Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಮಾಜಿಕ ಜಾಲತಾಣಗಳಿಂದ ಯುವ ಜನತೆ ಎಚ್ಚರಿಕೆಯಿಂದಿರಿ : ಎನ್. ಅರುಣ್‍ಕುಮಾರ್

Facebook
Twitter
Telegram
WhatsApp

 

ಸುದ್ದಿಒನ್,  ಚಿತ್ರದುರ್ಗ, ಜುಲೈ 15 : ಸೋಷಿಯಲ್ ಮೀಡಿಯಾ(ಸಾಮಾಜಿಕ ಜಾಲತಾಣ)ಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದ್ದು, ಹಾಗೆಯೇ ಯುವಜನತೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಅಭಿಪ್ರಾಯ ಪಟ್ಟರು.

ದಮ್ಮಾ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಹದಿಹರೆಯ ಬಾಲಕಿಯರ ಜಾಗೃತಿ ಹಾಗೂ ಸಾಮಾಜಿಕ ಜಾಲತಾಣಗಳಿಂದ ಯುವ ಜನತೆ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳು ಸಮಾಜಕ್ಕೆ ಪೂರಕವೂ ಇದೆ ಮತ್ತು ಮಾರಕವಾಗಿಯೂ ಇದೆ. ಆದ್ದರಿಂದ ವಿದ್ಯಾರ್ಥಿ ಯುವ ಜನರು ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್‍ಮಾಡುವಂತಹ ಯುವಜನರು ಬಹಳಷ್ಟು ಸಂದರ್ಭಗಳಲ್ಲಿ ಅವಗಢಕ್ಕೆ ಒಳಗಾಗುವ ಸಂದರ್ಭಗಳೇ ಹೆಚ್ಚಾಗಿವೆ. ಅಂತಹ ಘಟನೆಗಳನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ. ವಾಟ್ಸ್‍ಅಪ್ ಮತ್ತು ಫೇಸ್‍ಬುಕ್‍ಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ಜೀವ ಕಳೆದುಕೊಂಡವರು ಮತ್ತು ಕುಟುಂಬವನ್ನು ಬೀದಿಗೆ ತಂದವರ ಬಗ್ಗೆಯೂ ನೋಡುತ್ತಿದ್ದೇವೆ. ಹಾಗೆಯೇ ಆಕ್ರೋಷ ಭರಿತರಾಗಿ ಜೀವ ತೆಗೆದಂತವರು ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗಿ ಸೆರೆವಾಸದಲ್ಲಿರುವುದನ್ನು ನೋಡುತ್ತಿದ್ದೇವೆ. ಆದ್ದರಿಂದ ಯುವ ಜನತೆ ರೀಲ್ಸ್‍ಗಳನ್ನು ಮತ್ತು ವಾಟ್ಸಪ್ ಮೆಸೇಜ್‍ಗಳನ್ನು ಕಳುಹಿಸುವಾಗ ಎಚ್ಚರಿಕೆಯಿಂದ ನಡೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳನ್ನು ಅತ್ಯುತ್ತಮ ಕಾರ್ಯಗಳಿಗೆ ಬಳಕೆಮಾಡಿಕೊಳ್ಳಲು ಅವಕಾಶಗಳಿವೆ. ರೀಲ್ಸ್ ಮಾಡುವಾಗ ಪರಿಸರ ಸಂರಕ್ಷಣೆ, ನೀರಿನ ರಕ್ಷಣೆ, ಸೇರಿದಂತೆ ಶಿಕ್ಷಣದಲ್ಲಿನ ಸುಧಾರಣೆಗಳನ್ನು ಕುರಿತು ರೀಲ್ಸ್‍ಗಳನ್ನು ಮಾಡುವ ಅವಕಾಶಗಳಿದ್ದು, ಸಾಮಾಜಿಕ ಜಾಲತಾಣಗಳನ್ನು ಜನರ ಜಾಗೃತಿಗಾಗಿ ಬಳಸಿಕೊಳ್ಳುವುದು ಹೇಗೆ ಎಂಬುವುದನ್ನು ಚಿಂತಿಸಿದರೆ ವಿದ್ಯಾರ್ಥಿ ಯುವಜನರು ಕೆಟ್ಟ ಪರಿಣಾಮಗಳನ್ನು ಎದುರಿಸುವುದರಿಂದ ಪಾರಾಗಬಹುದು ಎಂದು ನರೇನಹಳ್ಳಿ ಅರುಣ್‍ಕುಮಾರ್ ಹೇಳಿದರು.

ಕರ್ನಾಟಕ ವಿದ್ಯಾರ್ಥಿ ಯುವಜನ ಸಂಘಟನೆಯ ಅಧ್ಯಕ್ಷ ಸರೋವರ್ ಸೂರ್ಯದೇವ ಮಾತನಾಡಿ, ಸಾಮಾಜಿಕ ಜಾಲತಾಣಗಳು ಸದ್ಬಳಕೆಯಾಗುವುದಕ್ಕಿಂತಲೂ ಹೆಚ್ಚಾಗಿ ದುರ್ಬಳಕೆಯಾಗುತ್ತಿದ್ದು, ಸೋಷಿಯಲ್ ಮೀಡಿಯಾಗಳ ಬೆನ್ನು ಹತ್ತಿ ಹೋದಂತವರು ಕೆಲವೇ ದಿನಗಳಲ್ಲಿ ಭ್ರಮನಿರಸಕ್ಕೆ ಒಳಗಾದವರನ್ನು ಕಾಣಬಹುದಾಗಿದೆ.

2004-05 ರಿಂದ ಆರಂಭಗೊಂಡ ಫೇಸ್‍ಬುಕ್, ವಾಟ್ಸಾಪ್, ಟ್ವಿಟ್ಟರ್‍ಗಳನ್ನು ಇವತ್ತು ಜಗತ್ತಿನಾದ್ಯಂತ ಲಕ್ಷಾಂತರ ಬಿಲಿನ್ ಜನರನ್ನು ತಲುಪಿದ್ದು, ಇದೊಂದು ಆರ್ಥಿಕ ವಹಿವಾಟಿಗೆ ಪ್ರಮುಖ ಕೇಂದ್ರವಾಗಿದೆ. ಆದ್ದರಿಂದ ಇಂದಿನ ಯುವ ಜನತೆ ಸಾಮಾಜಿಕ ಬಳಕೆಮಾಡುವಾಗ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ನುಡಿದರು.

ಹದಿಹರೆಯದ ಕಿಶೋರಿಯರು ಮತ್ತು ಯುವಜನರ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಅನ್ನಪೂರ್ಣ ವಹಿಸಿದ್ದರು. ಎಂ.ಕೆ.ಹಟ್ಟಿ ಉಪಾಧ್ಯಕ್ಷರು,  ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಆರ್.ವಿಶ್ವಸಾಗರ್, ಅರಣ್ಯ ಸಾಗರ್, ಬಿಬಿಜಾನ್, ನಾಗರತ್ನ, ಕುಮಾರ್, ಮಮತಾ, ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!