ತಿರುಚಬಾರದು. ತನಿಖಾಧಿಕಾರಿಗಳು ಕರೆದಾಗ ತನಿಖೆಗೆ ಹಾಜರಾಗಬೇಕು, ಸಹಕಾರ ನೀಡಬೇಕು. ನಿಗದಿತ ಸಂದರ್ಭದಲ್ಲಿ ಕೋರ್ಟ್ ಗೆ ಹಾಜರಾಗಬೇಕು ಎಂಬ ಒಂದಷ್ಟು ಷರತ್ತುಗಳ ಆಧಾರದ ಮೇಲೆ ಜಾಮೀನನ್ನು ಮಂಜೂರು ಮಾಡಲಾಗಿದೆ.
ಸಮೀರ್ ಯೂಟ್ಯೂಬ್ ಮೂಲಕ ಒಂದಷ್ಟು ರಿಸರ್ಚ್ ವಿಚಾರಗಳನ್ನ ಕೆದಕುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಸೌಜನ್ಯ ಕೊ*ಲೆ ಹಾಗೂ ಮರ್ಡ*ರ್ ಕೇಸ್ ಬಗ್ಗೆ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದರು. ಜನರ ಸಪೋರ್ಟ್ ಸಿಗುತ್ತಾ ಹೋದಂತೆ ಸೌಜನ್ಯ ಕೊ*ಲೆ ಕೇಸಿನ ನ್ಯಾಯಕ್ಕಾಗಿ ಹೋರಾಟ ಕೂಡ ಮಾಡಲು ಶುರು ಮಾಡಿದ್ದರು.

