ದೆಹಲಿಗೆ ಆಯ್ಕೆ ಆದ್ರೂ ಅತ್ಯಂತ ಕಿರಿಯ ಸಿಎಂ : ಅತಿಶಿ ಹಿನ್ನೆಲೆ ಏನು..?

ನವದೆಹಲಿ: ಜೈಲಿನಿಂದ ಹೊರ ಬಂದ ಮೇಲೆ ಅರವಿಂದ್ ಕೇಜ್ರಿವಾಲ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ತಮ್ಮದೇ ಪಕ್ಷದಿಂದ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಸಿಎಂ ರೇಸ್ ನಲ್ಲಿ ಹಲವರು ಇದ್ದರು ಅತಿ ಕಿರಿಯ ವಯಸ್ಸಿನ ಅತಿಶಿಗೆ ಆಪ್ ಸರ್ಕಾರ ಮನ್ನಣೆ ಹಾಕಿದೆ. ಕೇಜ್ರಿವಾಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅತಿಶಿ ಪದಗ್ರಹಣಕ್ಕೆ ದಿನಾಂಕ ನಿಗಧಿ ಮಾಡಲಾಗುತ್ತದೆ.

ಅಷ್ಟಕ್ಕೂ ಕೇಜ್ರಿವಾಲ್ ಅತಿಶಿಗೆ ಮಣೆ ಹಾಕಿದ್ದೇಕೆ..? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡುವುದಾದರೆ, ಇವರು ದೆಹಲು ವಿಶ್ವವಿದ್ಯಾಲಯದ ಪ್ರೊಫೆಸರ್ ಗಳಾದಾ ವಿಜಯ್ ಸಿಂಗ್ ಹಾಗೂ ತೃಪ್ತಿವಹಿ ದಂಪತಿಯ ಮಗಳು. 2001ರಲ್ಲಿ ಪದವಿಯನ್ನು ಮುಗಿಸಿದರು‌. ಮುಂದಿನ ಅಧ್ಯಯನಕ್ಕಾಗಿ ಆಕ್ಸಫರ್ಡ್ ಯೂನಿವರ್ಸಿಟಿ ಕೂಡ ಸೇರಿದ್ದರು. ರಾಜಕೀಯಕ್ಕೆ ಬರುವ ಮುನ್ನ ಅತಿಶಿ, ಆಂಧ್ರಪ್ರದೇಶದ ರಿಶಿ ವೆಲ್ಲಿ ಶಾಲೆಯ ಇಂಗ್ಲಿಷ್ ಹಾಗೂ ಇತೊಹಾಸದ ಪಾಠ ಮಾಡುತ್ತಿದ್ದರು.

ಇವರ ಪೂರ್ತಿ ಹೆಸರು ಅತಿಶಿ ಮರ್ಲೇನಾ ಆಗಿತ್ತು. ಮಾರ್ಕ್ಸ್ ಮತ್ತು ಲೆನಿನ್ ಹೆಸರಿನಿಂದ ಆಯ್ದ ಹೆಸರನ್ನು ಅವರ ತಂದೆಯವರು ಇಟ್ಟಿದ್ದರು. ಆದರೆ ಅದು ಕ್ರಿಶ್ಚಿಯನ್ ಹೆಸರನ್ನು ಸೂಚಿಸುತ್ತದೆ ಎಂಬ ಕಾರಣಕ್ಕೆ 2019ರ ಲೋಕಸಭಾ ಚುನಾವಣೆಯ ವೇಳೆ ಅತಿಶಿ ಎಂಬುದನ್ನಷ್ಟೇ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಉಳಿಸಿಕೊಂಡರು. ಆರಂಭದಿಂದಾನೂ ಅತಿಶಿ, ಆಪ್ ಪಕ್ಷದಿಂದಾನೇ ಗುರುತಿಸಿಕೊಂಡವರು. 2015ರಲ್ಲಿ ಆಪ್ ಮಧ್ಯಪ್ರದೇಶದಲ್ಲಿ ನೀರಿಗಾಗಿ ನಡೆಸಿದ ಉಪವಾಸದಲ್ಲಿ ಪಾಲ್ಗೊಂಡರು‌ 2019ರಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡರು. 2020ರಲ್ಲಿ ಕಲ್ಕಜಿ ಕ್ಷೇತ್ರದಿಂದ ಗೆದ್ದು ದೆಹಲಿ ವಿಧಾನಸಭೆಯನ್ನು ಪ್ರವೇಶಿಸಿದರು. ಬಳಿಕ ಆಪ್ ಅತಿಶಿ ಅವರನ್ನು ಗೋವಾ ವಿಭಾಗದ ಇನ್ಚಾರ್ಜ್ ಆಗಿ ನೇಮಿಸಿತ್ತು. ಇದೀಗ ದೆಹಲಿಯ ಸಿಎಂ ಆಗುವ ಅದೃಷ್ಟ ಹುಡುಕಿ ಬಂದಿದೆ. ಅದರಲ್ಲೂ ಅತಿ ಚಿಕ್ಕ ವಯಸ್ಸಿಗೆ ಎಂಬುದು ಹೆಮ್ಮೆಯ ಸಂಗತಿ.

Share This Article
Leave a Comment

Leave a Reply

Your email address will not be published. Required fields are marked *