ನವದೆಹಲಿ: ಜಿಎಸ್ಟಿ ವಿಚಾರದಲ್ಲಿ ಜಾರಿಯಾದಾಗಿನಿಂದಲೂ ಒಂದಷ್ಟು ಗೊಂದಲಗಳಿವೆ. ಇದೀಗ ಕಾನೂನು ರೂಪಿಸುವ ವಿಚಾರದಲ್ಲಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದಿದೆ.
ಇಂದು ಜಿಎಸ್ಟಿ ಕಾನೂನು ರೂಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಕೋರ್ಟ್, ಜಿಎಸ್ಟಿ ಕುರಿತು ಕಾನೂನು ರೂಪಿಸಲು ರಾಜ್ಯ ಮತ್ತು ಕೇಂದ್ರ ಎರಡಕ್ಕೂ ಸಮಾನ ಅಧಿಕಾರವಿದೆ ಎಂದಿದೆ. ಏಕಕಾಲದಲ್ಲಿ ಅಧಿಕಾರವನ್ನು ಹೊಂದಿರುವ ಕಾರಣ ಸಾಧ್ಯವಾದರೆ ಪರಿಹಾರವನ್ನು ಸಾಧಿಸಬಹುದು. ಜಿಎಸ್ಟಿ ಕೌನ್ಸಿಲ್ ಸಾಮರಸ್ಯದ ಕೆಲಸ ಮಾಡಬೇಕೆಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಜಿಎಸ್‌ಟಿ ವಿಷಯಗಳಲ್ಲಿ ಸಮಾನವಾಗಿ ಕಾನೂನು ಮಾಡಬಹುದು. ಜಿಎಸ್‌ಟಿ ಕೌನ್ಸಿಲ್‌ನ ಎಲ್ಲಾ ಶಿಫಾರಸುಗಳು ರಾಜ್ಯ ಶಾಸಕಾಂಗದ ಮೇಲೆ ವಿಧಿಸಲು ಬದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆರ್ಟಿಕಲ್ 246A ಪ್ರಕಾರ ಸಂಸತ್ತು ಮತ್ತು ರಾಜ್ಯ ಶಾಸಕಾಂಗ ಎರಡೂ ತೆರಿಗೆಯ ವಿಷಯಗಳ ಮೇಲೆ ಶಾಸನ ಮಾಡಲು ಸಮಾನ ಅಧಿಕಾರವನ್ನು ಹೊಂದಿವೆ ಎಂದು ನ್ಯಾಯಾಲಯವು ಸೂಚನೆ ನೀಡಿದೆ.