ಬೆಂಗಳೂರು: ಸಚಿವ ಈಶ್ವರಪ್ಪ ಅದ್ಯಾವಾಗ ರಾಷ್ಟ್ರಧ್ವಜದ ಬಗ್ಗೆ ಹೇಳಿಕೆ ನೀಡಿದ್ರೋ ಅಂದಿನಿಂದ ಕಾಂಗ್ರೆಸ್ ಗರಂ ಆಗಿದೆ. ಅವರನ್ನ ಸಂಪುಟದಿಂದ ತೆಗೆದು ಹಾಕಬೇಕೆಂದು ಧರಣಿ ನಡೆಸುತ್ತಿದೆ. ಈ ಮಧ್ಯೆ ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಶ್ವರಪ್ಪ ಅವರನ್ನ ವಜಾ ಮಾಡಲು ಒತ್ತಾಯಿಸಿದ್ದಾರೆ. ಈಗ ಸಂವಿಧಾನ, ಧ್ವಜ ಬದಲಾಯಿಸ್ತೀನಿ ಅಂತಾರೆ. ನಾಳೆ ದೇಶದ ಹೆಸರನ್ನೇ ಬದಲಾಯಿಸ್ತಾರೆ. ನಿಮ್ಮದು ದೇಶಭಕ್ತ ಪಕ್ಷವಾದ್ರೆ ಈಶ್ವರಪ್ಪರನ್ನ ವಜಾ ಮಾಡಿ ಎಂದಿದ್ದಾರೆ.

ಬಿಜೆಪಿಯ ದೇಶಭಕ್ತಿ ಏನಿದ್ರು ಚುನಾವಣೆಗೆ ಮಾತ್ರ ಸೀಮಿತವಾಗಿದೆ. ನಿಮ್ಮದು ದೇಶಭಕ್ತ ಪಕ್ಷವಾದ್ರೆ ಈಸ್ವರಪ್ಪರನ್ನ ವಜಾ ಮಾಡಿ. ಅಸೆಂಬ್ಲಿ ನಡೆಯುವ ತನಕ ಅಹೋರಾತ್ರಿ ಧರಣಿ ಮಾಡ್ತೇವೆ. ಒಂದು ವೇಳೆ ಅಸೆಂಬ್ಲಿ ಮುಂದೂಡಿದ್ರೆ ನಾವೂ ಜನರ ಬಳಿ ಹೋಗ್ತೀವಿ. ಸಂವಿಧಾನಕ್ಕೆ ಗೌರವವಿಸಿದವರು ಮಂತ್ರಿಯಾಗಬಾರದು ಎಂದು ಒತ್ತಾಯ ಹಾಕಿದ್ದಾರೆ.

