ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಬಿಜೆಪಿ.ಜಿಲ್ಲಾಧ್ಯಕ್ಷ ಎ. ಮುರಳಿ

2 Min Read

 

ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,ಸುದ್ದಿಒನ್, (ಅ.03): ರಕ್ತದಾನದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಪ್ರಾಣ ಉಳಿಸಬಹುದು. ಅದಕ್ಕಾಗಿ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕೆಂದು ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ತಿಳಿಸಿದರು.

ಪ್ರಧಾನಿ ಮೋದಿರವರ ಜನ್ಮದಿನದ ಅಂಗವಾಗಿ ಸೆ.17 ರಿಂದ ಅ.2 ರವರೆಗೆ ಹಮ್ಮಿಕೊಳ್ಳಲಾಗಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ಬಿಜೆಪಿ.ಯುವ ಮೋರ್ಚಾ ವತಿಯಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ರಕ್ತದಾನದಿಂದ ನಿಶ್ಯಕ್ತಿಯಾಗುತ್ತದೆಂಬ ತಪ್ಪು ಕಲ್ಪನೆ ಸರಿಯಲ್ಲ. ನಿರಂತರ ರಕ್ತದಾನಕ್ಕೆ ಯುವಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಕಳೆದ ಎರಡು ವರ್ಷಗಳಿಂದ ಕೋರೋನಾ ಸಂದರ್ಭದಲ್ಲಿ ರಕ್ತಕ್ಕೆ ಕೊರೆಯಾಗಿತ್ತು. ಈಗ ಡೆಂಗ್ಯು ಜಾಸ್ತಿಯಾಗುತ್ತಿರುವುದರಿಂದ ರಕ್ತದ ಅವಶ್ಯಕತೆಯಿದ್ದು, ಹೆಚ್ಚು ಜನ ರಕ್ತದಾನಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.

ಯುವ ಮುಖಂಡ ಡಾ.ಸಿದ್ದಾರ್ಥ ಮಾತನಾಡಿ ಪ್ರಧಾನಿ ನರೇಂದ್ರಮೋದಿರವರ ಸೇವಾ ಮನೋಭಾವನೆ, ಆತ್ಮನಿರ್ಭರದ ಆಧಾರದ ಮೇಲೆ ಕಳೆದ ಹದಿನೈದು ದಿನಗಳಿಂದ ದೇಶಾದ್ಯಂತ ಸೇವಾ ಪಾಕ್ಷಿಕ ನಡೆಯುತ್ತಿದೆ. ಪ್ರತಿ ಮಂಡಲ ಜಿಲ್ಲಾ ಘಟಕದಿಂದ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ಸಾಗುತ್ತಿದೆ. ರಕ್ತದಾನದಿಂದ ದೇಹದಲ್ಲಿ ಶಕ್ತಿ ಕುಂದುವುದಿಲ್ಲ ಎನ್ನುವ ಜಾಗೃತಿಯನ್ನು ಯುವಕರಲ್ಲಿ ಮೂಡಿಸಬೇಕು. ಅಘಘಾತ, ಹೆರಿಗೆ, ಆಪರೇಷನ್ ಸಂದರ್ಭಗಳಲ್ಲಿ ರಕ್ತಕ್ಕೆ ಹೆಚ್ಚಿನ ಬೇಡಿಕೆಯಿರುವುದರಿಂದ ರಕ್ತದಾನಕ್ಕೆ ಎಲ್ಲರೂ ಮನಸ್ಸು ಮಾಡಬೇಕೆಂದು ವಿನಂತಿಸಿದರು.

ಭೀಮಸಮುದ್ರದ ಜಿ.ಎಸ್.ಅನಿತ್‍ಕುಮಾರ್ ಮಾತನಾಡುತ್ತ ಒಬ್ಬರು ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಯುತ್ತದೆ. ಕಳೆದ ಎಂಟು ವರ್ಷಗಳಿಂದಲೂ ದೇಶದ ಪ್ರಧಾನಿ ಮೋದಿರವರು ಜನಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡಬೇಕೆಂಬುದೇ ಪಕ್ಷದ ಉದ್ದೇಶ ಎಂದು ಹೇಳಿದರು.

ಬಿಜೆಪಿ.ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಮಾತನಾಡಿ ರಕ್ತದಾನ ಶ್ರೇಷ್ಟದಾನ. ಆದ್ದರಿಂದ ಹೆಚ್ಚು ಹೆಚ್ಚು ಯುವಕರು ರಕ್ತದಾನ ಮಾಡಬೇಕು. ಪ್ರಧಾನಿ ಮೋದಿರವರ ಹುಟ್ಟುಹಬ್ಬದ ನಿಮಿತ್ತ ಹದಿನೈದು ದಿನಗಳ ಕಾಲ ಜಿಲ್ಲೆಯಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದರು.

ಬಿಜೆಪಿ.ಯುವ ಮೋರ್ಚಾ ಅಧ್ಯಕ್ಷ ಶ್ರೀರಾಮು ಕೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಉಪಾಧ್ಯಕ್ಷ ಸಂಪತ್, ಕೃಷ್ಣ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ರೀಮತಿ ಶೈಲಜಾರೆಡ್ಡಿ, ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್, ಗೀತಮ್ಮ, ನಗರಾಧ್ಯಕ್ಷೆ ಶೀಲ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಗಳಾದ ಶಾಂತಮ್ಮ, ಗೀತಮ್ಮ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *