ಬೆಂಗಳೂರು: ಬಳ್ಳಾರಿಯ ಬಿಜೆಪಿ ಎಂಪಿ ದೇವೇಂದ್ರಪ್ಪ ಮಗ ರಂಗನಾಥ್ ವಿರುದ್ಧ ಯುವತಿಗೆ ಮೋಸ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯುವತಿ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದು, 2022ರಲ್ಲಿ ರಂಗನಾಥ್ ಸ್ನೇಹಿತರ ಮೂಲಕ ಪರಿಚಯವಾಗಿದ್ದರು. ಫೋನ್ ಮಾಡಿ ಮಾತನಾಡುತ್ತಿದ್ದರು. ಕೆಲ ದಿನಗಳ ಬಳಿಕ ನಾನು ನಿನ್ನನ್ನು ಪ್ರೀತಿ ಮಾಡುತ್ತಾ ಇದ್ದೀನಿ. ಮದುವೆಯಾಗುತ್ತೀನಿ ಎಂದು ನಂಬಿಸಿದ್ದರು. ಆದರೆ ದಿಕಳೆದಂತೆ ನನ್ನ ಜೊತೆಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಕೆಯ ದೂರಿಗೆ ಪ್ರತಿಯಾಗಿ ರಂಗನಾಥ್ ಕೂಡ ದೂರು ದಾಖಲಿಸಿದ್ದು, ಈಕೆ ನನಗೆ ಹದಿನೈದು ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನನ್ನ ಸ್ನೇಹಿತ ಕಲ್ಲೇಶ್ ಕಡೆಯಿಂದ ಭೇಟಿಯಾಗಿದ್ದು, ಆಕೆ ನನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ನಾನು ಆಗುವುದಿಲ್ಲ ಎಂದು ಹೇಳಿದ್ದೆ. ಆದರೆ ಒಂದು ದಿನ ನನಗೆ ಜಾತಿ ನಿಂದನೆ ಕೂಡ ಮಾಡಿದ್ದಾರೆ. ಬಳಿಕ ಜೊತೆಗಿರುವ ಫೋಟೋಗಳನ್ನು ನನ್ನ ಪತ್ನಿಗೆ ಕಳುಹಿಸುತ್ತೀನಿ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಅದಾದ ಮೇಲೂ ಹಣದ ಬೇಡಿಕೆ ಇಟ್ಟಿದ್ದಾರೆ. ಜಾತಿನಿಂದನೆ ಹಾಗೂ ಕಿರುಕುಳ ನೀಡಿರುವ ಶ್ರೀನಿವಾಸ್ ಹಾಗೂ ಆ ಯುವತಿಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ನೀಡಿದ್ದಾರೆ.
ಈ ಸಂಬಂಧ ಸಂಸದ ದೇವೇಂದ್ರಪ್ಪ ಮಾತನಾಡಿ, ಇದಕ್ಕೆ ಉತ್ತರ ಕೊಡುವುದಿಲ್ಲ. ನಿನಗೆ ಅನ್ಯಾಯವಾಗಿದ್ದರೆ ನೀನು ಕಾನೂನು ಪ್ರಕಾರ ಹೋಗು. ತಪ್ಪು ಏನಾಗಿದೆ ನನಗೆ ಅರಿವಿಲ್ಲ. ಕೋರ್ಟ್ ಹೋಗಲಿ. ಒಂದು ಹೆಣ್ಣು ಆಪಾದನೆ ಮಾಡುತ್ತಿದ್ದಾಳೆ ಎಂದರೆ ಅದನ್ನು ಎದುರಿಸಲು ಅವನು ರೆಡಿಯಾಗಲಿ. ಆದರೆ ಅವಳು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಹೇಳಿದೆ. ಕಳೆದ ಆರೇಳು ತಿಂಗಳಿನಿಂದ ಅವಳಿಂದ ರೋಸೆದ್ದು ಹೋಗಿದ್ದೀನಿ ಎಂದ ಎಂದು ಸಂಸದ ದೇವೇಂದ್ರಪ್ಪ ಹೇಳಿದ್ದಾರೆ.